ಕೋಕೋಸ್ ನ್ಯೂಸಿಫೆರಾ ಎಲ್

ಕನ್ನಡದ ಹೆಸರು : ತೆಂಗಿನ ಮರ
ಸಾಮಾನ್ಯ ಹೆಸರು : ತೆಂಗಿನ ಕಾಯಿ
ಕುಟುಂಬದ ಹೆಸರು : ಅರೆಕೇಸಿಯೇ
ವೈಜ್ಞಾನಿಕ ಹೆಸರು : ಕೋಕೋಸ್ ನ್ಯೂಸಿಫೆರಾ ಎಲ್
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ವರ್ಷಪೂರ್ತಿ
ಹಣ್ಣಾಗುವ ಅವಧಿ: ವರ್ಷಪೂರ್ತಿ
ಮೂಲ: ಸೌತ್ ಈಸ್ಟ್ ಏಷ್ಯಾ

ಉಪಯೋಗಗಳು

.ಪ್ರಪಂಚದಾದ್ಯಂತ ಹಲವಾರು ರೀತಿಯಲ್ಲಿ ಇದನ್ನು ಅಡುಗೆಯಲ್ಲಿ ಉಪಯೋಗಿಸಲಾಗುತ್ತದೆ. ಬೇರುಗಳನ್ನು ವರ್ಣದ್ರವ್ಯ(ಡೈ), ವದನಕ್ಷಾಲಕ(ಮೌತ್ ವಾಶ್) ವಾಗಿ ಬಳಸಲಾಗುತ್ತದೆ. ಮತ್ತು ನಾಟಿ ಔಷಧಿಯ ಪದ್ಧತಿಯಲ್ಲಿ ಅತಿಸಾರ ಮತ್ತು ಭೇದಿಗೆ ಔಷಧವಾಗಿ ಬಳಸಲಾಗುತ್ತದೆ. ತೆಂಗಿನ ಕಾಂಡಗಳನ್ನು ಸಣ್ಣ ಸೇತುವೆಗಳು ಮತ್ತು ಗುಡಿಸಲುಗಳನ್ನು ನಿರ್ಮಿಸಲು ಬಳಸಲಾಗುತ್ತದೆ; ಅವುಗಳು ನೆಟ್ಟಗೆ,ಗಟ್ಟಿಯಾಗಿರುವುದರಿಂದ ಮತ್ತು ಸಾಲ್ಟ್ ರೆಸಿಸ್ಟೆಂಟ್ ಆಗಿರುವುದರಿಂದ ಅವುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಎಲೆಗಳನ್ನು ಪೊರಕೆಗಳನ್ನು ಮತ್ತು ಬುಟ್ಟಿಗಳನ್ನು ತಯಾರಿಸಲು ಬಳಸಲಾಗುತ್ತದೆ.

ವಿವರಣೆ

.ನೆಟ್ಟಗಿರುವ ತಾಳೆ ಜಾತಿಯ ದೊಡ್ಡ ಮರ. ಸಾಮಾನ್ಯವಾಗಿ ನೇರವಾಗಿರದ ಉಂಗುರಾಕಾರದ ತೊಟ್ಟುಗಳ ಗುರುತುಗಳನ್ನು ಹೊಂದಿದ್ದು. 30 ಮೀ ಎತ್ತರದವರೆಗೆ ಬೆಳೆಯುತ್ತದೆ.ಸಾಮಾನ್ಯವಾಗಿ ಕಾಂಡ ಬುಡದಲ್ಲಿ ಊದಿಕೊಂಡಿರುತ್ತದೆ. ಎಲೆಗಳ ಗೊಂಚಲು ತುದಿಯಲ್ಲಿ ಕಾಣಿಸುತ್ತದೆ, ಪಿನ್ನೇಟ್ ಆದ, 60-100 ಸಂಖ್ಯೆಯಲ್ಲಿ ಚಿಗುರೆಲೆಗಳಿರುತ್ತವೆ; ಬುಡದಲ್ಲಿರುವ ಚಿಗುರೆಲೆಗಳು ಆಪೋಸಿಟ್ ಆಗಿರುತ್ತವೆ, ತುದಿಯ ಬಳಿ ಆಲ್ಟರ್ನೇಟ್ ಮತ್ತು ಆಪೋಸಿಟ್ ಆಗಿರುತ್ತವೆ, ಮೇಲೆ ಹೊಳೆಯುವ ಹಸಿರು, ಕೆಳಗೆ ತೆಳು ಹಸಿರಿನ ಬಣ್ಣದ ಎಲೆಗಳು ಚರ್ಮದಂತಿರುತ್ತವೆ, ಕಿರಿದಾದ ಬುಡ, ಕಿರಿದಾಗುತ್ತ ಕೊನೆಯಲ್ಲಿ ತುದಿ ಮೊನಚಾಗುತ್ತದೆ, ಎಲೆಯ ನಡುದಿಂಡು ಪ್ರಮುಖವಾಗಿರುತ್ತದೆ. ಪುಷ್ಪಮಂಜರಿ ಮತ್ತು ಅಕ್ಷಾಕಂಕುಳಿನ ಪ್ಯಾನಿಕ್ಲ್. ಏಕಲಿಂಗಿಯಾದ ಹೂಗಳು; ಹಳದಿ ಮಿಶ್ರಿತ ಕಂದು ಬಣ್ಣದ ಗಂಡು ಹೂಗಳು, 8 ಮಿಮೀ ಉದ್ದವಿರುತ್ತವೆ; ಹೆಣ್ಣು ಹೂಗಳು ವುಡಿಯಾಗಿರುತ್ತವೆ. ಹಣ್ಣು 30 ಸೆಂ.ಮೀ.ವರೆಗೆ ಉದ್ದದ, ಅಂಡಾಕಾರ ಅಥವಾ ಗೋಳಾಕಾರದ, ಮುಮ್ಮೂಲೆಯ ಒಂದು ಗೊರಟೆ ಹಣ್ಣು. ಪೆರಿಕಾರ್ಪ್ ಫೈಬ್ರಸ್ ಆಗಿದ್ದು, ಎಂಡೋಕಾರ್ಪ್ ಕಲ್ಲಿನಂತೆ ಗಟ್ಟಿಯಾಗಿರುತ್ತದೆ. ಬೀಜವು ಎಂಡೋಕಾರ್ಪ್‌ನೊಂದಿಗೆ ಅಂಟಿಕೊಂಡಿರುತ್ತದೆ. ಎಂಡೋಸ್ಪರ್ಮ್ ಬಿಳಿಯಾಗಿದ್ದು, ದ್ರವ ಹಾಲಿನಂತಿರುತ್ತದೆ.