ಮೆಲಲೂಕಾ ಸಿಟ್ರಿನಾ (ಕರ್ಟಿಸ್) ದಮ್.ಕೋರ್ಸ್.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಕ್ರಿಮ್ಸನ್ ಬಾಟಲ್ ಬ್ರಷ್ ಟ್ರೀ
ಕುಟುಂಬದ ಹೆಸರು : ಮಿರ್ಟೇಸಿ
ವೈಜ್ಞಾನಿಕ ಹೆಸರು : ಮೆಲಲೂಕಾ ಸಿಟ್ರಿನಾ (ಕರ್ಟಿಸ್) ದಮ್.ಕೋರ್ಸ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಫೆಬ್ರವರಿ - ಮೇ ಮತ್ತು ಆಗಸ್ಟ್ - ನವೆಂಬರ್
ಹಣ್ಣಾಗುವ ಅವಧಿ: ಫೆಬ್ರವರಿ ಮತ್ತು ಸೆಪ್ಟೆಂಬರ್
ಮೂಲ: ಆಸ್ಟ್ರೇಲಿಯಾ

ಉಪಯೋಗಗಳು

.ಈ ಮೂಲಿಕೆಯ ವಿವಿಧ ಭಾಗಗಳನ್ನು ಸಾಮಾನ್ಯ ಪರಿಹಾರವಾಗಿ ಅತಿಸಾರ, ಭೇದಿ ಮತ್ತು ಸಂಧಿವಾತದ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಇದನ್ನು ನಾಟಿ ಔಷಧದಲ್ಲಿ, ವಾಟರ್ ಆಕ್ಸೆಂಟ್,ಆಂಟಿಕಾಫ್, ಆಂಟಿಬ್ರಾಂಕೈಟಿಸ್ ಮತ್ತು ಕೀಟನಾಶಕವಾಗಿಯೂ ಬಳಸಲಾಗುತ್ತದೆ.

ವಿವರಣೆ

ನಿತ್ಯಹರಿದ್ವರ್ಣ, ನೆಟ್ಟಗೆ ಇರುವ, ದೊಡ್ಡ ಪೊದೆಸಸ್ಯ ಅಥವಾ ಸಣ್ಣ ಮರ, 7.5 ಮೀ ಎತ್ತರದವರೆಗೆ ಇರುತ್ತದೆ.ಗುಲಾಬಿ ಅಥವಾ ನೀಲಕ ಬಣ್ಣದಲ್ಲಿರುವ ಎಳೆಯ ಕಿರುಕೊಂಬೆಗಳು ರೋಮಭರಿತವಾಗಿರುತ್ತವೆ. ಸಣ್ಣದಾಗಿ ಲ್ಯಾನ್ಸಿಲೇಟ್ ಆದ ಎಲೆಗಳು, ,ರೋಮರಹಿತವಾಗಿರುತ್ತವೆ. ಎಣ್ಣೆ ಗ್ರಂಥಿಗಳು ಅಲ್ಲಲ್ಲಿ ಹರಡಿದ್ದು, ಬುಡ ಬೆಣೆಯಾಕಾರದಲ್ಲಿರುತ್ತದೆ, ತುದಿ ಚೂಪಾಗಿರುತ್ತದೆ. ಎಲೆಗಳನ್ನು ಜಜ್ಜಿದಾಗ ಒಂದು ರೀತಿಯ ಸಿಟ್ರಸ್ ಪರಿಮಳವನ್ನು ಹೊರ ಹಾಕುತ್ತವೆ. ಪುಷ್ಪಮಂಜರಿಯು ಎಲೆಯ ಚಿಗುರುಎಲೆಗಳ ಆಚೆಗೆ ಬೆಳೆಯುವ ಒಂದು ಹೂಗೊನೆ(ಸ್ಪೈಕ್) ಆಗಿರುತ್ತದೆ. ಹೂವುಗಳು ಕಡುಗೆಂಪು, ಕೆಲವೊಮ್ಮೆ ನೀಲಕ ಅಥವಾ ನೇರಳೆ-ಕೆಂಪು ಬಣ್ಣದಲ್ಲಿರುತ್ತವೆ. ಹಲವಾರು ಕೇಸರಗಳಿದ್ದು, ತಂತುಗಳು ಕಡುಗೆಂಪು ಬಣ್ಣದಲ್ಲಿರುವ ತಂತುಗಳು, ತಳದಲ್ಲಿ ಬಿಡಿಯಾಗಿರುತ್ತವೆ. ಮರದಂತಹ (ವುಡಿಯಂತಹ) ಹಣ್ಣು , ಕುಗ್ಗಿದ ಗೋಳಾಕಾರದ ಒಂದು ಕ್ಯಾಪ್ಸುಲ್ ಆಗಿರುತ್ತದೆ.