ಕ್ಯಾಸಿಯ ಜವನಿಕ ಎಲ್

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಆಪಲ್ ಬ್ಲಾಸಮ್ ಟ್ರೀ
ಕುಟುಂಬದ ಹೆಸರು : ಫ್ಯಾಬೆಸಿ
ವೈಜ್ಞಾನಿಕ ಹೆಸರು : ಕ್ಯಾಸಿಯ ಜವನಿಕ ಎಲ್
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಕನಿಷ್ಟ ಕಾಳಜಿ
ಹೂಬಿಡುವ ಅವಧಿ: ಏಪ್ರಿಲ್ - ಜೂನ್
ಹಣ್ಣಾಗುವ ಅವಧಿ:
ಮೂಲ: ಸೌತ್ ಈಸ್ಟ್ ಏಷ್ಯಾ

ಉಪಯೋಗಗಳು

ಮಾಗಿದ ಬೀಜಕೋಶಗಳನ್ನು ಮತ್ತು ಬೀಜಗಳನ್ನು ಸಾಂಪ್ರದಾಯಿಕ ವಿರೇಚಕವನ್ನಾಗಿ ಬಳಸಲಾಗುತ್ತದೆ. ತೊಗಟೆ ಮತ್ತು ಬೀಜಗಳನ್ನು ಜ್ವರಗಳ ಚಿಕಿತ್ಸೆಯಲ್ಲಿ ಜ್ವರನಿವಾರಕವಾಗಿ ಬಳಸಲಾಗುತ್ತದೆ. ತೊಗಟೆಯನ್ನು ಟ್ಯಾನಿಂಗ್ ಮಾಡಲು ಬಳಸಲಾಗುತ್ತದೆ, ಆದರೆ ಇದರಲ್ಲಿನ ಟ್ಯಾನಿನ್ ಪ್ರಮಾಣ ಕಡಿಮೆ ಇದೆ.

ವಿವರಣೆ

20 ಮೀ ವರೆಗೆ ಇರುವ ಡೆಸಿಡುಅಸ್ ಮರ, ಕೆಲವೊಮ್ಮೆ 30 ಮೀ ವರೆಗೆ ಬೆಳೆಯುತ್ತದೆ. ಎಲೆಗಳು ಪ್ಯಾರಿಪಿನ್ನೇಟ್ ಆಗಿದ್ದು, ಆಲ್ಟರ್ನೇಟ್ ಆದ 10-20 ಜೋಡಿ ಚಿಗುರೆಲೆಗಳನ್ನು ಹೊಂದಿರುತ್ತವೆ; ಚಿಗುರೆಲೆಗಳು ಒಬ್ಲಾಂಗ್ , ಓವಲ್, ಪೈಲೋಸ್, ಬುಡ ಕ್ಯೂನಿಟ್ ಅಥವಾ ದುಂಡಾಗಿರುತ್ತದೆ, ತುದಿ ಚೂಪು, ಮೊಂಡು ಅಥವಾ ಸ್ವಲ್ಪ ಚೂಪಾಗಿರುತ್ತದೆ. ಪುಷ್ಪಮಂಜರಿ ಒಂದು ಪಕ್ಕದಲ್ಲಿರುವ ಅಥವಾ ತುದಿಯಲ್ಲಿರುವ ಹೂಗೊಂಚಲು. ಗುಲಾಬಿ ಅಥವಾ ಕಡುಗೆಂಪು ಬಣ್ಣದ, ದ್ವಿಲಿಂಗಿ ಹೂಗಳು, ಪ್ರಕಾಶಮಾನವಾದ ಹಳದಿ ಬಣ್ಣದ ಕೇಸರಗಳಿರುತ್ತವೆ. ಹಣ್ಣು ಒಂದು, 20-60 ಸೆಂ.ಮೀ ಉದ್ದನೆಯ ಪಾಡ್, 50-75 ಬೀಜಗಳನ್ನು ಹೊಂದಿದ್ದು, ಮಾಗಿದಾಗ ಕಪ್ಪು ಬಣ್ಣ ಪಡೆಯುತ್ತದೆ.