ಕನ್ನಡದ ಹೆಸರು : | - |
ಸಾಮಾನ್ಯ ಹೆಸರು : | ಪಿಂಕ್ ಶವರ್ ಟ್ರೀ |
ಕುಟುಂಬದ ಹೆಸರು : | ಫ್ಯಾಬೇಸಿ |
ವೈಜ್ಞಾನಿಕ ಹೆಸರು : | ಕ್ಯಾಸಿಯ ಗ್ರಾಂಡಿಸ್ ಎಲ್ ಎಫ್ |
ಪ್ರಭೇದದ ಪ್ರಕಾರ: | ವಿದೇಶೀಯ |
ಪ್ರಕೃತಿ ಶಾಸ್ತ್ರ : | ಅರೆ- ಪತನಶೀಲ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಫೆಬ್ರವರಿ - ಮಾರ್ಚ್ |
ಹಣ್ಣಾಗುವ ಅವಧಿ: | ಮಾರ್ಚ್ - ಮೇ |
ಮೂಲ: | ದಕ್ಷಿಣ ಅಮೇರಿಕ |
.ಮಧ್ಯ ಅಮೆರಿಕದಲ್ಲಿ ಇದರ ಬೀಜಗಳ ಸುತ್ತಲಿನ ಪದರಯನ್ನು ಚಾಕೊಲೇಟಿನ ಬದಲಿಗೆ ಬಳಸಲಾಗುತ್ತದೆ. ಇದರ ಮರ ಬಹು ಉಪಯೋಗಿ ಹಾಗೂ ತುಂಬಾ ಗಟ್ಟಿ ಎಂದು ಹೇಳಲಾಗುತ್ತದೆ. ಇದರ ವಿವಿಧ ರೀತಿಯಲ್ಲಿ ಬಳಸುವುದರ ಜೊತೆಗೆ ಇದನ್ನು ಜೋಡಣೆಯಲ್ಲಿ, ಮರಗೆಲಸದಲ್ಲಿ, ಮರದತೊಲೆಗಳಿಗೆ ಬಳಸಲಾಗುತ್ತದೆ. ಹಣ್ಣಿನ ತಿರುಳನ್ನು ವಿರೇಚಕವಾಗಿ ಬಳಸಲಾಗುತ್ತದೆ ಮತ್ತು ಎಲೆಗಳ ತಾಜಾ ರಸವನ್ನು ಗಜಕರ್ಣ(ಹುಳುಕಡ್ಡಿ) ಚಿಕಿತ್ಸೆಯಲ್ಲಿ ಚರ್ಮದ ಮೇಲೆ ಲೇಪಿಸಲಾಗುತ್ತದೆ.
30 ಮೀ ಎತ್ತರದ ಡೆಸಿಡುಅಸ್ ಅಥವಾ ಸೆಮಿ-ಡೆಸಿಡುಅಸ್ ಆದ ಮರ. ಕಿರುಕೊಂಬೆಗಳ ತುದಿಯಲ್ಲಿ ಮೃದುತುಪ್ಪಳವಿರುತ್ತದೆ, ನಂತರ ಅವು ರೋಮರಹಿತವಾಗಿರುತ್ತವೆ. ಎಲೆಗಳು ಪ್ಯಾರಿಪಿನ್ನೇಟ್ ಆಗಿದ್ದು,ಆಲ್ಟರ್ನೇಟ್ ಆದ 10-20 ಜೋಡಿ ಚಿಗುರೆಲೆಗಳನ್ನು ಹೊಂದಿರುತ್ತವೆ; ಚಿಗುರೆಲೆಗಳು ಒಬ್ಲಾಂಗ್ - ಎಲಿಪ್ಟಿಕ್, ಕೆಳಗೆ ಟೊಮೆಂಟೋಸ್ ಆಗಿದ್ದು, ಮೇಲೆ ಪ್ಯೂಬೆಸೆಂಟ್ ಆಗಿರುತ್ತವೆ, ಬುಡ ದುಂಡಾಗಿದ್ದು, ತುದಿ ಚೂಪು ಅಥವಾ ದುಂಡಾಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಅಕ್ಷಾಕಂಕುಳಿನ ಒಂದು ಹೂಗೊಂಚಲು. ದ್ವಿಲಿಂಗಿ ಹೂವುಗಳು, ಗುಲಾಬಿ ಬಣ್ಣದಿಂದ ಬಿಳಿ ಬಣ್ಣದಲ್ಲಿರುತ್ತವೆ. ಹಣ್ಣು ಅಸಂಖ್ಯಾತ ಬೀಜಗಳಿರುವ, 90 ಸೆಂ.ಮೀ ಉದ್ದದ ಉರುಳೆಯಾಕಾರದ ಒಂದು ಬಿರಿಯದ ಪಾಡ್.