ಬ್ಯೂಕಾರ್ನಿಯಾ ರಿಕರ್ವಾಟಾ (ಕೆ.ಕೋಚ್ & ಫಿಂಟೆಲ್ಮ್.) ಲೆಮ್.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಪೋನಿಟೇಲ್ ಪಾಮ್
ಕುಟುಂಬದ ಹೆಸರು : ಆಸ್ಪರಾಗೇಸಿ
ವೈಜ್ಞಾನಿಕ ಹೆಸರು : ಬ್ಯೂಕಾರ್ನಿಯಾ ರಿಕರ್ವಾಟಾ (ಕೆ.ಕೋಚ್ & ಫಿಂಟೆಲ್ಮ್.) ಲೆಮ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತೀವ್ರವಾಗಿ ಅಪಾಯದಲ್ಲಿದೆ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ಮೆಕ್ಸಿಕೋ

ಉಪಯೋಗಗಳು

.ಅವುಗಳನ್ನು ಹುಲ್ಲಿನ ಚಾವಣಿಗೆ, ಪೊರಕೆಗಳು, ಕ್ಯಾಸ್ಕೆಟ್ಗಳು, ಒರಟಾದ ಟೋಪಿಗಳು, ಚಾಪೆಗಳು ಇತ್ಯಾದಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಸ್ಥಳೀಯವಾಗಿ ನಾರನ್ನು ಹಗ್ಗ ಮಾಡಲು ಬಳಸಲಾಗುತ್ತದೆ.

ವಿವರಣೆ

5 ಮೀ ವರೆಗೆ ಬೆಳೆಯುವ ಚಿಕ್ಕ ನಿತ್ಯಹರಿದ್ವರ್ಣ ಮರ. ನೀರು ಶೇಖರಣೆಗಾಗಿ, ಎದ್ದುಕಾಣುವಂತಹ ವಿಸ್ತಾರವಾದ ಪರ್ಣಾಕ್ಷ (ಕಾಡೆಕ್ಸ್) ಇರುತ್ತದೆ. ಆ ಒಂದು ಹಸ್ತದ ರೀತಿಯ ಕಾಂಡ, ಪಟ್ಟಿಯಂತಹ ಸರಳ, ಹಿಂದೆ ಬಾಗಿದ, ಕಾಗದಂತಹ, ಎಲೆಗಳ ಒಂದು ಗುಲಾಬಿಯಂತೆ( ರೋಸೆಟ್) ಜೋಡಿಸಲಾದ ಗುಚ್ಚಗಳನ್ನು ತುದಿಯಲ್ಲಿ (ಟರ್ಮಿನಲ್) ಉತ್ಪಾದಿಸುತ್ತದೆ. ಪುಷ್ಪಮಂಜರಿ ಸಣ್ಣ ಬಿಳಿ ಹೂವುಗಳ ಒಂದು ಹೂ ಗೊಂಚಲಾಗಿರುತ್ತದೆ, ಹೂವು ಬಿಡುವುದು ತುಂಬಾ ಅಪರೂಪ.