ಕನ್ನಡದ ಹೆಸರು : | ಲಿಂಗದ ಹೂವಿನಮರ, ನಾಗಲಿಂಗ ಪುಷ್ಪ ಮರ |
ಸಾಮಾನ್ಯ ಹೆಸರು : | ಕ್ಯಾನನ್ಬಾಲ್ ಮರ |
ಕುಟುಂಬದ ಹೆಸರು : | ಲೆಸಿಥಿಡೇಸಿ |
ವೈಜ್ಞಾನಿಕ ಹೆಸರು : | ಕೌರೋಪಿಟಾ ಗಯಾನೆನ್ಸಿಸ್ ಅಬುಲ್. |
ಪ್ರಭೇದದ ಪ್ರಕಾರ: | ವಿದೇಶೀಯ |
ಪ್ರಕೃತಿ ಶಾಸ್ತ್ರ : | ಪತನಶೀಲ |
ಸಂರಕ್ಷಣೆಯ ಸ್ಥಿತಿ : | ಕನಿಷ್ಠ ಕಾಳಜಿ |
ಹೂಬಿಡುವ ಅವಧಿ: | ವರ್ಷಪೂರ್ತಿ |
ಹಣ್ಣಾಗುವ ಅವಧಿ: | ವರ್ಷಪೂರ್ತಿ |
ಮೂಲ: | ಮಧ್ಯ ಮತ್ತು ದಕ್ಷಿಣ ಅಮೇರಿಕಾ |
.ಮರದ ಹಲವಾರು ಭಾಗಗಳಿಂದ ಹಿಂಡಿ ತೆಗೆದ ಸಾರವನ್ನು,ಅಧಿಕ ರಕ್ತದೊತ್ತಡ, ಗೆಡ್ಡೆಗಳು(ದುರ್ಮಾಂಸ),ನೋವು ಮತ್ತು ಉರಿಯೂತದ ಚಿಕಿತ್ಸೆಗೆ ಬಳಸಲಾಗುತ್ತದೆ. ನೆಗಡಿ, ಹೊಟ್ಟೆನೋವು, ಚರ್ಮದ ಕಾಯಿಲೆಗಳು ಮತ್ತು ಗಾಯಗಳು, ಮಲೇರಿಯಾ ಮತ್ತು ಹಲ್ಲುನೋವುಗಳ ಚಿಕಿತ್ಸೆಗೂ ಇದನ್ನು ಬಳಸಲಾಗುತ್ತದೆ.
. 35 ಮೀ ವರೆಗೆ ಬೆಳೆಯುವ ಡೆಸಿಡುಅಸ್ ಮರಗಳು. ಕೊಂಬೆಗಳ ತುದಿಯಲ್ಲಿ ಎಲೆಯ ಗೊಂಚಲುಗಳಿರುತ್ತವೆ, ಸರಳ, ಆಲ್ಟರ್ನೇಟ್ , ಒಬ್ಲಾಂಗ್ , ಒಬೊವೇಟ್ , ಎಲಿಪ್ಟಿಕ್ ಅಥವಾ ಸಾಮಾನ್ಯವಾಗಿ ಲ್ಯಾನ್ಸಿಲೇಟ್ ಆಗಿರುತ್ತವೆ, ಕೆಳಭಾಗದಲ್ಲಿ ಮೃದುತುಪ್ಪಳದಿಂದ ಕೂಡಿದ ವೇನ್ ಗಳಿರುತ್ತವೆ, ಬೆಣೆಯಾಕಾರದ ಬುಡ, ಚೂಪಾದ ತುದಿ ಇರುತ್ತದೆ, ಅಂಚು ಸಂಪೂರ್ಣ ಅಥವಾ ನವಿರಾಗಿ ಗರಗಸದಂತಿರುತ್ತದೆ. ಪುಷ್ಪಮಂಜರಿ ಒಂದು ರೆಸೀಮ್. ಹೊರಗೆ ಹಳದಿ ಮತ್ತು ಕೆಂಪು ಬಣ್ಣದ ಛಾಯೆ ಮತ್ತು ಒಳಗೆ ಕಡು ಕೆಂಪಿನಿಂದ ಗುಲಾಬಿ ಬಣ್ಣವಿರುವ, ದ್ವಿಲಿಂಗಿ ಹೂಗಳು ಪರಿಮಳಯುಕ್ತವಾಗಿರುತ್ತವೆ. ಗೋಳಾಕಾರದ ಕೆಂಪು-ಕಂದು ಬಣ್ಣದ, ಮರದಂತೆ ಗಟ್ಟಿಯಾದ ಎಕ್ಸೋಕಾರ್ಪ್ ಇರುವ, ಬಿರಿಯದ ಹಣ್ಣಿನ ಒಳಗೆ ತಿರುಳು ತುಂಬಿರುತ್ತದೆ. 200 – 300 ಬೀಜಗಳಿರುತ್ತವೆ