ಕನ್ನಡದ ಹೆಸರು : | ಗದಗಯ್ಯ, ಕೆಂಪು ನೋಲ, ತೊಟ್ಟಿಲು,, |
ಸಾಮಾನ್ಯ ಹೆಸರು : | ಡ್ರೂಪಿ ಎಲೆ ಮರ, ಡ್ರೂಪಿ ಲೀಫ್ ಟ್ರೀ |
ಕುಟುಂಬದ ಹೆಸರು : | ಮೆಲಿಯೇಸಿ |
ವೈಜ್ಞಾನಿಕ ಹೆಸರು : | ಅಗ್ಲೈಯಾ ಎಲಾಗ್ನೊಯಿಡಿಯಾ (ಎ. ಜಸ್.) ಬೆಂತ್. |
ಪ್ರಭೇದದ ಪ್ರಕಾರ: | ಸ್ಥಳೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ಕನಿಷ್ಠ ಕಾಳಜಿ |
ಹೂಬಿಡುವ ಅವಧಿ: | ನವೆಂಬರ್ - ಆಗಸ್ಟ್ |
ಹಣ್ಣಾಗುವ ಅವಧಿ: | ನವೆಂಬರ್ - ಆಗಸ್ಟ್ |
ಮೂಲ: | ಭಾರತೀಯ ಉಪಖಂಡ, ಆಸ್ಟ್ರೇಲಿಯಾ |
ಹಣ್ಣುಗಳಲ್ಲಿ ಸ್ರಾವನಿರೋಧಕ ಮತ್ತು ತಂಪಾಗಿಸುವ ಸಾರವಿದೆ, ಎಂದು ಆಯುರ್ವೇದದಲ್ಲಿ ವರದಿಯಾಗಿದೆ. ಉರಿಯೂತ ಮತ್ತು ಜ್ವರ ಸಂಬಂಧಿತ ಚಿಕಿತ್ಸೆಯಲ್ಲಿ ಅವುಗಳ ಬಳಕೆಯನ್ನು ಶಿಫಾರಸು ಮಾಡಲಾಗುತ್ತದೆ. ನೋವಿನ ಮೂತ್ರ ವಿಸರ್ಜನೆಯ ಚಿಕಿತ್ಸೆಯಲ್ಲಿ ಬೀಜಗಳು ಉಪಯುಕ್ತವೆಂದು ಹೇಳಲಾಗುತ್ತದೆ.
10 ಮೀ ಎತ್ತರದ,ಚಿಕ್ಕ ಗಾತ್ರದಿಂದ ಮಧ್ಯಮ ಗಾತ್ರದ ಮರ. ಎಲೆಗಳು ಇಂಪರಿಪಿನೇಟ್,ಆಲ್ಟರ್ನೇಟ್, ಎಸ್ಟಿಪ್ಯುಲೇಟ್, ಚಿಗುರೆಲೆಗಳು ಎಲಿಪ್ಟಿಕ್ , ಎಲಿಪ್ಟಿಕ್ - ಒಬೊವೇಟ್, ಲ್ಯಾನ್ಸಿಯಲೇಟ್ ಅಥವಾ ಒಬ್ಲಾನ್ಸಿಯಲೇಟ್, ಓರೆಯಾದ ಬುಡ, ಅಕ್ಯೂಟ್ ಅಥವಾ ಅಟೆನ್ಯೂಯೇಟ್, ತುದಿ ಅಕ್ಯೂಟ್, ಅಕ್ಯುಮಿನೇಟ್ ಅಥವಾ ಕಾಡೇಟ್-ಅಕ್ಯುಮಿನೇಟ್ ಆಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ.ಹೂವುಗಳು ಪಾಲಿಗೆಮೋಡಿಸಿಯಸ್ ಆಗಿದ್ದು, ಕವಲೊಡೆಯುವ ಕೊಂಬೆಗಳ ಕವಲುಮೂಲೆಗಳಲ್ಲಿ ಹೂ ಗೊಂಚಲುಗಳಲ್ಲಿ ಹಳದಿ ಬಣ್ಣದಲ್ಲಿರುತ್ತವೆ. ಹಣ್ಣು ಮಾಸಲು ಹಳದಿ ಬಣ್ಣದ ಗೋಳಾಕಾರದ ಒಂದು ಬೆರ್ರಿಯಾಗಿದ್ದು, 1-2 ಬೀಜಗಳಿರುತ್ತವೆ.