ಸಿಥರೆಕ್ಸಿಲಮ್ ಸ್ಪಿನೋಸಮ್ L.

ಕನ್ನಡದ ಹೆಸರು : ಬೇಲಿಯ ಪಾರಿಜಾತ
ಸಾಮಾನ್ಯ ಹೆಸರು : ಫ್ಲೋರಿಡಾ ಫಿಡಲ್ವುಡ್
ಕುಟುಂಬದ ಹೆಸರು : ವರ್ಬೆನೇಸಿ
ವೈಜ್ಞಾನಿಕ ಹೆಸರು : ಸಿಥರೆಕ್ಸಿಲಮ್ ಸ್ಪಿನೋಸಮ್ L.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ವರ್ಷಪೂರ್ತಿ
ಹಣ್ಣಾಗುವ ಅವಧಿ: ವರ್ಷಪೂರ್ತಿ
ಮೂಲ: ಕೆರಿಬಿಯನ್, ಟ್ರಾಪಿಕಲ್ ಅಮೇರಿಕಾ

ಉಪಯೋಗಗಳು

ಎಳೆಯ ಕೊಂಬೆಗಳ ಕಷಾಯವನ್ನು ಮಕ್ಕಳ ಥ್ರಷ್ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ತೊಗಟೆಯ ಕಷಾಯವನ್ನು ನೆಗಡಿಯ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಪೀಠೋಪಕರಣಗಳು, ಗಿಟಾರ್‌ಗಳಂತಹ ಸಂಗೀತ ವಾದ್ಯಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ ಜೊತೆಗೆ ಕಟ್ಟಡದ ಸಾಮಾನ್ಯ ನಿರ್ಮಾಣದ ಕೆಲಸದಲ್ಲಿ, ಕಿಟಕಿಗಳು, ಬಾಗಿಲುಗಳು, ತೊಲೆಗಳಿಗೂ ಸಹ ಬಳಸಲಾಗುತ್ತದೆ. ಇದು ಸುಲಭವಾಗಿ ಕೊಳೆಯದ ಮತ್ತು ಗೆದ್ದಲು ಹತ್ತದ ಮರವಾದ್ದರಿಂದ, ಇದು ಬೇಲಿ ಕಂಬಗಳು ಮತ್ತು ಕಟ್ಟಡದ ಇತರ ಒರಟು ಕೆಲಸಗಳಿಗೆ ಉಪಯುಕ್ತವಾಗಿದೆ.

ವಿವರಣೆ

15 ಮೀ ಎತ್ತರದವರೆಗಿನ ದೊಡ್ಡ ಪೊದೆಗಳು ಅಥವಾ ಚಿಕ್ಕ, ನಿತ್ಯಹರಿದ್ವರ್ಣ ಮರಗಳು. 4- ಕೋನೀಯ ಕೊಂಬೆಗಳು ಮತ್ತು ಕಿರುಕೊಂಬೆಗಳು. ಎಲೆಗಳು ಸರಳ, ಆಪೋಸಿಟ್, ಡೆಕ್ಯುಸೇಟ್, ಓವೇಟ್, ಒಬ್ಲಾಂಗ್ –ಎಲಿಪ್ಟಿಕ್ , ಲ್ಯಾನ್ಸಿಲೇಟ್ , ರೋಮರಹಿತವಾಗಿದ್ದು, ಕಾಗದಂತಿರುತ್ತವೆ, ಬುಡ ಕ್ಯೂನಿಯೇಟ್ –ಅಕ್ಯೂಟ್, ತುದಿ ಅಕ್ಯುಮಿನೇಟ್ ಆಗಿದ್ದು, ಸಂಪೂರ್ಣ ಅಥವಾ ದಂತದಂಹ ಅಂಚನ್ನು ಹೊಂದಿರುತ್ತವೆ. ಪುಷ್ಪಮಂಜರಿ ಟರ್ಮಿನಲ್ ಅಥವಾ ಅಕ್ಷಾಕಂಕುಳಿನ ರೇಸೀಮ್ಗಳು. ಕೆನೆ-ಬಿಳಿ ಬಣ್ಣದ ದ್ವಿಲಿಂಗಿ ಹೂವುಗಳು, ಪರಿಮಳಯುಕ್ತವಾಗಿರುತ್ತವೆ. ಹಣ್ಣು ಕಪ್ಪನೆಯ, ಆಯತಾಕಾರದ, ತಿರುಳಿರುವ ಒಂದು ಗೊರಟೆ ಹಣ್ಣು (ಡ್ರೂಪ್).