ಬ್ಯಾರಿಂಗ್ಟೋನಿಯಾ ಏಷ್ಯಾಟಿಕಾ (ಎಲ್.) ಕುರ್ಜ್

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಸೀ ಪಾಯಿಸನ್ ಟ್ರೀ, ಫಿಶ್ ಪಾಯಿಸನ್ ಟ್ರೀ
ಕುಟುಂಬದ ಹೆಸರು : ಲೆಸಿಥಿಡೇಸಿ
ವೈಜ್ಞಾನಿಕ ಹೆಸರು : ಬ್ಯಾರಿಂಗ್ಟೋನಿಯಾ ಏಷ್ಯಾಟಿಕಾ (ಎಲ್.) ಕುರ್ಜ್
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರದಲ್ಲಿರುವ ದ್ವೀಪಗಳು

ಉಪಯೋಗಗಳು

.ಅಂಡವಾಯು (ಹರ್ನಿಯ) ಚಿಕಿತ್ಸೆಗಾಗಿ ಎಲೆಗಳ ಕಷಾಯವನ್ನು ಬಳಸಲಾಗುತ್ತದೆ. ಎಲೆಗಳನ್ನು ಬಿಸಿಮಾಡಲಾಗುತ್ತದೆ ಮತ್ತು ಹೊಟ್ಟೆ ನೋವಿಗೆ ಆ ಜಾಗದ ಮೇಲೆ ಹಾಕಲಾಗುತ್ತದೆ. ಸಂಧಿವಾತದ ಪರಿಹಾರಕ್ಕೆ ಮತ್ತು ಹುಣ್ಣುಗಳಿಗೆ ಚಿಕಿತ್ಸೆ ನೀಡಲು ತಾಜಾ ಎಲೆಗಳನ್ನು ತೊಂದರೆ ಇರುವ ಜಾಗದ ಮೇಲೆ ಇರಿಸಲಾಗುತ್ತದೆ. ವಿಷಕಾರಿ ಬೀಜಗಳನ್ನು ಜಂತು ಹುಳುಗಳ ನಿವಾರಣೆಗೆ ಬಳಸಲಾಗುತ್ತದೆ.

ವಿವರಣೆ

.7-20 ಮೀ ಎತ್ತರವಿರುವ, ಚಿಕ್ಕ ಗಾತ್ರದಿಂದ ಮಧ್ಯಮ ಗಾತ್ರದ ಮರ . ತೊಗಟೆ ಸೀಳಿರುತ್ತದೆ. ಎಲೆಗಳು ಸರಳವಾಗಿದ್ದು, ಒಬ್ವೇಟ್ – ಒಬ್ಲಾಂಗ್ , ಆಗಿರುವ ಅವುಗಳ ಉದ್ದ 20-40 ಸೆಂ ಮತ್ತು ಅಗಲ 10-20 ಸೆಂ ಇರುತ್ತವೆ. ಚರ್ಮದಂತಿರುವ ಅವು ರೋಮರಹಿತವಾಗಿರುತ್ತವೆ, ಬುಡ ಕೀಲಿರೂಪದಲ್ಲಿದ್ದು, ತುದಿ ಚೂಪಾಗಿರುತ್ತದೆ ಅಥವಾ ಸಾಮಾನ್ಯವಾಗಿ ದುಂಡಾಗಿರುತ್ತದೆ,ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ತುದಿಯಲ್ಲಿರುವ ಒಂದು ಹೂಗೊಂಚಲಾಗಿರುತ್ತದೆ (ರೇಸಿಮ್). ಬಿಳಿಯ ದಳಗಳು ಮತ್ತು ಕೆಂಪು ತುದಿಯ ಹಲವಾರು ಕೇಸರಗಳನ್ನು ಒಳಗೊಂಡಿರುವ ಈ ಹೂಗಳು ದೊಡ್ಡದಾಗಿರುತ್ತವೆ ಮತ್ತು ಪರಿಮಳಯುಕ್ತವಾಗಿರುತ್ತವೆ.ಸಾಮಾನ್ಯವಾಗಿ ಪಿರಮಿಡ್ ನಂತಿರುವ ಹಣ್ಣು 9-11 ಸೆಂ.ಮೀ. ಇದ್ದು, ನುಣುಪಾದ, ಸ್ಪಾಂಜಿ ಹಾಗೂ ನಾರಿನ ಪೆರಿಕಾರ್ಪ್ ಅನ್ನು ಹೊಂದಿರುತ್ತದೆ. ಬೀಜ 4-5 ಸೆಂ.ಮೀ. ಇರುತ್ತದೆ.