ಅಡೆನಾಂಥೆರಾ ಪಾವೊನಿನಾ ಎಲ್.

ಕನ್ನಡದ ಹೆಸರು : ಆನೆ ಗುಲಗಂಜಿ, ಮಂಜುತಿ
ಸಾಮಾನ್ಯ ಹೆಸರು : ರೆಡ್ ಬೀಡ್ ಟ್ರೀ, ಕೆಂಪು ಮಣಿಯ ಮರ
ಕುಟುಂಬದ ಹೆಸರು : ಫ್ಯಾಬೆಸಿ
ವೈಜ್ಞಾನಿಕ ಹೆಸರು : ಅಡೆನಾಂಥೆರಾ ಪಾವೊನಿನಾ ಎಲ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: : ಮಾರ್ಚ್ - ಜೂನ್
ಹಣ್ಣಾಗುವ ಅವಧಿ: ಮೇ - ಆಗಸ್ಟ್
ಮೂಲ: ಚೀನಾ

ಉಪಯೋಗಗಳು

.ಈ ಮರವನ್ನು ಸಾಬೂನು ತಯಾರಿಸಲು ಬಳಸಲಾಗುತ್ತದೆ ಮತ್ತು ಮರದಿಂದ ಕೆಂಪು ವರ್ಣದ್ರವ್ಯವನ್ನು(ಡೈ) ಪಡೆಯಬಹುದು. ಅತ್ಯಂತ ಗಟ್ಟಿಯಾಗಿರುವ ಈ ಮರವನ್ನು ದೋಣಿಗಳನ್ನು ತಯಾರಿಸಲು, ಪೀಠೋಪಕರಣ ತಯಾರಿಕೆಯಲ್ಲಿ ಮತ್ತು ಉರುವಲಾಗಿಯೂ ಬಳಸಲಾಗುತ್ತದೆ. ಇದರ ಚಿಗುರು ಎಲೆಗಳು ಮತ್ತು ತೊಗಟೆಯ ಕಷಾಯವನ್ನು ಅತಿಸಾರದ ಚಿಕಿತ್ಸೆಗೆ ಬಳಸಲಾಗುತ್ತದೆ. ಅಲ್ಲದೆ, ಇದರ ಬೀಜಗಳನ್ನು ಅರೆದು ಉರಿಯೂತದ ಚಿಕಿತ್ಸೆಗೆ ಬಳಸಲಾಗುತ್ತದೆ.

ವಿವರಣೆ

15ಮೀ ಎತ್ತರದವರೆಗೆ ಇರುವ, ಮಧ್ಯಮದಿಂದ ದೊಡ್ಡ ಗಾತ್ರದ ಪತನಶೀಲ ಮರ. ಎಲೆಗಳು ಬೈಪಿನೇಟ್, ಮೊಟ್ಟೆಯಾಕಾರ – ಆಯತಾಕಾರದಲ್ಲಿರುತ್ತವೆ, ಬುಡ ಅಸಮಪಾರ್ಶದ್ದಾಗಿರುತ್ತದೆ ಮತ್ತು ತುದಿ ಮೊಂಡಾಗಿರುತ್ತದೆ, ಮೇಲ್ಭಾಗದಲ್ಲಿ ಮಂದ ಹಸಿರು ಮತ್ತು ಕೆಳಭಾಗದಲ್ಲಿ ನೀಲಿ-ಹಸಿರು ಬಣ್ಣವಿರುತ್ತದೆ. ಕೊಂಬೆಯ ತುದಿಗಳಲ್ಲಿ ಕಿರಿದಾದ ಕದಿರು ಗೊಂಚಲು ತರಹದ ರೇಸಿಮ್‌ಗಳಲ್ಲಿ ಚಿಕ್ಕದಾದ ಹೂಗಳಿರುತ್ತವೆ. ಅವು ಕೆನೆಹಳದಿ ಬಣ್ಣದವಾಗಿದ್ದು, ಪರಿಮಳಯುಕ್ತವಾಗಿರುತ್ತವೆ; ಪ್ರತಿಯೊಂದು ಹೂವೂ ನಕ್ಷತ್ರದ ಆಕಾರದಲ್ಲಿದ್ದು, ಅದರಲ್ಲಿ 5 ದಳಗಳಗಳಿರುತ್ತವೆ. ಬೀಜಕೋಶಗಳು ಉದ್ದ ಮತ್ತು ಕಿರಿದಾಗಿರುತ್ತವೆ, ಬೀಜಗಳ ನಡುವೆ ಸ್ವಲ್ಪ ಅಮುಕಿದಂತಿರುತ್ತದೆ, ಗಾಢ ಕಂದು ಬಣ್ಣವಿರುವ ಇದು, ಮಾಗಿದ ನಂತರ ಕಪ್ಪು ಬಣ್ಣಕ್ಕೆ ತಿರುಗುತ್ತದೆ, ಒಳಗಿನ 8-12, ಆಕರ್ಷಕವಾದ, ಲೆನ್ಸ್ ಆಕಾರದ, ಗಟ್ಟಿ-ಕವಚದ, ಎದ್ದುಕಾಣುವ ಕಡುಗೆಂಪು ಬಣ್ಣದ ಬೀಜಗಳನ್ನು ತೋರಿಸಲು ಅವು ಬಿರಿದಾಗ, ಬಾಗಿ, ತಿರುಚುತ್ತವೆ. .