ಅಗಾಥಿಸ್ ರೋಬಸ್ಟಾ (ಸಿ.ಮೂರ್ ಎಕ್ಸ್ ಎಫ್.ಮುಯೆಲ್.) ಎಫ್.ಎಂ.ಬೈಲಿ

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಕ್ವೀನ್ಸ್‌ಲ್ಯಾಂಡ್ ಕೌರಿ, ನಯವಾದ ತೊಗಟೆಯ ಕೌರಿ
ಕುಟುಂಬದ ಹೆಸರು : ಅರೌಕಾರಿಯೇಸಿ
ವೈಜ್ಞಾನಿಕ ಹೆಸರು : ಅಗಾಥಿಸ್ ರೋಬಸ್ಟಾ (ಸಿ.ಮೂರ್ ಎಕ್ಸ್ ಎಫ್.ಮುಯೆಲ್.) ಎಫ್.ಎಂ.ಬೈಲಿ
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ಆಸ್ಟ್ರೇಲಿಯಾ

ಉಪಯೋಗಗಳು

.ತೊಗಟೆಯಿಂದ ಸಿಗುವ ಡ್ಯಾಮರ್ ಎಂದು ಕರೆಯಲ್ಪಡುವ ರಾಳವನ್ನು - ವಾರ್ನಿಷ್, ಮೆರುಗೆಣ್ಣೆಗಳು, ಆಯಿಲ್ ಪೈಂಟ್ ಮುಂತಾದವುಗಳನ್ನು ತಯಾರಿಸಲು ಬಳಸಲಾಗುತ್ತದೆ. ಒಳ ತೊಗಟೆಯಿಂದ ಸಿಗುವ ನಾರನ್ನು ಹಗ್ಗಗಳು ಮತ್ತು ಬಲೆಗಳನ್ನು ಮಾಡಲು ಬಳಸಲಾಗುತ್ತದೆ.

ವಿವರಣೆ

.30 ಮೀ ಎತ್ತರದವರೆಗಿರುವ ಸಾಧಾರಣದಿಂದ ದೊಡ್ಡ ಗಾತ್ರದ ನಿತ್ಯಹರಿದ್ವರ್ಣ ಕೋನಿಫೆರಸ್ ಮರ. ಪ್ರಾಥಮಿಕ ಚಿಗುರುಗಳ ಮೇಲೆ ಎಲೆಗಳು ಸುರುಳಿಯಾಕಾರದಲ್ಲಿ ಜೋಡಿಸಲ್ಪಟ್ಟಿರುತ್ತವೆ, ಪಕ್ಕದ ಚಿಗುರುಗಳ ಮೇಲೆ ಎದುರುಬದುರಾಗಿ ಸಬ್- ಆಪೋಸಿಟ್ ಆಗಿರುತ್ತವೆ, ಉದ್ದವಾಗಿ ಅಂಡಾಕಾರದಲ್ಲಿದಲ್ಲಿರುವ ಇವು, ಸಂಪೂರ್ಣವಾಗಿ ತೊಟ್ಟುಗಳ ಮೇಲಿರುತ್ತವೆ ಹಾಗೂ ಸ್ಟಿಫ್ ಆಗಿರುತ್ತವೆ. ವೇನ್ ಗಳು ಸಪೂರಾಗಿದ್ದು,ಉದ್ದವಾಗಿರುತ್ತವೆ,ಬಹುತೇಕ ಸಮಾನಾಂತರವಾಗಿರುತ್ತವೆ. ಗೋಳಾಕಾರದಿಂದ ಸಿಲಿಂಡರ್ ನ ಆಕಾರದಲ್ಲಿರುವ ಕೋನ್ಗಳು, 340-440 ಸ್ಕೇಲ್ ನಲ್ಲಿರುತ್ತವೆ. ಸ್ವಲ್ಪ ಸಮಯದವರೆಗೆ ಪರಾಗದ ಕೋನ್‌ಗಳಿಗೆ ತೊಟ್ಟಿದ್ದು ನಂತರದಲ್ಲಿ ಹೆಚ್ಚುಕಡಿಮೆ ತೊಟ್ಟಿಲ್ಲದೆ ಅಂಟಿಕೊಂಡಿರುತ್ತವೆ, ಸಾಮಾನ್ಯವಾಗಿ ತೆಳ್ಳಗಿನ ಎಲೆಗಳ ಕೊಂಬೆಗಳ ಕವಲುಮೂಲೆಯಲೆಯಲ್ಲಿರುವ ಇವು, ಸಿಲಿಂಡರಿನ ಆಕಾರದಲ್ಲಿರುತ್ತವೆ, 600-1300 ಮೈಕ್ರೊಸ್ಪೊರೊಫಿಲ್‌ಗಳನ್ನು ಹೊಂದಿರುವ, ಇವುಗಳು ಕೆಳಭಾಗದಲ್ಲಿ 2-8 ಪರಾಗ ಚೀಲಗಳನ್ನು ಹೊಂದಿರುತ್ತದೆ. ಬೀಜಗಳು ಸ್ವಲ್ಪ ಹೃದಯಾಕಾರದಲ್ಲಿದ್ದು, ರೆಕ್ಕೆಗಳನ್ನು ಹೊಂದಿರುತ್ತವೆ.