ಕ್ಲಿಟೋರಿಯಾ ಅರ್ಬೋರಿಯಾ ಬೆಂತ್.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಬಟರ್ ಫ್ಲೈ ಪೀ ಟ್ರೀ
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಕ್ಲಿಟೋರಿಯಾ ಅರ್ಬೋರಿಯಾ ಬೆಂತ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಕನಿಷ್ಟ ಕಾಳಜಿ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ಬ್ರೆಜಿಲ್, ಬೊಲಿವಿಯಾ, ಪೆರು

ಉಪಯೋಗಗಳು

ವಿವರಣೆ

ಚಿಕ್ಕ ನಿತ್ಯಹರಿದ್ವರ್ಣ ಮರ. ಕಾಂಡ ರೋಮರಹಿತವಾಗಿರುತ್ತದೆ; ಎಲೆ ಗರಿಯಂತಿರುವ ಭಿನ್ನಪತ್ರ, ಚಿಗುರೆಲೆಗಳು ಸುಮಾರಾಗಿ ಒಬೊವೇಟ್, ಒಬ್ಟ್ಯೂಸ್ ಆಗಿರುತ್ತವೆ, ಇಮಾರ್ಜಿನೇಟ್ ಆದ ಬುಡ, ಏರುಪೇರಾಗಿ ದುಂಡಾಗಿದ್ದು, ರೋಮರಹಿತವಾಗಿರುತ್ತವೆ. ಪುಷ್ಪಮಂಜರಿ ಒಂದು ಹೂಗೊಂಚಲು(ರೆಸೀಮ್). ಪ್ಯಾಪಿಲೋನೇಸಿಯಸ್ ಕೊರೊಲ್ಲಾ ಇರುವ, ಗುಲಾಬಿ ಬಣ್ಣದ ದ್ವಿಲಿಂಗಿ ಹೂಗಳು, ಹಣ್ಣು ಒಂದು ಪಾಡ್.