ಕ್ರೆಸೆಂಟಿಯಾ ಕುಜೆಟೆ ಎಲ್.

ಕನ್ನಡದ ಹೆಸರು : ಸೋರೆಕಾಯಿಬುರುಡೆ
ಸಾಮಾನ್ಯ ಹೆಸರು : ಕ್ಯಾಲಬಾಷ್ ಮರ
ಕುಟುಂಬದ ಹೆಸರು : ಬಿಗ್ನೋನಿಯೇಸಿ
ವೈಜ್ಞಾನಿಕ ಹೆಸರು : ಕ್ರೆಸೆಂಟಿಯಾ ಕುಜೆಟೆ ಎಲ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ವರ್ಷಪೂರ್ತಿ
ಹಣ್ಣಾಗುವ ಅವಧಿ: ವರ್ಷಪೂರ್ತಿ
ಮೂಲ: ಆಫ್ರಿಕಾ, ಮಧ್ಯ ಮತ್ತು ದಕ್ಷಿಣ ಅಮೇರಿಕಾ

ಉಪಯೋಗಗಳು

ಹಣ್ಣಿನ ರಸವನ್ನು ಅತಿಸಾರ, ನ್ಯುಮೋನಿಯಾ ಮತ್ತು ಕರುಳಿನ ಕಿರಿಕಿರಿಯ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.ಹಲ್ಲು ನೋವಿನ ಚಿಕಿತ್ಸೆಯಲ್ಲಿ ಎಲೆಯನ್ನು ಜಗಿಯಲು ನೀಡಲಾಗುತ್ತದೆ. ಕೊಳಕು ಗಾಯಗಳನ್ನು ಸ್ವಚ್ಛಗೊಳಿಸಲು ಎಲೆಗಳನ್ನು ತೊಳೆಯುವ ವಸ್ತುವನ್ನಾಗಿ ಬಳಸಲಾಗುತ್ತದೆ.

ವಿವರಣೆ

. 10 ಮೀ ಎತ್ತರದವರೆಗೆ ಇರುವ, ಚಿಕ್ಕ, ನಿತ್ಯಹರಿದ್ವರ್ಣ ಮರ. ಎಲೆಗಳು ಸರಳವಾಗಿದ್ದು, ಸೆಸೈಲ್ ಆಗಿರುತ್ತವೆ, ತುದಿಗಳಲ್ಲಿ ಗುಂಪಾಗಿರುತ್ತವೆ, ಆಲ್ಟರ್ನೇಟ್ ಆಗಿದ್ದು, ಅಂಡಾಕಾರದಿಂದ ಈಟಿ ತಲೆಯ ಆಕಾರದಲ್ಲಿರುತ್ತವೆ, ಕಾಗದದಂತಿರುವ ಎಲೆಗಳು, ಮೇಲೆ ರೋಮರಹಿತವಾಗಿದ್ದು, ಕೆಳಗೆ ಮೃದುತುಪ್ಪಳದಿಂದ ಕೂಡಿರುತ್ತವೆ, ಬುಡ ಅಟೆನ್ಯೂಯೇಟ್ ಆಗಿರುತ್ತದೆ, ತುದಿ ಚೂಪಾಗಿರುತ್ತದೆ. ಪುಷ್ಪಮಂಜರಿಯಲ್ಲಿ ಒಂದು ಅಥವಾ ಎರಡು ಕಾಂಡ ಪುಷ್ಟಿ (ಹೂಕೋಸು ಹೂವುಗಳು)ಗಳಿರುತ್ತವೆ.ಮುಗ್ಗುಲ ವಾಸನೆ ಇರುವ ಈ ದ್ವಿಲಿಂಗಿ ಹೂಗಳು , ಹಳದಿ ಮಿಶ್ರಿತ ಬಿಳಿ ಬಣ್ಣದಲ್ಲಿರುತ್ತವೆ. ಹಣ್ಣು, ಗೋಳಾಕಾರದಿಂದ ಅಂಡಾಕಾರ, 30 ಸೆಂ.ಮೀ.ವರೆಗಿನ ಉದ್ದ, ಹಸಿರು ಬಣ್ಣದ,ಒಂದು ಪೆಪೊ(ಕಲ್ಲಂಗಡಿ ಮಾದರಿಯ ಹಣ್ಣು); ಬೀಜಗಳು ಚಿಕ್ಕದಾಗಿದ್ದು, ತಿರುಳಿನ ಉದ್ದಕ್ಕೂ ಹರಡಿರುತ್ತವೆ.