ಸೆಂಟ್ರೋಲೋಬಿಯಂ ಟೊಮೆಂಟೋಸಮ್ ಗಿಲ್. ಎಕ್ಸ್ ಬೆಂತ್

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಅರಾರಿಬಾ ರೋಸಾ
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಸೆಂಟ್ರೋಲೋಬಿಯಂ ಟೊಮೆಂಟೋಸಮ್ ಗಿಲ್. ಎಕ್ಸ್ ಬೆಂತ್
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ದಕ್ಷಿಣ ಅಮೇರಿಕಾ

ಉಪಯೋಗಗಳು

.ಸ್ಥಳೀಯವಾಗಿ ಕಾಡಿದ್ದ ಪ್ರದೇಶಗಳಲ್ಲಿ ಮತ್ತೆ ಮರ ಬೆಳೆಸುವ ಮರು ಅರಣ್ಯೀಕರಣ ಯೋಜನೆಗಳಲ್ಲಿ ಇದನ್ನು ಬಳಸಲಾಗುತ್ತದೆ. ಇದು ಬಹಳ ಅಲಂಕಾರಿಕವಾದ ಮರ, ಇದನ್ನು ಕ್ಯಾಬಿನೆಟ್ ತಯಾರಿಕೆ, ಪೀಠೋಪಕರಣಗಳು, ಹಡಗಿನ ತಯಾರಿಕೆಗೆ, ಒಳಾಂಗಣ ಮತ್ತು ಹೊರಾಂಗಣದ ಹೈಡ್ರಾಲಿಕ್ ಕೆಲಸಗಳಿಗೆ ಬಳಸಲಾಗುತ್ತದೆ, ಮರದ ತೊಲೆಗಳು, ದೋಣಿಗಳು, ವ್ಯಾಗನ್ ಗಳ ತಯಾರಿಕೆಗೆ ಹಾಗೂ ಸಾಮಾನ್ಯ ಮರಗೆಲಸಕ್ಕೂ ಬಳಸಲಾಗುತ್ತದೆ.

ವಿವರಣೆ

ಹರಡಿದ ಮೇಲ್ಭಾಗವಿರುವ ದಟ್ಟವಾದ, ಡೆಸಿಡುಅಸ್ ಮರ, ಎತ್ತರ 10-12 ಮೀ. ಎಲೆಗಳು ಇಂಪ್ಯಾರಿಪಿನ್ನೇಟ್ ಆಗಿರುತ್ತವೆ ; 13-17 ಚಿಗುರೆಲೆಗಳು, ಒಬ್ಲಾಂಗ್ –ಓವೇಟ್ , ಪ್ಯೂಬೆಸೆಂಟ್ ಆಗಿರುತ್ತವೆ, ಬುಡ ಓರೆಯಾಗಿದ್ದು ಮೊಟಕಾಗಿರುತ್ತದೆ. ಪುಷ್ಪ ಮಂಜರಿ ಒಂದು ಸಂಕೀರ್ಣ ಪುಷ್ಪಗುಚ್ಛ (ಪ್ಯಾನಿಕ್ಲ್). ಪ್ಯಾಪಿಲಿಯೋನೇಸಿಯಸ್ ಆದ ಹೂಗಳು, ಹಳದಿ ಬಣ್ಣದಲ್ಲಿರುತ್ತವೆ. ಮುಳ್ಳುಗಳಿರುವ ಈ ಹಣ್ಣು, ಅಗಲವಾದ ಫಾಲ್ಕೇಟ್- ಓವೇಟ್ ಆಕಾರದ ರೆಕ್ಕೆಯಿರುವ ಒಂದು ಪಾಡ್ ಆಗಿರುತ್ತದೆ.