ಕನ್ನಡದ ಹೆಸರು : | ಚಲ್ಲೆ |
ಸಾಮಾನ್ಯ ಹೆಸರು : | ಇಂಡಿಯನ್ ಚೆರ್ರಿ ಮರ |
ಕುಟುಂಬದ ಹೆಸರು : | ಬೋರಜಿನೇಸಿ |
ವೈಜ್ಞಾನಿಕ ಹೆಸರು : | ಕಾರ್ಡಿಯಾ ಡಿಕೋಟೋಮಾ ಜಿ.ಫೋರ್ಸ್ಟ್ |
ಪ್ರಭೇದದ ಪ್ರಕಾರ: | ಸ್ಥಳೀಯ |
ಪ್ರಕೃತಿ ಶಾಸ್ತ್ರ : | ಪತನಶೀಲ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | ಮಾರ್ಚ್ - ಮೇ |
ಹಣ್ಣಾಗುವ ಅವಧಿ: | ಜೂನ್ - ಆಗಸ್ಟ್ |
ಮೂಲ: | ಇಂಡೋಮಲಯನ್ ರಾಜ್ಯ |
.ಇದರ ಹಣ್ಣನ್ನು, ಉರಿಯೂತದ ಚಿಕಿತ್ಸೆ, ಜ್ವರ, ಬ್ರಾಂಕೈಟಿಸ್ ಮುಂತಾದ ಹಲವಾರು ರೋಗಗಳ ಚಿಕಿತ್ಸೆಯಲ್ಲಿ ಆಂಟಿ ಡಯಾಬಿಟಿಕ್, ಇಮ್ಯುನೊಮಾಡ್ಯುಲೇಟರ್, ಹೆಪಟೊಪ್ರೊಟೆಕ್ಟಿವ್, ಮಾದರಿಯಲ್ಲಿ ಉಪಯೋಗಿಸಲಾಗುತ್ತದೆ, ನಾಟಿ ಔಷಧ ಪದ್ಧತಿಯಲ್ಲಿ ಗಾಯಗಳನ್ನು ಗುಣಪಡಿಸಲು ಸ್ರಾವನಿರೋಧಕವಾಗಿ ಮತ್ತು ಪಾರ್ಶ್ವವಾಯು ಚಿಕಿತ್ಸೆಗೂ ಹಣ್ಣುಗಳನ್ನು ಬಳಸಲಾಗುತ್ತದೆ.
.15 ಮೀ ಎತ್ತರದವರೆಗೆ ಇರುವ ಮಧ್ಯಮ ಗಾತ್ರದ, ಡೆಸಿಡುಅಸ್ ಮರ, ಇದರ ಮೇಲ್ಭಾಗ ವಿಸ್ತಾರವಾಗಿರುತ್ತದೆ.ಇದರ ಬೂದು ಮಿಶ್ರಿತ ಕಂದು ಬಣ್ಣದ ತೊಗಟೆ, ನಯವಾಗಿರುತ್ತದೆ ಅಥವಾ ಉದ್ದಕ್ಕೆ ಸುಕ್ಕುಗಟ್ಟಿರುತ್ತದೆ. ಎಲೆಗಳು ಸರಳ, ಆಲ್ಟರ್ನೇಟ್, ಹೆಚ್ಚಾಗಿ ಓವೇಟ್ ಅಥವಾ ಎಲಿಪ್ಟಿಕ್ ಒಬ್ಲಾಂಗ್ ಆಗಿರುತ್ತವೆ, ಸ್ವಲ್ಪ ಪ್ಯೂಬೆಸೆಂಟ್ ಅಥವಾ ರೋಮರಹಿತವಾಗಿರುತ್ತವೆ, ಬುಡ ದುಂಡಿನಿಂದ ಬೆಣೆಯಾಕಾರದಲ್ಲಿರುತ್ತದೆ, ತುದಿ ಒಬ್ಟೂಸ್ ನಿಂದ ಮ್ಯೂಕ್ರೊನೇಟ್, ಅಂಚು ಹಲ್ಲಿನಂತಿರುತ್ತದೆ ಅಥವಾ ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಒಂದು ಡೈಕಾಟಮಸ್ ಕೋರಿಂಬೋಸ್ ಸೈಮ್. ದ್ವಿರೂಪದ ಹೂವುಗಳು; ಬಿಳಿಯಾದ ಗಂಡು ಹೂಗಳು ; ದ್ವಿಲಿಂಗಿ ಹೂವುಗಳ ಬಣ್ಣ ಬಿಳಿ, ಅವು ಗಂಡು ಹೂವುಗಳಿಗಿಂತ ದೊಡ್ಡದಾಗಿರುತ್ತವೆ. ಹಣ್ಣು ಒಂದು , ಉಪಗೋಳಾಕಾರದ, ಹಳದಿ ಅಥವಾ ಗುಲಾಬಿ-ಹಳದಿ ಬಣ್ಣದ, ಪರಿಮಳಯುಕ್ತ ಗೊರಟೆ ಹಣ್ಣು. ಬಿದ್ದು ಹೋಗದ ಪುಷ್ಪಪಾತ್ರೆ, ಜಿಗುಟಾದ ಮೆಸೊಕಾರ್ಪ್, ಒಂದು ಬೀಜವಿರುವ ಈ ಹಣ್ಣು ಮಾಗಿದ ಮೇಲೆ ಕಪ್ಪಾಗುತ್ತದೆ.