ಕನ್ನಡದ ಹೆಸರು : | - |
ಸಾಮಾನ್ಯ ಹೆಸರು : | ಪೌಡರ್ ಪಫ್ ಟ್ರೀ |
ಕುಟುಂಬದ ಹೆಸರು : | ಫ್ಯಾಬೇಸಿ |
ವೈಜ್ಞಾನಿಕ ಹೆಸರು : | ಕ್ಯಾಲಿಯಾಂಡ್ರಾ ಹೆಮಟೊಸೆಫಾಲಾ ಹಸ್ಕ್ |
ಪ್ರಭೇದದ ಪ್ರಕಾರ: | ವಿದೇಶೀಯ |
ಪ್ರಕೃತಿ ಶಾಸ್ತ್ರ : | ಪತನಶೀಲ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಆಗಸ್ಟ್ - ಸೆಪ್ಟೆಂಬರ್ |
ಹಣ್ಣಾಗುವ ಅವಧಿ: | ಅಕ್ಟೋಬರ್ - ನವೆಂಬರ್ |
ಮೂಲ: | ಬೊಲಿವಿಯಾ |
ಇದನ್ನು ಒಂದು ಅಲಂಕಾರಿಕ ಗಿಡವನ್ನಾಗಿ ಬಳಸಲಾಗುತ್ತದೆ
. 8-20 ಮೀ ಎತ್ತರವಿರುವ, ಪೊದೆ ಅಥವಾ ಸಣ್ಣ ಮರ. ಎಲೆಗಳು ದ್ವಿಪಿನೇಟ್, 4-8 ಜೋಡಿಗಳಲ್ಲಿ ಚಿಗುರೆಲೆಗಳು, ಲ್ಯಾನ್ಸಿಲೇಟ್ ಆಗಿದ್ದು, ಚರ್ಮದಂತಿರುವ ಎಲೆಗಳು, ರೋಮರಹಿತವಾಗಿರುತ್ತವೆ, ಓರೆಯಾದ ಬುಡ, ತುದಿ ಮ್ಯೂಕ್ರೊನೇಟ್ ಅಥವಾ ಮೊಂಡಾಗಿರುತ್ತದೆ. ಪುಷ್ಪ ಮಂಜರಿ ಒಂದು ತುದಿ ಅಥವಾ ಅಕ್ಷಾಕಂಕುಳಿನ ಪ್ಯಾನಿಕಲ್ ಆಗಿರುತ್ತದೆ. ಹೂವಿನ ಬಣ್ಣ ಕಡುಗೆಂಪಾಗಿದ್ದು, ಹಲವಾರು ಮತ್ತು ಕೆಂಪು ಬಣ್ಣದ ಕೇಸರಗಳಿರುತ್ತವೆ. ಹಣ್ಣು ಒಂದು ಉದ್ದನೆಯ ಬೀಜಕೋಶವಾಗಿದ್ದು(ಪಾಡ್), , 6-11 ಸೆಂ.ಮೀ ಉದ್ದವಿರುತ್ತದೆ. ಮಾಗಿದಾಗ ಕಂದು ಬಣ್ಣಕ್ಕೆ ತಿರುಗುತ್ತದೆ. ಬೀಜಗಳು 5-6 ಸಂಖ್ಯೆಯಲ್ಲಿರುತ್ತವೆ.