ಬ್ಯಾರಿಂಗ್ಟೋನಿಯಾ ಅಕುಟಾಂಗುಲಾ (ಎಲ್.) ಗೇರ್ಟ್ನ್

ಕನ್ನಡದ ಹೆಸರು : ಧಾತ್ರಿಪಲ
ಸಾಮಾನ್ಯ ಹೆಸರು : ಫ್ರೆಶ್ ವಾಟರ್ ಮ್ಯಾನ್ಗ್ರೋವ್, ಮ್ಯಾಂಗೊ ಪೈನ್
ಕುಟುಂಬದ ಹೆಸರು : ಲೆಸಿಥಿಡೇಸಿ
ವೈಜ್ಞಾನಿಕ ಹೆಸರು : ಬ್ಯಾರಿಂಗ್ಟೋನಿಯಾ ಅಕುಟಾಂಗುಲಾ (ಎಲ್.) ಗೇರ್ಟ್ನ್
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಮಾರ್ಚ್ - ಮೇ
ಹಣ್ಣಾಗುವ ಅವಧಿ: ಮಾರ್ಚ್ - ಮೇ
ಮೂಲ: ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ

ಉಪಯೋಗಗಳು

ಈ ಸಸ್ಯದ ಮೇಲಿನ ಸಂಶೋಧನೆಯ ಪ್ರಕಾರ, ಇದರ (ಬೀಜದಸಾರ) ಆಂಟಿಟ್ಯೂಮರ್, ಆಂಟಿ ಬಯಾಟಿಕ್ ಆಗಿದ್ದು, ಇದು ಹೆಲಿಕೋಬ್ಯಾಕ್ಟರ್ ಪೈಲೋರಿಯಾದ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ, ಆಂಟಿನೋಸೈಸೆಪ್ಟಿವ್ ಚಟುವಟಿಕೆ ಮತ್ತು ಆಂಟಿಫಂಗಲ್ ಗುಣಗಳೂ ಸೇರಿದಂತೆ ಹಲವಾರು ಔಷಧೀಯ ಉಪಯೋಗಗಳನ್ನು ಅದು ವರದಿ ಮಾಡಿದೆ. ಇದರ ತೊಗಟೆ ಬಲವಾದ ಒಪಿಯಾಡ್ ನೋವು ನಿವಾರಕಗಳನ್ನು ಹೊಂದಿರುತ್ತದೆ.

ವಿವರಣೆ

.15 ಮೀ ವರೆಗೆ ಎತ್ತರವಿರುವ ಮಧ್ಯಮ ಗಾತ್ರದ, ನಿತ್ಯಹರಿದ್ವರ್ಣ ಮರ. ಎಲೆಗಳು ಸರಳವಾಗಿರುತ್ತವೆ, ಆಲ್ಟರ್ನೇಟ್ ಆಗಿರುತ್ತವೆ, ಅಂಡಾಕಾರದಿಂದ ಆಯತಾಕಾರದಲ್ಲಿರುತ್ತವೆ, ರೋಮರಹಿತವಾಗಿರುತ್ತವೆ, ಬುಡ ಚೂಪಾಗಿರುತ್ತದೆ ಅಥವಾ ಬೆಣೆಯಾಕಾರದಲ್ಲಿರುತ್ತದೆ, ತುದಿ ಚೂಪಾಗಿರುತ್ತದೆ, ಅಂಚು ನವುರಾಗಿ ಗರಗಸದಂತಿರುತ್ತದೆ. ಪುಷ್ಪಮಂಜರಿಯು ತುದಿಯಲ್ಲಿ ಒಂದು ನೇತಾಡುವ ಹೂಗೊಂಚಲಾಗಿರುತ್ತದೆ. ದ್ವಿಲಿಂಗಿಗಳಾದ ಈ ಹೂಗಳ ಬಣ್ಣ ಕೆಂಪು , ವ್ಯಾಸ 2 ರಿಂದ 3 ಸೆಂ. ಅಂಡಾಕಾರ, ಚತುಷ್ಕೋನದ ಈ ಹಣ್ಣು, 2 ರಿಂದ 6 ಸೆಂ.ಮೀ ಉದ್ದವಿರುತ್ತದೆ, ಮತ್ತು ಇದರಲ್ಲಿ ಒಂದು ಬೀಜವಿರುತ್ತದೆ.