ಕನ್ನಡದ ಹೆಸರು : | - |
ಸಾಮಾನ್ಯ ಹೆಸರು : | ಪ್ಯಾನಿಕಲ್ಡ್ ಕ್ಯಾಸಿನ್ |
ಕುಟುಂಬದ ಹೆಸರು : | ಸೆಲಾಸ್ಟ್ರೇಸಿ |
ವೈಜ್ಞಾನಿಕ ಹೆಸರು : | ಕ್ಯಾಸಿನ್ ಪ್ಯಾನಿಕ್ಯುಲೇಟಾ (Wight & Arn.) ಟಿ.ಪಿ. ರಾಮಮೂರ್ತಿ |
ಪ್ರಭೇದದ ಪ್ರಕಾರ: | ಸ್ಥಳೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಏಪ್ರಿಲ್ - ಜುಲೈ |
ಹಣ್ಣಾಗುವ ಅವಧಿ: | |
ಮೂಲ: | ಪಶ್ಚಿಮ ಘಟ್ಟಗಳು |
ರಕ್ತಹೀನತೆ ವಿಪರೀತವಾಗಿದ್ದ ಸಂದರ್ಭದಲ್ಲಿ ತೊಗಟೆಯನ್ನು ರಕ್ತ ಶುದ್ಧಿಕಾರಕವಾಗಿ ಆಂತರಿಕ ಔಷಧಯನ್ನಾಗಿ ನೀಡಲಾಗುತ್ತದೆ, ಅದನ್ನು ಹೃದಯದ ಟಾನಿಕ್ ನಂತೆ ಮತ್ತು ಗಾಯವನ್ನು ಗುಣಪಡಿಸಲು ನೀಡಲಾಗುತ್ತದೆ..
40 ಮೀ ಎತ್ತರದವರೆಗೆ ಇರುವ ದೊಡ್ದ ಎವರ್ ಗ್ರೀನ್, ಬಟ್ರೆಸ್ಡ್ ಮರ,. ತುಂಬಾ ಹಳೆಯ ಮರಗಳಲ್ಲಿರುವ ಕಾಂಡ ಟೊಳ್ಳಾಗಿರುತ್ತದೆ. ತೊಗಟೆ ಬೂದು ಬಣ್ಣದ್ದಾಗಿರುತ್ತದೆ, ನಯವಾಗಿರುತ್ತದೆ, ನೀರಿನ ಜಿನುಗುವಿಕೆಯಿಂದ ಹೊಳೆವ ಕೆಂಪಾಗುತ್ತದೆ. ಎದುರುಬದುರಾದ ಕತ್ತರಿಯಾಕಾರದ ಸರಳ ಎಲೆಗಳು,ಎಲಿಪ್ಟಿಕ್ - ಒಬ್ಲಾಂಗ್, ರೋಮರಹಿತವಾಗಿದ್ದು, ಚರ್ಮದಂತಿರುತ್ತವೆ , ಬುಡ ಚೂಪು ಅಥವಾ ಕೀಲಿಯಾಕಾರದಲ್ಲಿರುತ್ತದೆ, ತುದಿ ಚೂಪು ಅಥವಾ ಸ್ವಲ್ಪ ಹರಿತವಾಗಿರುತ್ತದೆ, ಅಂಚು ಕ್ರೆನೇಟೆಡ್ ಆಗಿರುತ್ತದೆ. ಪುಷ್ಪಮಂಜರಿ ಅಕ್ಷಾಕಂಕುಳಿನ ಡೈಕಾಸಿಯಲ್ ಕೋರಿಂಬೋಸ್ ಸೈಮ್. ಹೂವುಗಳು ದ್ವಿಲಿಂಗಿ, ಬಣ್ಣ ಹಸಿರು-ಹಳದಿ, 1 ಸೆಂ.ಮೀ ಅಗಲ. ಹಣ್ಣು , ಗ್ಲೋಬೊಸ್ – ಎಲಿಪ್ಸಾಯಿಡ್, ಅಪಿಕ್ಯುಲೇಟ್ ಆದ ಒಂದು ಗೊರಟೆ ಹಣ್ಣು, 1-2 ಬೀಜಗಳಿರುತ್ತವೆ.