ಕನ್ನಡದ ಹೆಸರು : | ಕಕ್ಕೆ ಮರ |
ಸಾಮಾನ್ಯ ಹೆಸರು : | ರೆಡ್ ಕ್ಯಾಸಿಯಾ |
ಕುಟುಂಬದ ಹೆಸರು : | ಫ್ಯಾಬೇಸಿ |
ವೈಜ್ಞಾನಿಕ ಹೆಸರು : | ಕ್ಯಾಸಿಯಾ ರಾಕ್ಸ್ ಬರ್ಗಿ |
ಪ್ರಭೇದದ ಪ್ರಕಾರ: | ದೇಶೀಯ |
ಪ್ರಕೃತಿ ಶಾಸ್ತ್ರ : | ಪತನಶೀಲ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಮೇ- ಆಗಸ್ಟ್ |
ಹಣ್ಣಾಗುವ ಅವಧಿ: | ಮೇ- ಜುಲೈ |
ಮೂಲ: | ದಕ್ಷಿಣ ಭಾರತ |
ಇದರ ಒಣ ಎಲೆಗಳು ಮತ್ತು ತೊಗಟೆಯನ್ನು ಸ್ನಾಯು ಸೆಳೆತ, ಮಧುಮೇಹ, ಗ್ಯಾಸ್ಟ್ರಿಕ್ ಸಮಸ್ಯೆಗಳು, ಶೀತ, ಅತಿಸಾರಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಹಣ ಗಳಿಸಲು ಅದನ್ನು ಅಲಂಕಾರಿಕ ಸಸ್ಯವಾಗಿ ಕೃಷಿ ಮಾಡಲಾಗುತ್ತದೆ.
ಮಧ್ಯಮ ಗಾತ್ರದ , ಡೆಸಿಡುಅಸ್ ಮರ, 15-20 ಮೀ ಎತ್ತರವಿದ್ದು ಹರಡುವ, ಜೋತುಬೀಳುವ ಶಾಖೆಗಳನ್ನು ಹೊಂದಿದೆ. ಎಲೆಗಳು ಪರಿಪಿನ್ನೇಟ್ ಆಗಿದ್ದು,ಆಲ್ಟರ್ನೇಟ್ ಆದ 8-20 ಜೋಡಿ ಚಿಗುರೆಲೆಗಳನ್ನು ಹೊಂದಿರುತ್ತವೆ; ಚಿಗುರೆಲೆಗಳು ಒಬ್ಲಾಂಗ್, ಓವೇಟ್ –ಎಲಿಪ್ಟಿಕಲ್ ಆಗಿದ್ದು, ಅದರ ಪಕ್ಕಗಳು ಸಮಾನವಾಗಿರುವುದಿಲ್ಲ, ತುದಿ ಮೊಂಡಾಗಿರುತ್ತದೆ. ಪುಷ್ಪಮಂಜರಿ ಅಕ್ಷಾಕಂಕುಳಿನ ನೇತಾಡುವ ಹೂ ಗೊಂಚಲು. ದ್ವಿಲಿಂಗಿ ಹೂ, ಕೆಂಪಿನಿಂದ ಗುಲಾಬಿ ಬಣ್ಣದಲ್ಲಿರುತ್ತದೆ , ಹಳೆಯ ಹೂವುಗಳ ಬಣ್ಣ ಗುಲಾಬಿ . ಹಣ್ಣು, 20-30 ಸೆಂ.ಮೀ ಉದ್ದದ, ಉರುಳೆಯಾಕಾರದ ಮತ್ತು ರೋಮರಹಿತವಾದ ಒಂದು ಪಾಡ್.