ಬೌಹಿನಿಯಾ ಟೊಮೆಂಟೋಸಾ ಎಲ್.

ಕನ್ನಡದ ಹೆಸರು : ಕಾಡು ಮಂದಾರ, ವನ ಸಂಪಿಗೆ
ಸಾಮಾನ್ಯ ಹೆಸರು : ,ಹಳದಿ ಬೆಲ್ ಆರ್ಕಿಡ್,ಎಲ್ಲೋ ಬೆಲ್ ಆರ್ಕಿಡ್
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಬೌಹಿನಿಯಾ ಟೊಮೆಂಟೋಸಾ ಎಲ್.
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಡಿಸೆಂಬರ್ - ಮಾರ್ಚ್
ಹಣ್ಣಾಗುವ ಅವಧಿ: ಜನವರಿ - ಜೂನ್
ಮೂಲ: ಉಷ್ಣವಲಯದ ಆಫ್ರಿಕಾ, ಭಾರತ, ಶ್ರೀಲಂಕಾ

ಉಪಯೋಗಗಳು

.ಬೇರಿನ ತೊಗಟೆಯನ್ನು ದೊಡ್ಡ ಕರುಳಿನ ಸಮಸ್ಯೆಗಳಿಗೆ ಆಂತರಿಕ ಔಷಧವಾಗಿ ಬಳಸಲಾಗುತ್ತದೆ, ಅದರ ಹೂವನ್ನು ಭೇದಿ ಮತ್ತು ಅತಿಸಾರಕ್ಕೆ ಪರಿಹಾರವಾಗಿ ಬಳಸಲಾಗುತ್ತದೆ. ಬೇರಿನ ತೊಗಟೆಯ ಕಷಾಯವನ್ನು ಭಾರತದಲ್ಲಿ ವರ್ಮಿಫ್ಯೂಜ್ ಆಗಿ ಬಳಸಲಾಗುತ್ತದೆ ಮತ್ತು ಕಾಂಡದ ತೊಗಟೆಯ ಕಷಾಯವನ್ನು ಬಾಯಿ ಮುಕ್ಕಳಿಸುವ ಒಂದು ಆಸ್ಟ್ರಿಂಜೆಂಟ್ ಆಗಿ ಬಳಸಲಾಗುತ್ತದೆ. ಹಣ್ಣು ಮೂತ್ರವರ್ಧಕ ಎಂದು ಹೇಳಲಾಗುತ್ತದೆ ಮತ್ತು ಭಾರತದಲ್ಲಿ ಬೀಜವನ್ನು ಒಂದು ಟಾನಿಕ್ ಹಾಗೂ ಕಾಮೋತ್ತೇಜಕದ ರೀತಿಯಲ್ಲಿ ಸೇವಿಸಲಾಗುತ್ತದೆ.

ವಿವರಣೆ

8 ಮೀನಷ್ಟು ಎತ್ತರವಿರುವ ನಿತ್ಯಹರಿದ್ವರ್ಣ ಪೊದೆಸಸ್ಯ ಅಥವಾ ಚಿಕ್ಕ ಮರ, ಕಠಿಣ ಹವಾಮಾನದಲ್ಲಿ ಎಲೆಗಳನ್ನು ಉದುರಿಸುತ್ತದೆ. ಎಳೆಯ ಕೊಂಬೆಗಳು ಗ್ಲ್ಯಾಬ್ರಸ್ ನಿಂದ ಪ್ಯೂಬೆಸೆಂಟ್ ಆಗಿರುತ್ತವೆ. ಎಲೆಗಳು ಸರಳ, ಸಬ್-ಆರ್ಬಿಕುಲಾರ್, ಬೈಲೋಬ್ಡ್ , ಕಾಗದದ ರೀತಿ ಇರುತ್ತವೆ , ಕೆಳಗಿನ ಮೇಲ್ಮೈಯ್ ಟೊಮೆಂಟೋಸ್ ಆಗಿದ್ದು, ಮೇಲೆ ರೋಮರಹಿತವಾಗಿರುತ್ತವೆ, ಬುಡ ಕಾರ್ಡೇಟ್ ಆಗಿದ್ದು, ಹಾಲೆಗಳು ತುದಿಯಲ್ಲಿ ದುಂಡಾಗಿರುತ್ತವೆ. ಪುಷ್ಪಮಂಜರಿಯು ಒಂದು ತುದಿಯ (ಟರ್ಮಿನಲ್) ಅಥವಾ ಪಕ್ಕದಲ್ಲಿಯ (ಲ್ಯಾಟರಲ್) ಹೂಗುಚ್ಚವಾಗಿರುತ್ತದೆ (ರೇಸಿಮ್). ಹೂವುಗಳು ಹಳದಿ ಬಣ್ಣದವಾಗಿದ್ದು, 5 ದಳಗಳಿರುತ್ತವೆ. ಹಣ್ಣುಗಳು 8-12 ಬೀಜಗಳಿರುವ, ಕೆಲವೊಮ್ಮೆ ಟೊಮೆಂಟೋಸ್ ಆಗಿರುವ, ಒಂದು ಬಿರಿಯುವ ಉದ್ದನೆಯ ಬೀಜಜಕೋಶವಾಗಿರುತ್ತದೆ.(ಡಿಹಿಸೆಂಟ್ ಪಾಡ್). ಬೀಜಗಳು ಕಪ್ಪು-ಕಂದು ಬಣ್ಣದಲ್ಲಿರುತ್ತವೆ.