ಕೊಲ್ವಿಲ್ಲೆ ರೇಸೆಮೊಸಾ ಬೋಜ್.

ಕನ್ನಡದ ಹೆಸರು : ಕೆಂಪು ಹುಕುಚಿನಮರ
ಸಾಮಾನ್ಯ ಹೆಸರು : ಕೊಲ್ವಿಲ್ಲೆಸ್ ಗ್ಲೋರಿ
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಕೊಲ್ವಿಲ್ಲೆ ರೇಸೆಮೊಸಾ ಬೋಜ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಕನಿಷ್ಠ ಕಾಳಜಿ
ಹೂಬಿಡುವ ಅವಧಿ: ಆಗಸ್ಟ್ - ಅಕ್ಟೋಬರ್
ಹಣ್ಣಾಗುವ ಅವಧಿ:
ಮೂಲ: ಮಡಗಾಸ್ಕರ್

ಉಪಯೋಗಗಳು

eಹಗುರವಾದ ಜೋಡಣೆಗೆ, ಇಂಟೀರಿಯರ್ ನ ಕಲಾತ್ಮಕ ಕೆಲಸಗಳಿಗೆ, ಪೀಠೋಪಕರಣಗಳು, ಪೆಟ್ಟಿಗೆಗಳು ಮತ್ತು ಕ್ರೇಟ್ ಗಳಿಗೆ ಇದು ಸೂಕ್ತವಾಗಿದೆ . ಕಾಂಡಗಳನ್ನು ಅಗೆದ ಸಣ್ಣ ದೋಣಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಮರದಲ್ಲಿ ಹೊಳೆವ ಕಿತ್ತಳೆ ಬಣ್ಣದ ಹೂವುಗಳು ಮತ್ತು ನವಿರಾದ ಎಲೆಗಳಿರುವ ಕಾರಣದಿಂದ ಇದನ್ನು ಅಲಂಕಾರಿಕ ಮರವಾಗಿ ಬೆಳೆಸಲಾಗುತ್ತದೆ.

ವಿವರಣೆ

20-30 ಮೀ ಎತ್ತರದ ಡೆಸಿಡುಅಸ್ ಮರ, ಕೊಂಬೆಗಳು ಚಾಚಿರುತ್ತವೆ, ತೊಗಟೆ ಕಂದು-ಬೂದು ಬಣ್ಣದ ಜೊತೆ ತಾಮ್ರದ ಛಾಯೆ ಇರುವ ತೊಗಟೆಯಲ್ಲಿ ಸುಕ್ಕಿನ(ಕಾರ್ಕಿ) ಕಲೆಗಳಿರುತ್ತವೆ. ಎಲೆಗಳು 20-30 ಜೋಡಿ ಉಪಪರ್ಣ(ಪಿನ್ನಾ)ಗಳೊಂದಿಗೆ, ಆಲ್ಟರ್ನೇಟ್ , ಬೈಪಿನ್ನೇಟ್ ಆಗಿ ಜೋಡಿಸಲ್ಪಟ್ಟಿರುತ್ತವೆ, ಪ್ರತಿಯೊಂದೂ ಆಪೋಸಿಟ್ ಆಗಿ ಜೋಡಿಸಿದ 20-28 ಜೋಡಿ ಚಿಗುರೆಲೆಗಳನ್ನು ಹೊಂದಿರುತ್ತವೆ; ಚಿಗುರೆಲೆಗಳು ಲೀನಿಯರ್ ನಿಂದ ಒಬ್ಲಾಂಗ್ ಆಗಿರುತ್ತವೆ, ಬುಡ ದುಂಡಾಗಿರುತ್ತದೆ, ತುದಿ ಮೊಂಡಾಗಿ ದುಂಡಾಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪ ಮಂಜರಿ ಒಂದು ರೆಸೀಮ್ ( ಹೂ ಗೊಂಚಲು). ದ್ವಿಲಿಂಗಿ ಹೂಗಳು, ಕಡುಗೆಂಪು ಬಣ್ಣದಿಂದ ಕಿತ್ತಳೆ ಬಣ್ಣದಲ್ಲಿರುತ್ತವೆ; ಹೂಗಳು ದ್ವಿಲಿಂಗಿ, ಕಡುಗೆಂಪು ಬಣ್ಣದಿಂದ ಕಿತ್ತಳೆ ಬಣ್ಣದಲ್ಲಿರುತ್ತವೆ; 10, ಎದ್ದು ಕಾಣುವ ಕೇಸರಗಳು ಹಳದಿ ಬಣ್ಣದಲ್ಲಿರುತ್ತವೆ. ಹಣ್ಣು ಉದ್ದವಾದ ಎರಡು ಕವಾಟದ ಒಂದು ಪಾಡ್.