ಬೌಹಿನಿಯಾ ಪರ್ಪ್ಯೂರಿಯಾ ಎಲ್.

ಕನ್ನಡದ ಹೆಸರು : ಬಸವನಪಾದ, ಮಂದಾರ
ಸಾಮಾನ್ಯ ಹೆಸರು : ಕ್ಯಾಮಲ್ ಫೀಟ್ ಟ್ರೀ, ಒಂಟೆ ಕಾಲು ಮರ
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಬೌಹಿನಿಯಾ ಪರ್ಪ್ಯೂರಿಯಾ ಎಲ್.
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಸೆಪ್ಟೆಂಬರ್ - ಫೆಬ್ರವರಿ
ಹಣ್ಣಾಗುವ ಅವಧಿ: ಜನವರಿ - ಏಪ್ರಿಲ್
ಮೂಲ: ದಕ್ಷಿಣ ಚೀನಾ, ಆಗ್ನೇಯ ಏಷ್ಯಾ

ಉಪಯೋಗಗಳು

.ಊತ, ಮೂಗೇಟುಗಳು, ಕೀವುಗುಳ್ಳೆ ಮತ್ತು ಹುಣ್ಣುಗಳ ಚಿಕಿತ್ಸೆಯಲ್ಲಿಯ ಪೌಲ್ಟೀಸ್ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಸಸ್ಯದ ವಿವಿಧ ಭಾಗಗಳನ್ನು ಜ್ವರ ಮತ್ತು ಹೊಟ್ಟೆಯ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಕಷಾಯದಲ್ಲಿ ಬಳಸಲಾಗುತ್ತದೆ, ಜೊತೆಗೆ ಸ್ರಾವನಿರೋಧಕವಾಗಿಯೂ ಬಳಸಲಾಗುತ್ತದೆ. ಭಾರತೀಯ ಸಾಂಪ್ರದಾಯಿಕ ಔಷಧದಲ್ಲಿ, ಎಲೆಗಳನ್ನು ಕೆಮ್ಮು ಚಿಕಿತ್ಸೆಗಾಗಿ ಬಳಸಲಾಗುತ್ತದೆ ಮತ್ತು ತೊಗಟೆಯನ್ನು ಗ್ರಂಥಿಗಳ ಕಾಯಿಲೆಗಳಿಗೆ ಮತ್ತು ವಿಷಗಳಿಗೆ ಒಂದು ಆಂಟಿಡೋಟ್ ಆಗಿಯೂ ಬಳಸಲಾಗುತ್ತದೆ. ಹೂವುಗಳನ್ನು ಉಪ್ಪಿನಕಾಯಿ ಮತ್ತು ಮಸಾಲೆ ಸಾರುಗಳಲ್ಲಿ ಬಳಸಲಾಗುತ್ತದೆ ಮತ್ತು ಇದನ್ನು ಒಂದು ವಿರೇಚಕವೆಂದು ಪರಿಗಣಿಸಲಾಗುತ್ತದೆ.

ವಿವರಣೆ

. ಇದು ಮಧ್ಯಮ ಗಾತ್ರದ, ಅರೆ ನಿತ್ಯಹರಿದ್ವರ್ಣ ಮರವಾಗಿದ್ದು, 10 ಮೀ ವರೆಗೆ ಬೆಳೆಯುತ್ತದೆ. ಎಲೆಗಳು ಸರಳ, ಆಲ್ಟರ್ನೇಟ್ , ಸಬ್-ಆರ್ಬಿಕುಲಾರ್ , ಬೈಲೋಬ್ಡ್ , ತೆಳ್ಳನೆಯ ಚರ್ಮದಂತಿದ್ದು, ರೋಮರಹಿತವಾಗಿರುತ್ತವೆ, ಎಳೆಯದಾಗಿದ್ದಾಗ ಕೆಳಗಿನ ಮೇಲ್ಮೈ ಸ್ವಲ್ಪ ಪ್ಯೂಬಸೆಂಟ್ ಆಗಿರುತ್ತದೆ. ಬುಡ ಸಬ್-ಕಾರ್ಡೇಟ್ ಆಗಿದ್ದು, ತುದಿ ಸ್ವಲ್ಪ ಚೂಪಾಗಿರುತ್ತದ.ಎಲ್ಲೋ ಒಮ್ಮೊಮ್ಮೆ ದುಂಡಾಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿ ಅಥವಾ ತುದಿಯಲ್ಲಿಯ, ರೇಸಿಮ್ ಅಥವಾ ಹೂ ಗೊಂಚಲಾಗಿರುತ್ತದೆ. 5 ದಳಗಳಿರುವ ಗುಲಾಬಿ ಬಣ್ಣದ ಈ ದ್ವಿಲಿಂಗಿ ಹೂಗಳು ಪರಿಮಳಯುಕ್ತವಾಗಿರುತ್ತವೆ., 12 ರಿಂದ 16 ಬೀಜಗಳನ್ನು ಹೊಂದಿರುವ, ಇದರ ಹಣ್ಣು ಒಂದು ಉದ್ದನೆಯ ಬೀಜಕೋಶವಾಗಿದ್ದು, ಅದುಮಿದಂತಿರುತ್ತದೆ. ಸೀಳಿ ಬಾಯಿ ಬಿಟ್ಟ ನಂತರ ಸುರುಳಿ ಸುತ್ತಿಕೊಳ್ಳುತ್ತದೆ.