ಸೀಬಾ ಸ್ಪೆಸಿಯೋಸಾ (ಏ.ಎಸ್ಟಿ.-ಹಿಲ್., ಏ.ಜಸ್. & ಕ್ಯಾಂಬೆಸ್.) ರವೆನ್ನಾ

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಸಿಲ್ಕ್ ಫಾಸ್ ಟ್ರೀ
ಕುಟುಂಬದ ಹೆಸರು : ಮಾಲ್ವೇಸಿ
ವೈಜ್ಞಾನಿಕ ಹೆಸರು : ಸೀಬಾ ಸ್ಪೆಸಿಯೋಸಾ (ಏ.ಎಸ್ಟಿ.-ಹಿಲ್., ಏ.ಜಸ್. & ಕ್ಯಾಂಬೆಸ್.) ರವೆನ್ನಾ
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಸೆಪ್ಟೆಂಬರ್ - ಅಕ್ಟೋಬರ್
ಹಣ್ಣಾಗುವ ಅವಧಿ: ಮಾರ್ಚ್ - ಮೇ
ಮೂಲ: ಸೌತ್ ಅಮೇರಿಕಾ

ಉಪಯೋಗಗಳು

lಸಿಲ್ಕ್ ಫ್ಲೋಸ್ ಮರವನ್ನು ಹೆಚ್ಚಾಗಿ ಅಲಂಕಾರಿಕ ಉದ್ದೇಶಗಳಿಗಾಗಿ ಬೆಳೆಸಲಾಗುತ್ತದೆ.ವುಡ್ ಪಲ್ಪ್ ಅನ್ನು ದೋಣಿಗಳನ್ನು ತಯಾರಿಸಲು, ಮತ್ತು ಕಾಗದವನ್ನು ತಯಾರಿಸಲು ಬಳಸಬಹುದು. ಹಗ್ಗಗಳನ್ನು ಮಾಡಲು ತೊಗಟೆಯನ್ನು ಬಳಸಲಾಗುತ್ತದೆ. ಬೀಜಗಳಿಂದ ವೆಜಿಟಬಲ್ ಆಯಿಲ್ ಅನ್ನು ತೆಗೆಯಬಹುದು.

ವಿವರಣೆ

25 ಮೀ ಎತ್ತರದವರೆಗಿನ ಡೆಸಿಡುಅಸ್ ಮರ. ಎಳೆ ಮರಗಳಲ್ಲಿರುವ ತೊಗಟೆ ಹಸಿರಾಗಿರುತ್ತದೆ, ಹಲವಾರು ಸ್ಪೈನ್‌ಗಳಿಂದ ಆವೃತವಾಗಿರುತ್ತದೆ. ಹಸ್ತದಾಕಾರದಲ್ಲಿರುವ ಭಿನ್ನಪತ್ರಗಳು 5 ರಿಂದ 7 ಚಿಗುರೆಲೆಗಳನ್ನು ಹೊಂದಿರುತ್ತವೆ ; ಚಿಗುರೆಲೆಗಳು ಬಹುತೇಕ ಲ್ಯಾನ್ಸಿಲೇಟ್ ಆಗಿದ್ದು, ರೋಮರಹಿತವಾಗಿರುತ್ತವೆ, ಚೂಪಾದ ಬುಡ, ಚೂಪಾದ ತುದಿ ಇರುವ, ಅವುಗಳ ಅಂಚು ಗರಗಸದಂತಿರುತ್ತದೆ. ಪುಷ್ಫ ಮಂಜರಿ ಕವಲುಮೂಲೆಯಲ್ಲಿ ಅಥವಾ ಕೊಂಬೆಗಳ ತುದಿಯಲ್ಲಿ ಒಂದು ಅಥವಾ ಹಲವಾರು ಹೂಗೊಂಚಲುಗಳ ಸಮೂಹವಾಗಿರುತ್ತದೆ. ಈ ದ್ವಿಲಿಂಗಿ ಹೂಗಳು ಮಧ್ಯದಲ್ಲಿ ಕೆನೆ-ಬಿಳಿ ಬಣ್ಣ ಮತ್ತು ತುದಿಯಲ್ಲಿ ಗುಲಾಬಿ ಬಣ್ಣವನ್ನು ಹೊಂದಿರುತ್ತವೆ. ಹಣ್ಣು ಒಂದು ಡಿಹಿಸೆಂಟ್ ಕ್ಯಾಪ್ಸುಲ್ ಆಗಿದ್ದು, ಸುಮಾರು 20 ಸೆಂ.ಮೀ ಉದ್ದವಿರುತ್ತದೆ, ಬೀಜಗಳು ಬಿಳಿ ಹತ್ತಿಯಂತಹ ಮುದ್ದೆಯಲ್ಲಿ ಹುದುಗಿರುತ್ತವೆ. .