ಕಾಸ್ಟನೋಸ್ಪರ್ಮಂ ಆಸ್ಟ್ರೇಲ್ ಏ.ಕನ್. ಎಕ್ಸ್ ಮೂಡೀ

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಮೊರೆಟನ್ ಬೇ ಚೆಸ್ಟ್ನಟ್
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಕಾಸ್ಟನೋಸ್ಪರ್ಮಂ ಆಸ್ಟ್ರೇಲ್ ಏ.ಕನ್. ಎಕ್ಸ್ ಮೂಡೀ
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಅಕ್ಟೋಬರ್ - ನವೆಂಬರ್
ಹಣ್ಣಾಗುವ ಅವಧಿ: ಫೆಬ್ರವರಿ- ಏಪ್ರಿಲ್
ಮೂಲ: ಆಸ್ಟ್ರೇಲಿಯಾ, ಸೌತ್ ಈಸ್ಟ್ ಏಷ್ಯಾ

ಉಪಯೋಗಗಳು

ಬೀಜ ಕ್ಯಾಸ್ಟಾನೊಸ್ಪರ್ಮೈನ್ ಎನ್ನುವ ಕಾಂಪೌಂಡ್ ಬೀಜ ಉತ್ಪಾದಿಸುತ್ತದೆ, ಇದರಲ್ಲಿರುವ ಎಚ್ಐವಿ ಪ್ರತಿರೋಧಕ ವಸ್ತುವಿನ ಬಗ್ಗೆ ಪರೀಕ್ಷೆಯಾಗುತ್ತಿದೆ ಮತ್ತು ಅದರಿಂದ ಏಡ್ಸ್ ಚಿಕಿತ್ಸೆಗೆ ಉಪಯುಕ್ತವಾಗಬಹುದು. ಮರದ ಭಾಗಗಳು ರಾಸಾಯನಿಕಗಳನ್ನು ಒಳಗೊಂಡಿರುತ್ತವೆ, ಜಾಗರೂಕತೆಯಿಂದ ಹೊರತೆಗೆದ ಅದರ ಸಾರದಲ್ಲಿ, ಕ್ಯಾನ್ಸರ್ ವಿರೋಧಿ, ಉರಿಯೂತ ಮತ್ತು HIV ವಿರೋಧಿ ಅಂಶಗಳು ಕಂಡು ಬಂದಿವೆ. ಬೀಜಕೋಶಗಳು ಸ್ರಾವನಿರೋಧಕವಾಗಿದ್ದು. ಅವುಗಳನ್ನು ಮಧುಮೇಹ ರೋಗಿಗಳಿಗೆ ಪೋಸ್ಟ್ ಪ್ರಾಂಡಿಯಲ್ ಹೈಪರ್ಗ್ಲೈಸೀಮಿಯಾದ ಚಿಕಿತ್ಸೆಗಾಗಿ ಬಳಸಲಾಗುತ್ತದೆ.

ವಿವರಣೆ

.40 ಮೀ ಎತ್ತರದವರೆಗಿನ ದೊಡ್ಡ, ನಿತ್ಯಹರಿದ್ವರ್ಣ ಮರ. ಇಂಪ್ಯಾರಿಪಿನ್ನೇಟ್ ಎಲೆಗಳು, 11-15 ಚಿಗುರೆಲೆಗಳೊಂದಿಗೆ ಆಲ್ಟರ್ನೇಟ್ ಆಗಿರುತ್ತವೆ; ಚಿಗುರೆಲೆಗಳು ಆಲ್ಟರ್ನೇಟ್ ಆಗಿದ್ದು, ಅಂಡಾಕಾರದ ಆಕಾರದಲ್ಲಿರುತ್ತವೆ. ಪುಷ್ಪಮಂಜರಿ ಒಂದು ರೆಸೀಮ್. 4-5 ಸೆಂ.ಮೀ ಇರುವ ಹಳದಿ ಅಥವಾ ಕಿತ್ತಳೆ ಬಣ್ಣದ,ದ್ವಿಲಿಂಗಿ ಹೂಗಳು ನಂತರದಲ್ಲಿ ಕೆಂಪು ಬಣ್ಣಕ್ಕೆ ತಿರುಗುತ್ತವೆ,. ಹಣ್ಣು ಒಂದು 30 ಸೆಂ.ಮೀ. ವರೆಗಿನ ಉದ್ದದ ಉರುಳೆಯಾಕಾರದ ಪಾಡ್, 1 ರಿಂದ 5 ಬೀಜಗಳಿರುತ್ತವೆ.