ಕಾಸಿಯ ಫಿಸ್ಟುಲ ಎಲ್

ಕನ್ನಡದ ಹೆಸರು : ಕಕ್ಕೆ ಮರ
ಸಾಮಾನ್ಯ ಹೆಸರು : ಇಂಡಿಯನ್ ಲ್ಯಾಬರ್ನಮ್
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಕಾಸಿಯ ಫಿಸ್ಟುಲ ಎಲ್
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಏಪ್ರಿಲ್ - ಜುಲೈ
ಹಣ್ಣಾಗುವ ಅವಧಿ: ಅಕ್ಟೋಬರ್ - ಮಾರ್ಚ್
ಮೂಲ: ಭಾರತದ ಉಪಖಂಡ, ಸೌತ್ ಈಸ್ಟ್ ಏಷ್ಯಾ

ಉಪಯೋಗಗಳು

ಮಾಗಿದ ಬೀಜಕೋಶಗಳು ಮತ್ತು ಬೀಜಗಳನ್ನು ರೂಢಿಯಲ್ಲಿರುವ ಮತ್ತು ಸಾಂಪ್ರದಾಯಿಕ ಔಷಧಿಗಳಲ್ಲಿ ವಿರೇಚಕವಾಗಿ ಹೆಚ್ಚಾಗಿ ಬಳಸಲಾಗುತ್ತದೆ. ತೊಗಟೆ ಅಥವಾ ಎಲೆಗಳನ್ನು ಹೆಚ್ಚಾಗಿ ಚರ್ಮದ ಸಮಸ್ಯೆಗಳಿಗೆ ಬಳಸಲಾಗುತ್ತದೆ.ಮುರಿದ ಮೂಳೆಗಳು ಮತ್ತು ಉಷ್ಣದ ಹುಣ್ಣುಗಳಿಗೆ ಹೆರೆದ ತೊಗಟೆ ಮತ್ತು ಎಲೆಗಳ ರಸದಿಂದ ಬ್ಯಾಂಡೇಜ್ ಮಾಡಲಾಗುತ್ತದೆ.

ವಿವರಣೆ

ಇದು ಮಧ್ಯಮ ಗಾತ್ರದ, ಡೆಸಿಡುಅಸ್ ಮರವಾಗಿದ್ದು, 10-20 ಮೀ ಎತ್ತರವಿರುತ್ತದೆ. ಚಿಕ್ಕದಾಗಿದ್ದಾಗ ಅದರ ತೊಗಟೆ ನಯವಾಗಿರುತ್ತದೆ, ಆಮೇಲೆ ಕಪ್ಪಾಗಿ , ಒರಟಾಗುತ್ತದೆ. ಎಲೆಗಳು ಪರಿಪಿನೇಟ್, ಆಲ್ಟರ್ನೇಟ್ ಆಗಿದ್ದು, 3-6 ಜೋಡಿ ಚಿಗುರೆಲೆಗಳಿರುತ್ತವೆ, ಚಿಗುರೆಲೆಗಳು ಎದುರು ಬದುರಾಗಿದ್ದು, ಒಬ್ಲಾಂಗ್ –ಹೆಚ್ಚು ಒಬ್ವೇಟ್ ಆಗಿದ್ದು, ಮೇಲೆ ರೋಮರಹಿತವಾಗಿರುತ್ತವೆ, ಕೆಳಗೆ ಮೃದುತುಪ್ಪಳದಿಂದ ಕೂಡಿರುತ್ತವೆ, ಬುಡ ಕೀಲಿರೂಪದಲ್ಲಿದ್ದು, ತುದಿ ಚೂಪಾಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಎಲೆಗಳು ಡೆಸಿಡುಅಸ್ ಆಗಿರುತ್ತವೆ ಮತ್ತು ಗರಿಯಂತಹ ಮೂರರಿಂದ ಎಂಟು ಜೋಡಿ ಚಿಗುರೆಲೆಗಳನ್ನು ಹೊಂದಿರುತ್ತವೆ. ಪುಷ್ಪಮಂಜರಿ 20-40 ಸೆಂ.ಮೀ ಉದ್ದದ ಒಂದು ನೇತಾಡುವ ಹೂಗೊಂಚಲು. ದ್ವಿಲಿಂಗಿ ಹೂಗಳು, ಗೋಲ್ಡನ್-ಹಳದಿ ಬಣ್ಣದಲ್ಲಿರುತ್ತವೆ. ಹಣ್ಣು ಒಂದು ಆಯತಾಕಾರದ ಬಿರಿಯದ ಪಾಡ್, ಮಾಗಿದಾಗ ಕಪ್ಪಾಗುತ್ತದೆ. 40-60 ಸೆಂ, ಇರುವ ಅದರಲ್ಲಿ ಹಲವಾರು ಬೀಜಗಳಿರುತ್ತವೆ.