ಸೆಸೆರ್ಬೆರಾ ಓಡೊಲ್ಲಮ್ ಗೇರ್ಟ್ನ್

ಕನ್ನಡದ ಹೆಸರು : ಚಂಡೆ, ಚಂಡು ಹೂವು
ಸಾಮಾನ್ಯ ಹೆಸರು : ಪಾಂಗ್ ಪಾಂಗ್ ಮರ
ಕುಟುಂಬದ ಹೆಸರು : ಅಪೋಸೈನೇಸಿ
ವೈಜ್ಞಾನಿಕ ಹೆಸರು : ಸೆಸೆರ್ಬೆರಾ ಓಡೊಲ್ಲಮ್ ಗೇರ್ಟ್ನ್
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಜನವರಿ- ಮಾರ್ಚ್
ಹಣ್ಣಾಗುವ ಅವಧಿ: ಫೆಬ್ರವರಿ- ಏಪ್ರಿಲ್
ಮೂಲ: ದಕ್ಷಿಣ ಏಷ್ಯಾ, ಭಾರತ

ಉಪಯೋಗಗಳು

ಹುಳುಕಡ್ಡಿಯ ಚಿಕಿತ್ಸೆಯಲ್ಲಿ ಎಲೆಗಳನ್ನು ಚರ್ಮದ ಮೇಲೆ ಬಳಸಲಾಗುತ್ತದೆ. ಹೆರಿಗೆಯ ನಂತರದ ಆರೊಮ್ಯಾಟಿಕ್ ಸ್ನಾನಕ್ಕೆ ಎಲೆಯ ಕಷಾಯವನ್ನು ಸೇರಿಸಲಾಗುತ್ತದೆ. ಕಜ್ಜಿತುರಿಕೆಯ ಚಿಕಿತ್ಸೆಯಲ್ಲಿ ಎಣ್ಣೆಯನ್ನು ಚರ್ಮದ ಮೇಲೆ ಲೇಪವಾಗಿ ಬಳಸಲಾಗುತ್ತದೆ. ಮತ್ತು ತಲೆಯಲ್ಲಿಯ ಹೇನನ್ನು ಕೊಲ್ಲಲು ಇದನ್ನು ಕೂದಲಿನ ಟಾನಿಕ್ ಆಗಿ ಬಳಸಲಾಗುತ್ತದೆ. ಹಣ್ಣುಗಳನ್ನು ಜೈವಿಕ ಕೀಟನಾಶಕಗಳು ಮತ್ತು ಡಿಯೋಡರೆಂಟ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ.

ವಿವರಣೆ

. 6 ಮೀ ಎತ್ತರದ, ಚಿಕ್ಕ ನಿತ್ಯಹರಿದ್ವರ್ಣ ಮರ, ಹಸಿರು ಮಿಶ್ರಿತ ಕಂದು ಬಣ್ಣದ ತೊಗಟೆಯಿರುವ,ಇದರ ಲ್ಯಾಟೆಕ್ಸ್ ಹಾಲಿನಂತಿರುತ್ತದೆ. ಎಲೆಗಳು ಸರಳವಾಗಿರುತ್ತವೆ, ಆಲ್ಟರ್ನೇಟ್ ಆಗಿರುತ್ತವೆ, ಕೊಂಬೆಗಳ ತುದಿ ಕಿರೀಟದಂತಿರುತ್ತದೆ, ಲ್ಯಾನ್ಸಿಲೇಟ್ ಅಥವಾ ಒಬ್ಲ್ಯಾನ್ಸಿಯೇಟ್ ಆಗಿದ್ದು, ರೋಮರಹಿತವಾಗಿರುತ್ತವೆ, ಬುಡ ಕ್ಯೂನೇಟ್ ಅಥವಾ ಅಟೆನ್ಯೂಯೇಟ್, ತುದಿ ಚೂಪಾಗಿರುತ್ತದೆ ಅಥವಾ ಮೊನಚಾಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪ ಮಂಜರಿ ಒಂದು ಸೂಡೊಟರ್ಮಿನಲ್ ಗೊಂಚಲು ಪುಷ್ಪ(ಸೈಮ್).ಬಿಳಿ ಬಣ್ಣದ ದ್ವಿಲಿಂಗಿ ಹೂಗಳು, ಕೊಳವೆ ಲಾಳಿಕೆಯಂತಿರುತ್ತದೆ.ಇದು ಒಂದು ಗೊರಟೆ ಹಣ್ಣು, ಹಸಿರು ಬಣ್ಣದ ಗೋಳಾಕಾರ ಅಥವಾ ಅಂಡಾಕಾರದ, ಹಣ್ಣು ಮಾಗಿದ ನಂತರ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ; 1-2 ಬೀಜಗಳಿರುತ್ತವೆ.