ಕನ್ನಡದ ಹೆಸರು : | ಕಲಗರಿಕೆ, ಮದಗರಿ ಬೇವು |
ಸಾಮಾನ್ಯ ಹೆಸರು : | ಇಂಡಿಯನ್ ಮಹಾಗನಿ, ಚಿತ್ತ ಗಾಂಗ್ ಮರ |
ಕುಟುಂಬದ ಹೆಸರು : | ಮೆಲಿಯೇಸಿ |
ವೈಜ್ಞಾನಿಕ ಹೆಸರು : | ಚುಕ್ರಾಸಿಯಾ ಟ್ಯಾಬ್ಯುಲಾರಿಸ್ A. ಜಸ್ |
ಪ್ರಭೇದದ ಪ್ರಕಾರ: | ಸ್ಥಳೀಯ |
ಪ್ರಕೃತಿ ಶಾಸ್ತ್ರ : | ಪತನಶೀಲ |
ಸಂರಕ್ಷಣೆಯ ಸ್ಥಿತಿ : | ಕನಿಷ್ಠ ಕಾಳಜಿ |
ಹೂಬಿಡುವ ಅವಧಿ: | ಏಪ್ರಿಲ್- ಮೇ |
ಹಣ್ಣಾಗುವ ಅವಧಿ: | ಡಿಸೆಂಬರ್- ಮಾರ್ಚ್ |
ಮೂಲ: | ಭಾರತದ ಉಪಖಂಡ |
ಪ್ರಮುಖವಾಗಿ ಇದನ್ನು ಉತ್ತಮವಾದ ಪೀಠೋಪಕರಣಗಳು, ಚರಕಿ ಕೆಲಸ(ಟರ್ನರಿಗಳು), ಬಾಗಿಲುಗಳು, ಕಿಟಕಿಗಳು ಮತ್ತು ಹಗುರಾದ ನೆಲಹಾಸಿಗೆಗೆ ಉಪಯೋಗಿಸಲಾಗುತ್ತದೆ. ಹೂವುಗಳಲ್ಲಿ ಕೆಂಪು ಮತ್ತು ಹಳದಿ ಬಣ್ಣದ ವರ್ಣದ್ರವ್ಯ (ಡೈ) ಇರುತ್ತದೆ. ತೊಗಟೆ ಮತ್ತು ಎಲೆಗಳು ಲಾಭದಾಯಕವಾದ ಅಂಟುಗಳು ಮತ್ತು ಟ್ಯಾನಿನ್‌ಗಳನ್ನು ಹೊಂದಿರುತ್ತವೆ ಮತ್ತು ಒಗಚಾದ ತೊಗಟೆ ಔಷಧೀಯ ಉಪಯೋಗಗಳನ್ನು ಹೊಂದಿದೆ. ಕಾಫಿ ತೋಟಗಳಲ್ಲಿ ನೆರಳಿನ ಮರವಾಗಿ ಇದನ್ನು ನೆಡಲಾಗುತ್ತದೆ.
35 ಮೀ ಎತ್ತರದವರೆಗೆ ಇರುವ ದೊಡ್ದ, ಡೆಸಿಡುಅಸ್ ಮರ. ಅಡ್ಡಾದಿಡ್ಡಿಯಾಗಿರುವ ತೆಳುವಾದ, ಹೊಳೆವ ಗುಲಾಬಿ-ಕೆಂಪು. ಬಣ್ಣದ ಚಕ್ಕೆಗಳಿರುವ ದಪ್ಪನಾದ ತೊಗಟೆ ಗಾಢ ಕಂದುಬಣ್ಣದ್ದಾಗಿರುತ್ತದೆ. ಪರಿಪಿನ್ನೇಟಾದ ಎಲೆಗಳು, 12-50 ಸೆಂ.ಮೀ ಉದ್ದವಿದ್ದು, ಆಲ್ಟರ್ನೇಟ್ ಆಗಿರುತ್ತವೆ, ಪುಲ್ವಿನೇಟ್ ಆಗಿರುತ್ತವೆ; ಇರುವ 10-24 ಚಿಗುರೆಲೆಗಳು, ಆಲ್ಟರ್ನೇಟ್ ಅಥವಾ ಸಬ್-ಆಪೋಸಿಟ್ ಆಗಿರುತ್ತವೆ; ಚಿಗುರೆಲೆಗಳು ಸಣ್ಣದಾಗಿ ಓವೇಟ್ ನಿಂದ ಲ್ಯಾನ್ಸಿಲೇಟ್ ಆಗಿರುತ್ತವೆ,ಎಲೆಗಳು ಚರ್ಮದಂತಿದ್ದು, ಮೇಲೆ ರೋಮರಹಿತವಾಗಿರುತ್ತವೆ, ಕೆಳಗೆ ಮೃದುತುಪ್ಪಳದಿಂದ ಕೂಡಿರುತ್ತವೆ, ಬುಡ ಓರೆಯಾಗಿರುತ್ತದೆ, ತುದಿ ಚೂಪಾಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ, ಬೂದುಬಣ್ಣದ, ಮೃದುತುಪ್ಪಳದಿಂದ ಕೂಡಿದ ತುದಿಯ ಪ್ಯಾನಿಕಲ್. ದ್ವಿಲಿಂಗಿ ಹೂವುಗಳು, ಹಳದಿ-ಬಿಳಿ ಬಣ್ಣದಲ್ಲಿರುತ್ತವೆ. ಹಣ್ಣು 4 ಸೆಂ ಅಗಲದ, , 4-5 ಕವಾಟುಗಳಿರುವ, ಗೋಳಾಕಾರದ ಒಂದು ಕ್ಯಾಪ್ಸ್ಯೂಲ್, ಅದು ರೋಮರಹಿತವಾಗಿರುತ್ತದೆ; ಅನೇಕ ಬೀಜಗಳಿದ್ದು, ಅವು ತಳದಲ್ಲಿ ಅಗಲವಾದ ರೆಕ್ಕೆಗಳನ್ನು ಹೊಂದಿರುತ್ತವೆ.