ಕನ್ನಡದ ಹೆಸರು : | ಅಲಗವ್ವೆಲೆ, ಗೊಂಜಿ,ಗೌಜಲ್ |
ಸಾಮಾನ್ಯ ಹೆಸರು : | ಕಾಡು ಪೇರಲ |
ಕುಟುಂಬದ ಹೆಸರು : | ಲೆಸಿಥಿಡೇಸಿ |
ವೈಜ್ಞಾನಿಕ ಹೆಸರು : | ಕ್ಯಾರಿಯ ಅರ್ಬೋರಿಯಾ ರಾಕ್ಸ್ಬ್. |
ಪ್ರಭೇದದ ಪ್ರಕಾರ: | ಸ್ಥಳೀಯ |
ಪ್ರಕೃತಿ ಶಾಸ್ತ್ರ : | ಪತನಶೀಲ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಮಾರ್ಚ್ - ಏಪ್ರಿಲ್ |
ಹಣ್ಣಾಗುವ ಅವಧಿ: | ಜೂನ್ - ಜುಲೈ |
ಮೂಲ: | ಭಾರತೀಯ ಉಪಖಂಡ, ಅಫ್ಘಾನಿಸ್ತಾನ, ಇಂಡೋಚೈನಾ |
ಅವುಗಳ ಸ್ರಾವ ನಿರೋಧಕ ಮತ್ತು ಮ್ಯೂಸಿಲೇಜಿನಸ್ ಗುಣಲಕ್ಷಣಗಳಿಂದಾಗಿ ಮರದ ತೊಗಟೆ ಮತ್ತು ಹೂವಿನ ದಳಗಳು ಭಾರತೀಯ ವೈದ್ಯ ಪದ್ಧತಿಯಲ್ಲಿ ತುಂಬಾ ಹೆಸರುವಾಸಿಯಾಗಿವೆ. ಅವುಗಳನ್ನು ಕೆಮ್ಮು ಮತ್ತು ನೆಗಡಿಗಳಲ್ಲಿ ಆಂತರಿಕ ಔಷಧವನ್ನಾಗಿ ನೀಡಲಾಗುತ್ತದೆ ಮತ್ತು ಕಫ ಹೊರತೆಗೆಯಲು ಲೇಪವನ್ನಾಗಿ ಬಲಸಲಾಗುತ್ತದೆ.
12ಮೀ ಎತ್ತರದವರೆಗೆ ಬೆಳೆಯುವ ಮಧ್ಯಮ ಗಾತ್ರದ ಡೆಸಿಡುಅಸ್ ಮರ. ಎಲೆಗಳು ಸರಳ, ಆಲ್ಟರ್ನೇಟ್,ಒಬೊವೇಟ್ , ಒಬ್ಲಾಂಗ್ – ಒಬೊವೇಟ್ , ರೋಮರಹಿತ, ಬುಡ ಕ್ಯೂನಿಯೆಟ್ ಅಥವಾ ಅಟೆನ್ಯೂಯೇಟ್, ತುದಿ ದುಂಡಗೆ ಅಥವಾ ಸ್ವಲ್ಪ ಚೂಪಾಗಿರುತ್ತದೆ, ಅಂಚು ಕ್ರೆನೇಟ್-ಸೆರೆಟ್ ಆಗಿರುತ್ತದೆ. ಪುಷ್ಪಮಂಜರಿ ಒಂದು ಟರ್ಮಿನಲ್ ಸ್ಪೈಕ್. ಹಸಿರು ಮಿಶ್ರಿತ ಬಿಳಿ ಬಣ್ಣದ ಹೂಗಳು, ಕೆಟ್ಟ ವಾಸನೆಯನ್ನು ಹೊಂದಿದ್ದು ದ್ವಿಲಿಂಗಿಗಳಾಗಿರುತ್ತವೆ. ಹಣ್ಣು ಒಂದು ಬೆರ್ರಿ, ಗೋಳಾಕಾರದ 2 - 3 ಇಂಚು ಉದ್ದದ ಹಲವಾರು ಬೀಜಗಳಿರುವ ಹಣ್ಣು ಒಂದು ಬೆರ್ರಿ(ಓಟೆಯಿಲ್ಲದ ರಸ ತುಂಬಿದ).