ಕ್ಯಾಲೋಫಿಲಮ್ ಇನೋಫಿಲಮ್ ಎಲ್

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಅಲೆಕ್ಸಾಂಡ್ರಿಯನ್ ಲಾರೆಲ್ ಮರ
ಕುಟುಂಬದ ಹೆಸರು : ಕ್ಯಾಲೋಫಿಲೇಸಿ
ವೈಜ್ಞಾನಿಕ ಹೆಸರು : ಕ್ಯಾಲೋಫಿಲಮ್ ಇನೋಫಿಲಮ್ ಎಲ್
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ/ಎವರ್ ಗ್ರೀನ್
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಡಿಸೆಂಬರ್ - ಜನವರಿ
ಹಣ್ಣಾಗುವ ಅವಧಿ: ಡಿಸೆಂಬರ್ - ಜನವರಿ
ಮೂಲ: ಆಸ್ಟ್ರೇಲಿಯಾ, ಸೌತ್ ಈಸ್ಟ್ ಏಷ್ಯಾ

ಉಪಯೋಗಗಳು

ಸಾಂಪ್ರದಾಯಿಕವಾಗಿ ಕಷಾಯವನ್ನು ಹುಣ್ಣುಗಳು, ಕೀವು ಗುಳ್ಳೆಗಳು ಮತ್ತು ನೇತ್ರರೋಗಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಆರ್ಕೈಟಿಸ್ ನ ಚಿಕಿತ್ಸೆಗಾಗಿ ತೊಗಟೆಯನ್ನು ಬಳಸಲಾಗುತ್ತದೆ. ಸಂಧಿವಾತ ಮತ್ತು ಸೋರಿಯಾಸಿಸ್ ಚಿಕಿತ್ಸೆಯಲ್ಲಿ ಅದರ ಲ್ಯಾಟೆಕ್ಸ್(ಹಾಲು) ಅನ್ನು ಚರ್ಮದ ಮೇಲೆ ಉಜ್ಜಲಾಗುತ್ತದೆ.

ವಿವರಣೆ

7.5-30 ಮೀ ಎತ್ತರದ ದೊಡ್ಡ ನಿತ್ಯ ಹರಿದ್ವರ್ಣ ಮರಗಳು.ತೊಗಟೆ ಬೂದು ಬಣ್ಣದ್ದಾಗಿದ್ದು ಉದ್ದಕ್ಕೆ ಬಿರುಕು ಬಿಟ್ಟಿರುತ್ತದೆ, ಹೋಲಿಕೆಯಲ್ಲಿ ಸ್ವಲ್ಪ ಚಿಕ್ಕದಾದ ಕಾಂಡವಿದ್ದು, ಉದ್ದವಾಗಿ ಹರಡಿದ ಕೊಂಬೆಗಳನ್ನು ಹೊಂದಿರುತ್ತದೆ. ಎಲೆಗಳು ಸರಳ, ಎದುರುಬದರಾಗಿರುವ ಕತ್ತರಿಯ ಮಾದರಿಯ ಎಲೆಗಳು, ಅಪರೂಪವಾಗಿ ಚಕ್ರದಾಕಾರದಲ್ಲಿ ಸುತ್ತಿಕೊಂಡಿರುತ್ತವೆ. ಎಲಿಪ್ಟಿಕ್ –ಒಬ್ಲಾಂಗ್ - ಒಬೊವೇಟ್, ಕೊರಿಯೇಸಿಯಸ್, ರೋಮರಹಿತ, ಹೊಳಪುಳ್ಳವಾಗಿರುತ್ತವೆ, ಹೆಚ್ಚಾಗಿ ಬುಡ ಕೀಲಿಯಾಕಾರ ಅಥವಾ ದುಂಡಾಗಿರುತ್ತದೆ, ತುದಿ ದುಂಡಾಗಿರುತ್ತದೆ ಅಥವಾ ಗರಗಸದಂತಿರುತ್ತದೆ, ಅಂಚು ಅಲೆಯ ರೀತಿಯಲ್ಲಿರುತ್ತದೆ. ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಒಂದು ಹೂಗುಚ್ಚವಾಗಿದ್ದು (ರೇಸಿಮ್), 7-12 ಹೂವುಗಳನ್ನು ಹೊಂದಿರುತ್ತವೆ. ವಿರಳವಾಗಿ ಪಾಲಿಗ್ಯಾಮಸ್ ಆಗಿರುವ ಈ ಬಿಳಿ ಬಣ್ಣದ ದ್ವಿಲಿಂಗಿ ಹೂಗಳು, 4 ದಳಗಳನ್ನು ಹೊಂದಿರುತ್ತವೆ. ಹಣ್ಣು ಒವಾಯಿಂಡ್-ಗ್ಲೋಬೋಸ್ ಆಕಾರದ, ಬಿರಿಯದ ಓಟೆಯ ಹಣ್ಣು,ಮಾಗಿದಾಗ ತೆಳು ಕಂದು ಬಣ್ಣ ಪಡೆಯುತ್ತದೆ, ಎಂಡೋಕಾರ್ಪ್ ಸ್ಪಂಜಿನಂತಿದ್ದು, ಒಂದೇ ಬೀಜವಿರುತ್ತದೆ.