ಕನ್ನಡದ ಹೆಸರು : | ಬಿಲ್ವಪತ್ರೆ |
ಸಾಮಾನ್ಯ ಹೆಸರು : | ಬೆಂಗಾಲ್ ಕ್ವಿನ್ಸ್, ಬೇಲ್ |
ಕುಟುಂಬದ ಹೆಸರು : | ರುಟೇಸಿ |
ವೈಜ್ಞಾನಿಕ ಹೆಸರು : | ಏಗಲ್ ಮಾರ್ಮೆಲೋಸ್ (ಎಲ್.) ಕೊರ್ರಿಯಾ |
ಪ್ರಭೇದದ ಪ್ರಕಾರ: | ಸ್ಥಳೀಯ |
ಪ್ರಕೃತಿ ಶಾಸ್ತ್ರ : | ಪತನಶೀಲ |
ಸಂರಕ್ಷಣೆಯ ಸ್ಥಿತಿ : | ಅವಸಾನದ ಅಂಚಿನಲ್ಲಿದೆ |
ಹೂಬಿಡುವ ಅವಧಿ: | ಏಪ್ರಿಲ್-ಮೇ |
ಹಣ್ಣಾಗುವ ಅವಧಿ: | ಮಾರ್ಚ್ - ಜೂನ್ (ಮುಂದಿನ ವರ್ಷ) |
ಮೂಲ: | ಭಾರತ, ಬಾಂಗ್ಲಾದೇಶ, ಶ್ರೀಲಂಕಾ |
.ದೇಹದ ಹೊರ ಭಾಗಗಳ ಮೇಲೆ ಅದರಿಂದ ತೆಗೆದ ಸಾರಗಳನ್ನು ಹಚ್ಚಿದಾಗ,ಅದು ಉರಿಯೂತವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಜ್ವರದ ಚಿಕಿತ್ಸೆಯಲ್ಲಿ ಇದರ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಪ್ರಯೋಜನವಾಗುತ್ತದೆ. ಕ್ಷಯರೋಗದ ಚಿಕಿತ್ಸೆಯಲ್ಲೂ ಇದನ್ನು ಬಳಸಬಹುದು.
15 ಮೀ ವರೆಗೆ ಎತ್ತರವಿರುವ ಇರುವ, ಚಿಕ್ಕ ಗಾತ್ರದಿಂದ ಮಧ್ಯಮ ಗಾತ್ರದ ಮರ. ಆಲ್ಟರ್ನೇಟ್ ಆಗಿ ಒಂದು, 2 ಅಥವಾ 3 ಎಲೆಗಳಿರುತ್ತವೆ,ಅವುಗಳು 3 ರಿಂದ 5 ಅಂಡಾಕಾರದ, ಮೊನಚಾದ, ಆಳವಲ್ಲದ ಹಲ್ಲಿನ ಚಿಗುರೆಲೆಗಳಿಂದ ಕೂಡಿರುತ್ತವೆ, ತುದಿಯಲ್ಲಿರುವುದು ಉದ್ದವಾದ ತೊಟ್ಟುನ್ನು ಹೊಂದಿರುತ್ತದೆ. ಎಳೆಯ ಕಿರುಕೊಂಬೆಗಳ ಉದ್ದಕ್ಕೂ,4 ರಿಂದ 7 ರ ಗೊಂಚಲುಗಳಲ್ಲಿ ಪರಿಮಳಭರಿತ ಹೂಗಳು ಇರುತ್ತವೆ. ಹೊರಗೆ ಹಸಿರು, ಹಳದಿ ಒಳಭಾಗದಲ್ಲಿ ಇರುವ 4 ಹಿಂದಕ್ಕೆ ಬಾಗಿದ, ತಿರುಳಿರುವ ದಳಗಳು, ಮತ್ತು 50 ಅಥವಾ ಹೆಚ್ಚು ಹಸಿರು-ಹಳದಿ ಕೇಸರಗಳನ್ನು ಹೂವಿನಲ್ಲಿ ಕಾಣಬಹುದು. ಹಣ್ಣು, ದುಂಡಗೆ, ಪಿಯರ್ ನ ಆಕಾರ, ಅಂಡಾಕಾರ, ಅಥವಾ ಆಯತಾಕಾರದಲ್ಲಿರುತ್ತದೆ.ಅದಕ್ಕೆ ತೆಳುವಾದ, ಗಟ್ಟಿಯಾದ, ಮರದಂತಹ ಹೊರಹೊದಿಕೆ ಇರುತ್ತದೆ. ಒಳಗೆ ಮಧ್ಯದಲ್ಲಿ ಗಟ್ಟಿಯಾದ ಗೊರಟೆ ಮತ್ತು ತೆಳುವಾದ ಗಾಢ-ಕಿತ್ತಳೆ ಗೋಡೆಗಳಿಂದ ಹಗುರಾಗಿ ಬೇರ್ಪಡಿಸಲಾದ 8 ರಿಂದ 20 ತ್ರಿಕೋನ ಭಾಗಗಳಲ್ಲಿ, ಸುವಾಸನೆಯುಳ್ಳ, ತಿಳಿ ಕಿತ್ತಲೆ ಬಣ್ಣದ, ಸಿಹಿ, ಬಹುತೇಕ ಒಗಚಾದ, ಜಲಪಿಷ್ಟ ರಾಳದ ತಿರುಳು ತುಂಬಿರುತ್ತದೆ. ಬೀಜಗಳು ಚಪ್ಪಟೆ-ಆಯತಾಕಾರವಾಗಿದ್ದು, ಉಣ್ಣೆಯ ಕೂದಲುಗಳನ್ನು ಹೊಂದಿರುತ್ತವೆ ಮತ್ತು ಪ್ರತಿಯೊಂದರ ಸುತ್ತಲೂ ಅಂಟಿಕೊಳ್ಳುವ, ಪಾರದರ್ಶಕ ಲೋಳೆಯ ಚೀಲವಿರುತ್ತದೆ.