ಕನ್ನಡದ ಹೆಸರು : | ನಿಂಬೆ ಹಣ್ಣಿನ ಮರ |
ಸಾಮಾನ್ಯ ಹೆಸರು : | ನಿಂಬೆಹಣ್ಣು |
ಕುಟುಂಬದ ಹೆಸರು : | ರುಟೇಸಿ |
ವೈಜ್ಞಾನಿಕ ಹೆಸರು : | ಸಿಟ್ರಸ್ × ಲೈಮನ್ (ಎಲ್.) ಓಸ್ಬೆಕ್ |
ಪ್ರಭೇದದ ಪ್ರಕಾರ: | ಸ್ಥಳೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ವರ್ಷಪೂರ್ತಿ |
ಹಣ್ಣಾಗುವ ಅವಧಿ: | ವರ್ಷಪೂರ್ತಿ |
ಮೂಲ: | ಈಶಾನ್ಯ ಭಾರತ, ಮ್ಯಾನ್ಮಾರ್, ಚೀನಾ |
ಹಣ್ಣಿನ ಸಿಪ್ಪೆಯಿಂದ ಬರುವ ಎಸೆನ್ಶಿಯಲ್ ಅಯಿಲ್ ರೂಬಿಫೆಷಂಟ್ ಆಗಿದೆ. ಅದನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಿದಾಗ ಅದು ಉತ್ತೇಜಕ ಮತ್ತು ಕಾರ್ಮಿನೇಟಿವ್ ಆಗಿ ಕೆಲಸ ಮಾಡುತ್ತದೆ. ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ದೇಹವು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ರಕ್ತಪಿತ್ತವ್ಯಾಧಿ(ಸ್ಕರ್ವಿ) ಯನ್ನು ತಡೆಗಟ್ಟಲು ಮತ್ತು ಅದರ ಚಿಕಿತ್ಸೆಯಲ್ಲೂ ಸಹಾಯ ಮಾಡುತ್ತದೆ.
.ನಿತ್ಯಹರಿದ್ವರ್ಣ, ಮುಳ್ಳಿನ ಪೊದೆಗಳು ಅಥವಾ ಸಣ್ಣ ಮರಗಳು, ಎತ್ತರ 3-6 ಮೀ. ಕವಲುಮೂಲೆಯಲ್ಲಿ ಮುಳ್ಳುಗಳಿರುತ್ತವೆ. ಎಲೆಗಳು ಸರಳ, ಆಲ್ಟರ್ನೇಟ್ ಆಗಿರುತ್ತವೆ, ಎಲಿಪ್ಟಿಕ್ ನಿಂದ ಓವೇಟ್ , ಗ್ರಂಥಿಗಳಿರುತ್ತವೆ, ಬುಡ ಮೊಂಡು ಅಥವಾ ದುಂಡಾಗಿರುತ್ತದೆ, ತುದಿ ಸಬ್ ಅಕ್ಯೂಟ್ ಅಥವಾ ಚೂಪಾಗಿರುತ್ತದೆ, ಅಂಚು ಗರಗಸದಂತಿರುತ್ತದೆ, ತೊಟ್ಟುಗಳು ಕಿರಿದಾದ ರೆಕ್ಕೆಗಳನ್ನು ಹೊಂದಿರುತ್ತವೆ. ಪುಷ್ಪಮಂಜರಿ ಗುಂಪಾಗಿ ಅಥವಾ ಒಂಟಿಯಾಗಿ, ಅಕ್ಷಾಕಂಕುಳಿನಲ್ಲಿರುತ್ತವೆ. ಬಿಳಿಯ ದ್ವಿಲಿಂಗಿ ಹೂವುಗಳು, ಬಲವಾದ ಪರಿಮಳವನ್ನು ಹೊಂದಿರುತ್ತವೆ. ಚರ್ಮದಂತಹ ತೊಗಟೆ ಅಥವಾ ಸಿಪ್ಪೆಯಿರುವ, ಗೋಳಾಕಾರದಿಂದ ಉದ್ದವಾದ, ಗ್ರಂಥಿಗಳನ್ನು ಒಳಗೊಂಡಂತಹ, ಒಂದು ತೊಳೆ ಹಣ್ಣು (ಹೆಸ್ಪೆರಿಡಿಯಮ್) ಹಣ್ಣಾದಾಗ ಹಳದಿಯಾಗುತ್ತದೆ,.