ಸಿನ್ನಮೋಮಮ್ ವೆರಮ್ ಜೆ.ಪ್ರೆಸ್.

ಕನ್ನಡದ ಹೆಸರು : ಲವಂಗಚಕ್ಕೆ, ಲವಂಗಪಟ್ಟೆ
ಸಾಮಾನ್ಯ ಹೆಸರು : ದಾಲ್ಚಿನ್ನಿ ಮರ
ಕುಟುಂಬದ ಹೆಸರು : ಲಾರೇಸಿ
ವೈಜ್ಞಾನಿಕ ಹೆಸರು : ಸಿನ್ನಮೋಮಮ್ ವೆರಮ್ ಜೆ.ಪ್ರೆಸ್.
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಜನವರಿ - ಮಾರ್ಚ್
ಹಣ್ಣಾಗುವ ಅವಧಿ: ಜೂನ್- ಆಗಸ್ಟ್
ಮೂಲ: ಶ್ರೀಲಂಕಾ, ಭಾರತ

ಉಪಯೋಗಗಳು

sದಾಲ್ಚಿನ್ನಿ ತೊಗಟೆ ಆಸ್ಟ್ರಿನ್ಜೆಂಟ್,ಸ್ಟಿಮುಲೆಂಟ್ ಮತ್ತು ಕಾರ್ಮಿನೇಟಿವ್ ಆಗಿದೆ. ಇದು ವಾಕರಿಕೆ ಮತ್ತು ವಾಂತಿಯನ್ನು ತಡೆಯುವ ಗುಣವನ್ನು ಹೊಂದಿದೆ. ದಾಲ್ಚಿನ್ನಿ ತೊಗಟೆಯ ಎಣ್ಣೆಯನ್ನು ವಿವಿಧ ರೀತಿಯ ಹಲ್ಲುಗಳ ಮತ್ತು ಔಷಧಿಗಳ ತಯಾರಿಕೆಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಅದರ ತೈಲಗಳನ್ನು ಆಹಾರ ಸುವಾಸನೆಯ ಉದ್ಯಮದಲ್ಲಿ ಬಳಸಲಾಗುತ್ತದೆ. ಅಲ್ಲದೆ ತಂಬಾಕು ಸುವಾಸನೆಗಳಲ್ಲಿ ಮತ್ತು ಧೂಪದ್ರವ್ಯಕ್ಕಾಗಿ ಬಳಸಲಾಗುತ್ತದೆ. ಕೆಲವು ಸುಗಂಧ ದ್ರವ್ಯಗಳಲ್ಲಿ ಇದರ ಬಳಕೆ ಸೀಮಿತವಾಗಿದೆ.

ವಿವರಣೆ

. 10-20 ಮೀ ಎತ್ತರದ ನಿತ್ಯಹರಿದ್ವರ್ಣ ಮರಗಳು. ಬಲವಾದ ದಾಲ್ಚಿನ್ನಿ ವಾಸನೆ ಇರುವ ತೊಗಟೆ ನಯವಾಗಿದ್ದು, ಕಂದು ಬಣ್ಣದಲ್ಲಿರುತ್ತದೆ; ಬುಡ ಬಟ್ರೆಸ್ಡ್ ಆಗಿರುತ್ತದೆ. ಎಲೆಗಳು ಸರಳ, ಆಪೋಸಿಟ್ ಅಥವಾ ಸಬ್ - ಆಪೋಸಿಟ್, ಅಪರೂಪವಾಗಿ ಆಲ್ಟರ್ನೇಟ್ ಆಗಿರುತ್ತವೆ, ಓವೇಟ್, ಎಲಿಪ್ಟಿಕ್ ಓವೇಟ್ ನಿಂದ ಎಲಿಪ್ಟಿಕ್ –ಲ್ಯಾನ್ಸಿಲೇಟ್ ಆಗಿದ್ದು, ರೋಮರಹಿತವಾಗಿರುತ್ತವೆ, ಬುಡ ಅಕ್ಯೂಟ್ ನಿಂದ ಅಟ್ಟೆನ್ಯುಏಟ್ ಆಗಿರುತ್ತದೆ, ತುದಿ ಅಕ್ಯೂಟ್ – ಅಕ್ಯುಮಿನೇಟ್ ಆಗಿದ್ದು, ಅಂಚು ಸಂಪೂರ್ಣವಾಗಿರುತ್ತದೆ. ವೆನೇಶನ್ ಟ್ರೈ ನರ್ವ್ಡ್ ರೀತಿಯಲ್ಲಿರುತ್ತದೆ. ಪುಷ್ಪಮಂಜರಿ ಟರ್ಮಿನಲ್ ಅಥವಾ ಅಕ್ಷಾಕಂಕುಳಿನ ಪ್ಯಾನಿಕಲ್ಸ್. ದ್ವಿಲಿಂಗಿ ಹೂಗಳು, ಹಸಿರು ಮಿಶ್ರಿತ ಹಳದಿ ಬಣ್ಣದಲ್ಲಿರುತ್ತವೆ. ಹಣ್ಣು 1-2 ಸೆಂ ಅಳತೆಯ , ಅಂಡಾಕಾರದ, ಗಾಢ ನೇರಳೆ ಬಣ್ಣದ ಬೆರ್ರಿ. ಒಂದು ಬೀಜವನ್ನು ಹೊಂದಿರುತ್ತದೆ.