ಬುಟಿಯಾ ಮೊನೊಸ್ಪರ್ಮಾ (ಲ್ಯಾಮ್.) ಕುಂಟ್ಜೆ

ಕನ್ನಡದ ಹೆಸರು : ಮುತ್ತುಗ, ಪಲಾಶ
ಸಾಮಾನ್ಯ ಹೆಸರು : ಫ್ಲೇಮ್ ಆಫ್ ದ ಫಾರೆಸ್ಟ್, ಬಾಸ್ಟರ್ಡ್ ತೇಗ
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಬುಟಿಯಾ ಮೊನೊಸ್ಪರ್ಮಾ (ಲ್ಯಾಮ್.) ಕುಂಟ್ಜೆ
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಫೆಬ್ರವರಿ - ಏಪ್ರಿಲ್
ಹಣ್ಣಾಗುವ ಅವಧಿ: ಏಪ್ರಿಲ್-ಮೇ
ಮೂಲ: ಭಾರತದ ಉಪಖಂಡ

ಉಪಯೋಗಗಳು

ಇದನ್ನು ಮರ ಮುಟ್ಟುಗಳಿಗೆ , ರಾಳ(ರೆಸಿನ್), ಮೇವು, ಔಷಧಿ ಮತ್ತು ಬಣ್ಣಕ್ಕಾಗಿ ಬಳಸಲಾಗುತ್ತದೆ. ಅದರ ಅಂಟನ್ನು(ಗಮ್ ಅನ್ನು) ಬೆಂಗಾಲ್ ಕಿನೋ ಎಂದು ಕರೆಯಲಾಗುತ್ತದೆ ಮತ್ತು ಅದರ ಸ್ರಾವನಿರೋಧಕ ಗುಣಗಳಿಂದಾಗಿ ಔಷಧಿಯ ವ್ಯಾಪಾರಿಗಳು ಮತ್ತು ಅದರಲ್ಲಿಯ ಟ್ಯಾನಿನ್‌ನಿಂದಾಗಿ ಚರ್ಮದ ಕೆಲಸಗಾರರು ಅದನ್ನು ಬಹಳ ಮೌಲ್ಯವಾದದ್ದೆಂದು ಪರಿಗಣಿಸುತ್ತಾರೆ.

ವಿವರಣೆ

.ಸಣ್ಣ ಗಾತ್ರದಿಂದ ಮಧ್ಯಮ ಗಾತ್ರದ, 10- 20 ಮೀ ಎತ್ತರದ, ಪತನಶೀಲ ಮರ.ತೊಗಟೆ ಬೂದು ಮಿಶ್ರಿತ ಕಪ್ಪುಬಣ್ಣದ್ದಾಗಿರುತ್ತದೆ. ತ್ರಿದಳದ ಗರಿಯ ರೀತಿಯ ಎಲೆಗಳು, ಸಮನಾಗಿರದ ಚಿಗುರೆಲೆಗಳು, ತುದಿಯ ಚಿಗುರೆಲೆಗಳು ಓಬೋವೇಟ್ ಆಗಿರುತ್ತವೆ, ಪಾರ್ಶ್ವದ ಚಿಗುರೆಲೆಗಳು ಕೊಂಚ ಅಂಡಾಕಾರದಲ್ಲಿರುತ್ತವೆ, ತೊಗಲಿನಂತಿದ್ದು ಮೊಂಡಾದ ಅಥವಾ ಇಮಾರ್ಜಿನೇಟ್ ತುದಿಯನ್ನು ಹೊಂದಿರುತ್ತವೆ, ಕಾವಿನೆಲೆಗಳು(ಸ್ಟಿಪ್ಯೂಲ್) ಚಿಕ್ಕದಾಗಿರುತ್ತವೆ ಮತ್ತು ಉದುರುತ್ತವೆ. ಪುಷ್ಪಮಂಜರಿ ಒಂದು ಅಕ್ಷಾಕಂಕುಳಿನ ಅಥವಾ ತುದಿಯ ರೇಸಿಮ್ ಆಗಿರುತ್ತದೆ , ಹೊರಗೆ ಮೃದುತುಪ್ಪಳವಿರುವ, ದ್ವಿಲಿಂಗಿ ಹೂಗಳು ಪ್ರಕಾಶಮಾನವಾದ ಕಿತ್ತಳೆ- ಕೆಂಪು ಬಣ್ಣದವಾಗಿರುತ್ತವೆ.ಹಣ್ಣು 10-20 ಸೆಂ.ಮೀ ಉದ್ದದ (ಪಾಡ್) ಬೀಜ ಕೋಶವಾಗಿದ್ದು , ಬೀಜ ಕೆಂಪು ಕಂದು ಬಣ್ಣದ್ದಾಗಿರುತ್ತದೆ.