ಕ್ಯಾರಿಯೋಟಾ ಯುರೆನ್ಸ್ ಎಲ್

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಫಿಶ್ಟೇಲ್ ಪಾಮ್/ಟಾಡಿ ಪಾಮ್
ಕುಟುಂಬದ ಹೆಸರು : ಅರೆಕೇಸಿಯೇ
ವೈಜ್ಞಾನಿಕ ಹೆಸರು : ಕ್ಯಾರಿಯೋಟಾ ಯುರೆನ್ಸ್ ಎಲ್
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ/ಎವರ್ ಗ್ರೀನ್
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಜನವರಿ - ಏಪ್ರಿಲ್
ಹಣ್ಣಾಗುವ ಅವಧಿ: ಜನವರಿ - ಏಪ್ರಿಲ್
ಮೂಲ: ಭಾರತದ ಉಪಖಂಡ

ಉಪಯೋಗಗಳು

ಹೂಗೊಂಚಲುಗಳಿಂದ ಹೆಂಡವನ್ನು ತೆಗೆಯಲಾಗುತ್ತದೆ, ಹಾಗೂ ಇದರ ಹೆಂಡವನ್ನು ಇತರ ತಾಳೆ ಮರಗಳಿಂದ ತೆಗೆದ ಹೆಂಡಕ್ಕೆ ಹೋಲಿಕೆ ಮಾಡಿ ಇದರ ಕಸುವು ಸ್ವಲ್ಪ ಮಟ್ಟಿಗೆ ಹೆಚ್ಚು ಎಂದು ಹೇಳಲಾಗುತ್ತದೆ. ಪೂರ್ಣವಾಗಿ ಬೆಳೆದ ಮರದ ತಿರುಳನ್ನು ಕತ್ತರಿಸಿ, ಬಿಸಿಲಿನಲ್ಲಿ ಒಣಗಿಸಿ, ಪುಡಿಮಾಡಿ ತಿನ್ನಬಹುದು. ಎಲೆಗಳು ಬಲವಾದ ನಾರುಗಳನ್ನು ಹೊಂದಿರುತ್ತವೆ ಮತ್ತು ಅದನ್ನು ಬುಟ್ಟಿಗಳನ್ನು ಮಾಡಲು ಬಳಸಲಾಗುತ್ತದೆ.

ವಿವರಣೆ

1-2. ಒಂದೇ ಕಾಂಡದ, 12 ಮೀ ಎತ್ತರದವರೆಗೆ ಇರುವ ಮರ, ಅನ್ಯೂಲೇಟ್(ಕಂಕಣಿತ) ಆಗಿದ್ದು , ನೆಟ್ಟಗೆ ಇರುತ್ತದೆ. ತುದಿಯಲ್ಲಿ ಚಿಗುರೆಲೆಗಳನ್ನು ಹೊಂದಿರುವ ಈ ಎಲೆಗಳು, ದ್ವಿಪಿನೇಟ್ ಆಗಿದ್ದು, ಚಿಗುರೆಲೆಗಳು ಆಲ್ಟರ್ನೇಟ್ ಆಗಿರುತ್ತವೆ, ಕ್ಯೂನಿಟ್, ಫ್ಯಾನ್-ಆಕಾರದಲ್ಲಿರುವ, ಇವುಗಳ ತುದಿ ಮೊಟಕಾಗಿರುತ್ತದೆ. ಅಕ್ಷಾಕಂಕುಳಿನಲ್ಲಿರುವ ಪುಷ್ಪಮಂಜರಿ, ಜೋತಾಡುವ ತಾಳಗುಚ್ಛ(ಸ್ಪಾಡಿಕ್ಸ್)ವಾಗಿರುತ್ತದೆ. ಏಕಲಿಂಗಿಯಾದ ಹೂಗಳು ಬಿಳಿ ಬಣ್ಣದಲ್ಲಿರುತ್ತವೆ. ಹಣ್ಣು ಮಾಗಿ ರಸಭರಿತವಾದ, ಕೆಂಪು ಬಣ್ಣದ, ದುಂಡಗಿನ ಗೊರಟೆ ಹಣ್ಣಾಗುತ್ತದೆ(ಡ್ರೂಪ್)., 1-2 ಬೀಜಗಳಿರುವ ಹಣ್ಣು ಆಕ್ಸಲೇಟ್ ಹರಳುಗಳು ಇರುವ ಕಾರಣದಿಂದಾಗಿ ಕಿರಿಕಿರಿ ಉಂಟುಮಾಡುತ್ತದೆ.