ಸೀಬಾ ಪೆಂಟಂಡ್ರಾ (ಎಲ್.) ಗೇರ್ಟ್ನ್

ಕನ್ನಡದ ಹೆಸರು : ಬಿಳಿ ಬೂರುಗ
ಸಾಮಾನ್ಯ ಹೆಸರು : ಜಾವಾ ಹತ್ತಿ, ರೇಷ್ಮೆ-ಹತ್ತಿ ಮರ
ಕುಟುಂಬದ ಹೆಸರು : ಮಾಲ್ವೇಸೀ
ವೈಜ್ಞಾನಿಕ ಹೆಸರು : ಸೀಬಾ ಪೆಂಟಂಡ್ರಾ (ಎಲ್.) ಗೇರ್ಟ್ನ್
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ಡೆಸಿಡುಅಸ್
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಜವವರಿ- ಮಾರ್ಚ್
ಹಣ್ಣಾಗುವ ಅವಧಿ: ಸೆಪ್ಟೆಂಬರ್- ಅಕ್ಟೋಬರ್
ಮೂಲ: ಮೆಕ್ಸಿಕೋ, ಮಧ್ಯ ಅಮೇರಿಕಾ, ದಕ್ಷಿಣ ಅಮೇರಿಕಾ

ಉಪಯೋಗಗಳು

ತೊಗಟೆಯ ಕಷಾಯವನ್ನು ಮೂತ್ರವರ್ಧಕವಾಗಿ, ಕಾಮೋದ್ದೀಪಕವಾಗಿ, ಜೊತೆಗೆ ತಲೆನೋವು ಮತ್ತು ಟೈಪ್ 2 ಮಧುಮೇಹದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಸೈಕೆಡೆಲಿಕ್ ಪಾನೀಯ ಅಯಾಹುಸ್ಕಾದ ಕೆಲವು ಮಾದರಿಗಳಲ್ಲಿ ಇದನ್ನು ಅಡೆಟೀವ್ ಆಗಿ ಬಳಸಲಾಗುತ್ತದೆ. ಅದರ ಬೀಜಗಳಿಂದ ಹೊರತೆಗೆದ ಎಣ್ಣೆಯನ್ನು ವೆಜಿಟೆಬಲ್ ಎಣ್ಣೆಯಾಗಿ ಬಳಸಲಾಗುತ್ತದೆ.

ವಿವರಣೆ

.ನಿತ್ಯಹರಿದ್ವರ್ಣ , 30-40 ಮೀ ಎತ್ತರದ,ದೊಡ್ಡ ಡೆಸಿಡುಅಸ್ ಮರ. ಆಸರೆಯ ಬುಡಗಳಿರುತ್ತವೆ. ನಯವಾದ ಹಸಿರು ಅಥವಾ ಹಸಿರು-ಬೂದು ಬಣ್ಣದ ತೊಗಟೆಯ ಮೇಲೆ ಶಂಕುವಿನಾಕಾರದ ಮುಳ್ಳುಗಳು ಚದುರಂತಿರುತ್ತವೆ, 1.5 ಸೆಂ.ಮೀ ಉದ್ದದ, ಎಳೆಯ ಶಾಖೆಗಳು ರೋಮರಹಿತ ಅಥವಾ ಪ್ಯೂಬೆಸೆಂಟ್ ಆಗಿರುತ್ತವೆ. ಹಸ್ತಾಕಾರದ ಭಿನ್ನಪತ್ರಗಳು, 5-9 ಚಿಗುರೆಲೆಗಳೊಂದಿಗೆ ಆಲ್ಟರ್ನೇಟ್ ಆಗಿರುತ್ತವೆ; ಚಿಗುರೆಲೆಗಳು ಎಲಿಪ್ಟಿಕ್, ಒಬ್ವೇಟ್ –ಒಬ್ಲಾಂಗ್ ಆಕಾರದಲ್ಲಿದ್ದು, ರೋಮರಹಿತವಾಗಿರುತ್ತವೆ, ಬುಡ ಚೂಪು ಅಥವಾ ಕೀಲಿ ಆಕಾರದಲ್ಲಿರುತ್ತದೆ,ತುದಿ ಚೂಪು ಅಥವಾ ಮೊನಚಾಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ 3-10 ಗೊಂಚಲುಗಳಲ್ಲಿದ್ದು, ಅಕ್ಷಾಕಂಕುಳಿನಲ್ಲಿರುತ್ತದೆ, ಅಪರೂಪವಾಗಿ ಒಂಟಿಯಾಗಿರುತ್ತವೆ. ದ್ವಿಲಿಂಗಿ ಹೂಗಳು, ಕೆನೆ ಬಿಳಿ ಅಥವಾ ಗುಲಾಬಿ ಬಣ್ಣದಲ್ಲಿರುತ್ತವೆ; ದಳಗಳು ಹೊರಗೆ ರೋಮರಹಿತವಾಗಿರುತ್ತವೆ, ಒಳಗೆ ರೇಷ್ಮೆಯಂತಹ ನೀಳವಾದ ರೋಮಗಳಿರುತ್ತವೆ. ಹಣ್ಣು ಒಂದು ನಯವಾದ, ಕಂದು ಬಣ್ಣದ ಕ್ಯಾಪ್ಸುಲ್, 10-26 ಸೆಂ.ಮೀ ಉದ್ದ, ಒಬ್ಲಾಂಗ್ –ಎಲಿಪ್ಸಾಯ್ಡ್ ಆಕಾರದಲ್ಲಿದ್ದು, ವುಡಿಯಾಗಿರುತ್ತದೆ. ಹಲವಾರು ಬೀಜಗಳಿರುತ್ತವೆ, ಬಿಳಿ ಅಥವಾ ಬೂದು ಬಣ್ಣದ ರೇಷ್ಮೆಯಂತಹ ತುಪ್ಪಟದಲ್ಲಿ ಹುದುಗಿರುತ್ತವೆ.