ಕಾರ್ಡಿಯಾ ಸೆಬೆಸ್ಟೆನಾ ಎಲ್.

ಕನ್ನಡದ ಹೆಸರು : ಚಲ್ಲೆಕೆಂಡಲ
ಸಾಮಾನ್ಯ ಹೆಸರು : ಗೀಗರ್ ಮರ, ಸ್ಕಾರ್ಲೆಟ್ ಕಾರ್ಡಿಯಾ
ಕುಟುಂಬದ ಹೆಸರು : ಬೋರಜಿನೇಸಿ
ವೈಜ್ಞಾನಿಕ ಹೆಸರು : ಕಾರ್ಡಿಯಾ ಸೆಬೆಸ್ಟೆನಾ ಎಲ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ವರ್ಷಪೂರ್ತಿ
ಹಣ್ಣಾಗುವ ಅವಧಿ: ವರ್ಷಪೂರ್ತಿ
ಮೂಲ: ಉಷ್ಣವಲಯದ ಅಮೇರಿಕಾ

ಉಪಯೋಗಗಳು

ಎಲೆಗಳಲ್ಲಿ ಮೃದುಗೊಳಿಸುವ ಗುಣವಿದೆ. ಅವುಗಳನ್ನು ಬ್ರಾಂಕೈಟಿಸ್, ಕೆಮ್ಮು, ಜ್ವರ ಮತ್ತು ಇನ್ಫ್ಲುಯೆನ್ಸದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಸಸ್ಯವನ್ನು ಕರುಳಿನ ಮತ್ತು ಹೊಟ್ಟೆಯ ತೊಂದರೆಗಳಿಗೆ ಮತ್ತು ಶ್ವಾಸನಾಳದ ಬಾಧೆಗಳಿಗೆ ಪರಿಹಾರವಾಗಿ ಬಳಸಲಾಗುತ್ತದೆ. ತೊಗಟೆ, ಹೂವುಗಳು ಮತ್ತು ಹಣ್ಣುಗಳಿಂದ ತಯಾರಿಸಿದ (ಪಾನಕ) ಸಿರಪ್ ಅನ್ನು ಎದೆಯ ತೊಂದರೆಗಳಿಗೆ ಮನೆ ಮದ್ದಾಗಿ ಬಳಸಲಾಗುತ್ತದೆ.

ವಿವರಣೆ

.8 ಮೀ ಎತ್ತರದವರೆಗಿನ ಪೊದೆಗಳು ಅಥವಾ ಸಣ್ಣ ಮರಗಳು. ಪ್ಯೂಬೆಸೆಂಟ್ ಆದ ಕಿರಿಕೊಂಬೆಗಳು. ಎಲೆಗಳು ಸರಳ, ಆಲ್ಟರ್ನೇಟ್ ಆಗಿದ್ದು ಚರ್ಮದಂತಿರುತ್ತವೆ, ಕೆಳಭಾಗ ಮೃದುತುಪ್ಪಳದಿಂದ ಕೂಡಿರುತ್ತದೆ, ಬುಡವು ದುಂಡಾಗಿರುತ್ತದೆ, ತುದಿ ಚೂಪಾಗಿರುತ್ತದೆ, ಅಂಚು ಸಂಪೂರ್ಣ ದಿಂದ ಅಲೆಯ ರೀತಿಯಲ್ಲಿರುತ್ತದೆ. ಟರ್ಮಿನಲ್ ಸೈಮೋಸ್ ಪ್ಯಾನಿಕಲ್‌ ಗಳ ರೂಪದ ಪುಷ್ಪಮಂಜರಿ. ಕುಂಕುಮ ಬಣ್ಣದ ದ್ವಿಲಿಂಗಿ ಹೂಗಳು. ಹಣ್ಣು ಗಟ್ಟಿಯಾದ, ಅಂಡಾಕಾರದ, ತಿರುಳಿರುವ ಒಂದು ಗೊರಟೆ ಹಣ್ಣು., ಅದರಲ್ಲಿ ,ಹಣ್ಣಿನಲ್ಲಿ 1-4 ಬೀಜಗಳಿರುತ್ತವೆ.ಮಾಗಿದಾಗ ಬಿಳಿ ಬಣ್ಣಕ್ಕೆ ತಿರುಗುತ್ತದೆ.