ಕಾರ್ಡಿಯಾ ಮೈಕ್ಸಾ ಎಲ್

ಕನ್ನಡದ ಹೆಸರು : ಕಾಡುಚಲ್ಲೆ
ಸಾಮಾನ್ಯ ಹೆಸರು : ಅಸ್ಸಿರಿಯನ್ ಪ್ಲಮ್ ಟ್ರೀ
ಕುಟುಂಬದ ಹೆಸರು : ಬೋರಜಿನೇಸಿ
ವೈಜ್ಞಾನಿಕ ಹೆಸರು : ಕಾರ್ಡಿಯಾ ಮೈಕ್ಸಾ ಎಲ್
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಮಾರ್ಚ್ - ಏಪ್ರಿಲ್
ಹಣ್ಣಾಗುವ ಅವಧಿ: ಜುಲೈ - ಆಗಸ್ಟ್
ಮೂಲ: ದಕ್ಷಿಣ ಇರಾನ್, ಇಂಡೋ-ಚೀನಾ

ಉಪಯೋಗಗಳು

.ಹಣ್ಣಿನ ತಿರುಳನ್ನು ಸಾಮಾನ್ಯವಾಗಿ ಕೆಮ್ಮು ಮತ್ತು ಎದೆಯ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ನಾಟಿ ಔಷಧ ಪದ್ಧತಿಯಲ್ಲಿ ಔಷಧವಾಗಿ ಬಳಸಲಾಗುತ್ತದೆ, ಜೊತೆಗೆ ಗಾಯಗಳು ಮತ್ತು ಹುಣ್ಣುಗಳ ಚಿಕಿತ್ಸೆಗಳಿಗೂ ಬಳಸಲಾಗುತ್ತದೆ. ಅದರಲ್ಲಿ ಉರಿಯೂತ ನಿವಾರಿಸುವ ಮತ್ತು ನೋವು ನಿವಾರಕ ಗುಣಗಳು ಇರುವುದನ್ನು ಹಲವಾರು ಅಧ್ಯಯನಗಳು ದೃಢಪಡಿಸಿವೆ.

ವಿವರಣೆ

.6-12 ಮೀ ಎತ್ತರದ ಚಿಕ್ಕ ಡೆಸಿಡುಅಸ್ ಮರಗಳು. ಬೂದು ಮಿಶ್ರಿತ ಕಂದು ಬಣ್ಣದ ತೊಗಟೆಯಲ್ಲಿ ಲಂಬವಾದ(ವರ್ಟಿಕಲ್) ಸೀಳುಗಳಿರುತ್ತವೆ. ಎಲೆಗಳು ಸರಳ, ಆಲ್ಟರ್ನೇಟ್ ಆಗಿರುತ್ತವೆ, ಒಟ್ಟಾರೆ ಅಂಡಾಕಾರದಿಂದ ವೃತ್ತಾಕಾರವಾಗಿರುತ್ತವೆ, ಸಬ್-ಕೋರಿಯಾಸಿಯಸ್, ಮೇಲ್ಭಾಗದಲ್ಲಿ ರೋಮರಹಿತ, ಕೆಳಗೆ ರೋಮರಹಿತದಿಂದ ಪ್ಯೂಬೆಸೆಂಟ್ ಆಗಿರುತ್ತವೆ. ಬುಡ ರೌಂಡ್ ನಿಂದ ಕಾರ್ಡೇಟ್ ಅಥವಾ ಕ್ಯೂನಿಯೇಟ್ ಆಗಿರುತ್ತದೆ, ತುದಿ ಸ್ವಲ್ಪ ಚೂಪಾಗಿರುತ್ತದೆ, ಅಂಚು ಸಂಪೂರ್ಣ ಅಥವಾ ಸ್ವಲ್ಪ ದಂತುರವಾಗಿರುತ್ತದೆ. ಪುಷ್ಪಮಂಜರಿ ಒಂದು ತುದಿಯ(ಟರ್ಮಿನಲ್) ಸೈಮ್. ಬಿಳಿಬಣ್ಣದ ಬದಲಾಗುವ (ವೇರಿಯಬಲ್) ಏಕಲಿಂಗಿ ಮತ್ತು ದ್ವಿಲಿಂಗಿ ಹೂವುಗಳು. ಹಣ್ಣು, 20 ಮಿಮೀ ಉದ್ದ, ಅಂಡಾಕಾರದ ಅಥವಾ ಗೋಳಾಕಾರದ, ಅಪಿಕ್ಯುಲೇಟ್ ಆದ ಒಂದು ಗೊರಟೆ ಹಣ್ಣು. ರೋಮರಹಿತವಾಗಿರುತ್ತದೆ, ಹಳದಿ ಅಥವಾ ಕಂದು-ಹಳದಿ ಲೋಳೆಯ ಸಿಹಿ ತಿರುಳಿರುವ, ಅದರಲ್ಲಿ 1 ಬೀಜವಿರುತ್ತದೆ.