ಕನ್ನಡದ ಹೆಸರು : | ಕ್ಯಾಸುರಿನ ಸರ್ವೇ ಮಾರಾ |
ಸಾಮಾನ್ಯ ಹೆಸರು : | ಆಸ್ಟ್ರೇಲಿಯನ್ ಪೈನ್ ಮರ |
ಕುಟುಂಬದ ಹೆಸರು : | ಕ್ಯಾಸುರಿನೇಸಿ |
ವೈಜ್ಞಾನಿಕ ಹೆಸರು : | ಕ್ಯಾಸುರಿನಾ ಇಕ್ವಿಸೆಟಿಫೋಲಿಯಾ ಎಲ್. |
ಪ್ರಭೇದದ ಪ್ರಕಾರ: | ಸ್ಥಳೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ಕನಿಷ್ಠ ಕಾಳಜಿ |
ಹೂಬಿಡುವ ಅವಧಿ: | ಏಪಿಲ್ - ಜೂನ್ |
ಹಣ್ಣಾಗುವ ಅವಧಿ: | ಸೆಪ್ಟೆಂಬರ್ - ಡಿಸೆಂಬರ್ |
ಮೂಲ: | ಸೌತ್ ಈಸ್ಟ್ ಏಷ್ಯಾ, ಆಸ್ಟ್ರೇಲಿಯಾ |
ಬೇರಿನ ಸಾರಗಳನ್ನು ಭೇದಿ, ಅತಿಸಾರ ಮತ್ತು ಹೊಟ್ಟೆ-ನೋವಿನ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಕೊಂಬೆಗಳ ಕಷಾಯವನ್ನು ಊತದ ಚಿಕಿತ್ಸೆಗೆ ಬಳಸಲಾಗುತ್ತದೆ. ತಾಜಾ ತೊಗಟೆ ತುಂಬಾ ಉತ್ತಮವಾದ ಸ್ರಾವನಿರೋಧಕವಾಗಿದೆ. ದೀರ್ಘಕಾಲದ ಅತಿಸಾರ ಮತ್ತು ಭೇದಿಯ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ. ಇದರ ಒಳ ತೊಗಟೆ ಮತ್ತು ಟರ್ಮಿನಾಲಿಯಾ ಕ್ಯಾಟಪ್ಪಾದ ಒಳ ತೊಗಟೆಯನ್ನು ಬೆರೆಸಿ ತಯಾರಿಸಿದ ಕಷಾಯವನ್ನು , ಆಸ್ತಮಾ ಮತ್ತು ಉಸಿರಾಟದ ತೊಂದರೆಯ ಚಿಕಿತ್ಸೆಯಲ್ಲಿ ಸೇವಿಸಲಾಗುತ್ತದೆ.
.35ಮೀ ವರೆಗೆ ಬೆಳೆಯುವ ಏಕರೂಪದ, ನಿತ್ಯಹರಿದ್ವರ್ಣ ಮರ, ಸಾಮಾನ್ಯವಾಗಿ ಪಿರಮಿಡ್ ಆಕಾರದಲ್ಲಿರುತ್ತದೆ; ತೊಗಟೆ ಕಡು ಬೂದು ಅಥವಾ ಕಂದು ಬಣ್ಣದಲ್ಲಿರುತ್ತದೆ. ಎಳೆಯ ಪರ್ಸಿಸ್ಟೆಂಟ್ ಕಾಂಡಗಳ,ಇಂಟರ್ನೋಡ್‌ಗಳಲ್ಲಿ 6-8 ತೊಟ್ಟೆಲೆಗಳ ಸುರುಳಿಗಳಿರುತ್ತವೆ.ಅವುಗಳು ಪ್ಯೂಬೆಸೆಂಟ್ ಆಗಿದ್ದು, 2-3 ಮಿಮೀ, ಒಣಹುಲ್ಲಿನ ಬಣ್ಣ, ಕೊಂಚ ತ್ರಿಕೋನದ ಆಕಾರದಲ್ಲಿರುತ್ತವೆ, ಅಂಚಿನಲ್ಲಿ ಅಸಂಖ್ಯಾತ ಬಿಳಿ ಅಥವಾ ತಿಳಿ ಬಣ್ಣದ ಸಿಲಿಯಾಗಳನ್ನು ಹೊಂದಿರುತ್ತವೆ. ಈ ಪರ್ಸಿಸ್ಟೆಂಟ್ ಕೊಂಬೆಗಳು ಹಲವಾರು ಹಸಿರು ಬಣ್ಣದ, 7-8 ಸಮಾನಾಂತರ ರಿಬ್ ಗಳನ್ನು ಹೊಂದಿರುವ ಹಲವಾರು ಬಿದ್ದಿ ಹೋಗುವಂತಹ ರೆಂಬೆಗಳನ್ನು ಹುಟ್ಟಿಸುತ್ತವೆ; ಚಿಕ್ಕದಾಗಿರುವ ತೊಟ್ಟೆಲೆಗಳು 6-8 ರ ಸುರುಳಿಯಲ್ಲಿದ್ದು, ತೆಳು ಹಸಿರು ಅಥವಾ ಒಣಹುಲ್ಲಿನ ಬಣ್ಣದಲ್ಲಿರುತ್ತವೆ, ಒಟ್ಟಿಗೆ ಅಂಟಿಸಿದಂತಿದ್ದು, ತಳದಲ್ಲಿ ಒಂದುಗೂಡಿರುತ್ತವೆ, ರೋಮರಹಿತವಾಗಿರುತ್ತವೆ, ಅಂಚಿನಲ್ಲಿ ಸಿಲಿಯಾಗಳಿರುತ್ತವೆ. ಗಂಡು ಹೂಗೊಂಚಲುಗಳು ಡೆಸಿಡುಅಸ್ ಶಾಖೆಗಳಲ್ಲಿ ಹೇರಳವಾಗಿರುತ್ತವೆ, ಶಾಶ್ವತ ಶಾಖೆಗಳಲ್ಲಿ ಅಪರೂಪ. ಹೆಣ್ಣು ಹೂಗೊಂಚಲುಗಳು ಅಕ್ಷಾಕಂಕುಳಿನಲ್ಲಿರುತ್ತವೆ ಮತ್ತು ಎಳೆಯ ಶಾಶ್ವತ ಶಾಖೆಗಳ ತುದಿಗಳ ಮೇಲೆ ಹುಟ್ಟುತ್ತವೆ. ಇನ್ಫ್ರಕ್ಟುಸೆನ್ಸೆ ಚಿಕ್ಕದಾಗಿದ್ದು, ಚಪ್ಪಟೆಯಾದ ತುದಿಯೊಂದಿಗೆ ಉರುಳೆ ಅಥವಾ ಸಬ್ –ಗ್ಲೋಬೋಸ್ ಆಕಾರದಲ್ಲಿರುತ್ತದೆ. ಹಣ್ಣು ಒಂದು ವುಡಿಯಾದ, ಒಂದೇ ಬೀಜವಿರುವ, ತೆಳುಕಂದು ಬಣ್ಣದ ಸಮರ.