ಬೊಂಬಾಕ್ಸ್ ಸೀಬಾ ಎಲ್.

ಕನ್ನಡದ ಹೆಸರು : ಕೆಂಪು ಬೂರುಗ
ಸಾಮಾನ್ಯ ಹೆಸರು : ಮಲಬಾರ್ ಸಿಲ್ಕ್ ಕಾಟನ್ ಟ್ರೀ, ರೆಡ್ ಸಿಲ್ಕ್ ಕಾಟನ್ ಟ್ರೀ
ಕುಟುಂಬದ ಹೆಸರು : ಮಾಲ್ವೇಸೀ
ವೈಜ್ಞಾನಿಕ ಹೆಸರು : ಬೊಂಬಾಕ್ಸ್ ಸೀಬಾ ಎಲ್.
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಜನವರಿ - ಫೆಬ್ರವರಿ
ಹಣ್ಣಾಗುವ ಅವಧಿ: ಮಾರ್ಚ್ - ಮೇ
ಮೂಲ: ದಕ್ಷಿಣ ಮತ್ತು ಪೂರ್ವ ಏಷ್ಯಾ, ಆಸ್ಟ್ರೇಲಿಯಾ

ಉಪಯೋಗಗಳು

ಹೂವುಗಳು ಸ್ರಾವನಿರೋಧಕ ಮತ್ತು ಶೀತಕ ಗುಣಗಳನ್ನು ಹೊಂದಿರುತ್ತವೆ. ಅವುಗಳನ್ನು ಚರ್ಮದ ತೊಂದರೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಎಳೆಯ ಬೇರುಗಳನ್ನು ಮೂತ್ರವರ್ಧಕ ಮತ್ತು ಟಾನಿಕ್ ಗಳಾಗಿ ಬಳಸಲಾಗುತ್ತದೆ. ಬೀಜದ ಮಡ್ಡಿಯನ್ನು/ನವಿರುನೂಲನ್ನು ದಿಂಬುಗಳು, ಮೆತ್ತೆಗಳು ಇತ್ಯಾದಿಗಳನ್ನು ತುಂಬಲು ಬಳಸಲಾಗುತ್ತದೆ. ಇದನ್ನು ಕ್ರಿಮಿಕೀಟ ನಿರೋಧಕ ಎಂದು ಹೇಳಲಾಗುತ್ತದೆ.

ವಿವರಣೆ

.45 ಮೀ ವರೆಗೆ ಬೆಳೆಯುವ ದೊಡ್ಡ, ಪತನಶೀಲ ಮರ. ಕಾಂಡ ಬಟ್ರೆಸ್ ಆಗಿರುತ್ತದೆ, ಹಲವಾರು ಶಂಕುವಿನಾಕಾರದ ಮುಳ್ಳುಗಳನ್ನು ವಿಶೇಷವಾಗಿ ಚಿಕ್ಕ ವಯಸ್ಸಿನಲ್ಲಿ ಹೊಂದಿರುತ್ತದೆ, ಆದರೆ ದೊಡ್ಡದಾದಾಗ ಅವುಗಳು ಸವೆದುಹೋಗುತ್ತದೆ. ಸುಮಾರು 5-7 ಚಿಗುರೆಲೆಗಳನ್ನು ಹೊಂದಿರುವ ಎಲೆಗಳು ಹಸ್ತದಾಕಾರದ ಭಿನ್ನಪತ್ರಗಳಾಗಿದ್ದು, ಆಲ್ಟರ್ನೇಟ್ ಆಗಿರುತ್ತವೆ; ಚಿಗುರೆಲೆಗಳು ಎಲಿಪ್ಟಿಕ್, ಎಲಿಪ್ಟಿಕ್-ಲ್ಯಾನ್ಸಿಲೇಟ್, ಎಲಿಪ್ಟಿಕ್ – ಓವೇಟ್, ಆಗಿದ್ದು ಬೇಸ್ ಅಟೆನ್ಯೂಯೇಟ್ ಅಥವಾ ಕ್ಯೂನೇಟ್ ಆಗಿರುತ್ತದೆ, ತುದಿ ಚೂಪಾಗಿರುತ್ತದೆ, ಸಂಪೂರ್ಣವಾದ ಅಂಚನ್ನು ಹೊಂದಿರುತ್ತದೆ.ಹೂಗಳು ದೊಡ್ಡದಾಗಿದ್ದು ದ್ವಿಲಿಂಗಿಗಳಾಗಿರುತ್ತವೆ, ಕೆಂಪು ಅಥವಾ ಕಿತ್ತಳೆ-ಕೆಂಪು ಬಣ್ಣ ಹೊಂದಿರುವ ಇವುಗಳ ವ್ಯಾಸ 10 ಸೆಂ. ಹಣ್ಣು 8-10 ಸೆಂ.ಮೀ ಉದ್ದದ ಕ್ಯಾಪ್ಸುಲ್ ಆಗಿದ್ದು , ನವಿರಾಗಿ ಆಗಿರುತ್ತದೆ. ಕಂದು ಬಣ್ಣದ ಹಲವಾರು ಬೀಜಗಳಿದ್ದು , ಅವು ಬಿಳಿ ಹತ್ತಿಯಲ್ಲಿ ಹುದುಗಿರುತ್ತವೆ.