ಬ್ರೌನಿಯಾ ಗ್ರಾಂಡಿಸೆಪ್ಸ್ ಜಾಕ್

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ರೋಸ್ ಆಫ್ ವೆನೆಜುವೆಲ್ಸ್, ಸ್ಕಾರ್ಲೆಟ್ ಫ್ಲೇಮ್ ಬೀನ್
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಬ್ರೌನಿಯಾ ಗ್ರಾಂಡಿಸೆಪ್ಸ್ ಜಾಕ್
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ದಕ್ಷಿಣ ಅಮೇರಿಕಾ

ಉಪಯೋಗಗಳು

.ಹೂವುಗಳನ್ನು ವೆನೆಜುವೆಲಾದ ನಾಟಿ ಔಷಧಿ ಪದ್ಧತಿಯಲ್ಲಿ ತುಂಬಾ ಮುಟ್ಟು ಹೋಗುವ (ಮೆನೋರ್ಹೇಜಿಯಾ) ಸಮಸ್ಯೆ ಇರುವ ಮಹಿಳೆಯರಿಗೆ ರಕ್ತಸ್ರಾವ ತಡೆಗಟ್ಟಲು ರಕ್ತಸ್ರಾವನಿರೋಧಕವಾಗಿ (ಆಂಟಿ ಹೆಮರಾಜಿಕ್ ಆಗಿ) ಬಳಸಲಾಗುತ್ತದೆ.

ವಿವರಣೆ

ನಿತ್ಯಹರಿದ್ವರ್ಣ ಮರ, 20 ಮೀ ಎತ್ತರದವರೆಗೆ ಬೆಳೆಯುತ್ತದೆ. ಎಲೆಗಳು ಪರಿಪಿನ್ನೇಟ್ (ಸಮಗರಿ ರೂಪಿ) , ಆಲ್ಟರ್ನೇಟ್ ಆಗಿರುತ್ತವೆ, 8-26 ಚಿಗುರೆಲೆಗಳು ಇರುತ್ತವೆ; ಚಿಗುರೆಲೆಗಳು ಎಲಿಪ್ಟಿಕ್ ಅಥವಾ ಒಬ್ಲಾಂಗ್ ಆಗಿದ್ದು, ಉದ್ದವಾದ ತುದಿಯನ್ನು ಹೊಂದಿರುತ್ತವೆ. ಕೆಂಪು-ಕಂದು ಬಣ್ಣದ ಎಳೆಯ ಎಲೆಗಳು ನೇತಾಡುತ್ತಿರುತ್ತವೆ. ಪುಷ್ಪಮಂಜರಿ ಒಂದು ಟರ್ಮಿನಲ್ ಪ್ಯಾನಿಕಲ್ ಅಥವಾ ಹೂಗೊಂಡೆ ಆಗಿರುತ್ತದೆ. ಗುಲಾಬಿ ಅಥವಾ ಕೆಂಪು ಬಣ್ಣದಲ್ಲಿರುವ ಹೂಗಳು ದ್ವಿಲಿಂಗಿಗಳಾಗಿರುತ್ತವೆ.ಕಂದು ಬಣ್ಣದ ಮಖಮಲ್ ನಂತಹ ಕೂದಲಿನಿಂದ ಮುಚ್ಚಲ್ಪಟ್ಟಿರುವ ಮರದಂತಿರುವ (ವುಡಿಯಾದ) ಹಣ್ಣು 5 ಬೀಜಗಳನ್ನು ಒಳಗೊಂಡಂತಹ ಉದ್ದನೆಯ ಬೀಜಕೋಶವಾಗಿರುತ್ತದೆ.