ಕನ್ನಡದ ಹೆಸರು : | - |
ಸಾಮಾನ್ಯ ಹೆಸರು : | ಚೈನೀಸ್ ವೀಪಿಂಗ್ ಸೈಪ್ರೆಸ್ |
ಕುಟುಂಬದ ಹೆಸರು : | ಕುಪ್ರೆಸೇಸಿ |
ವೈಜ್ಞಾನಿಕ ಹೆಸರು : | ಕುಪ್ರೆಸಸ್ ಫ್ಯುನೆಬ್ರಿಸ್ ಎನ್ಡ್ಲ್ |
ಪ್ರಭೇದದ ಪ್ರಕಾರ: | ವಿದೇಶೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | |
ಹಣ್ಣಾಗುವ ಅವಧಿ: | |
ಮೂಲ: | ಚೀನಾ, ವಿಯೆಟ್ನಾಂ |
ಎಲೆ ಆಂಟಿಪೀರಿಯಾಡಿಕ್ ಆಗಿದೆ. ಮೂಲವ್ಯಾಧಿ. ಅತಿಯಾದ ಮುಟ್ಟಿನ ಹರಿವು ಇತ್ಯಾದಿಗಳ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ. ಹಣ್ಣು ಬಿಡುವ ಕೊಂಬೆಗಳ ಕಷಾಯವನ್ನು ಶೀತಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ..
. 35 ಮೀ ವರೆಗೆ ಇರುವ, ನಿತ್ಯಹರಿದ್ವರ್ಣ, ಕೋನಿಫೆರಸ್ ಮರ. ಕಂದು ಬಣ್ಣದ ತೊಗಟೆ ನಯವಾಗಿರುತ್ತದೆ. ಕೊಂಬೆಗಳು ಹೆಚ್ಚಾಗಿ ಹಾರಿಸಾಂಟಲ್ ಆಗಿರುತ್ತವೆ, ಸಮತಲವಾಗಿ ಜೋಡಿಸಲಾದ ಸಣ್ಣಕೊಂಬೆಗಳು, ca. 1 ಮಿಮಿ ಅಗಲ, ಹಸಿರು ಬಣ್ಣ, ತೆಳ್ಳಗೆ, ಚಪ್ಪಟೆಯಾಗಿ, ನೇತಾಡುತ್ತಿರುತ್ತವೆ.ಎಲೆಗಳು ತಿಳಿ ಹಸಿರು ಅಥವಾ ಬೂದು-ಹಸಿರು ಬಣ್ಣದಲ್ಲಿರುತ್ತವೆ, ದಟ್ಟವಾಗಿ ಒತ್ತಿದಂತಿದ್ದು, ಚಕ್ಕೆ-ಮಾದರಿ, ದ್ವಿರೂಪ,ಉದ್ದ 1-1.5 ಮಿಮೀ ಇರುತ್ತವೆ, ತುದಿ ಮೊನಚಾಗಿರುತ್ತದೆ; ರೇಖೀಯ ಅಬಾಕ್ಸಿಯಲ್ ಗ್ರಂಥಿಯೊಂದಿಗೆ ಫೇಶಿಯಲ್ ಜೋಡಿಗಳು; ಪಾರ್ಶ್ವದ ಜೋಡಿಗಳು ಮುಖಾಮುಖಿಯಾಗಿ ಮಡಚಲ್ಪಟ್ಟಿರುತ್ತವೆ, ಫೇಶಿಯಲ್ ಜೋಡಿಗಳ ತಳದ ಭಾಗವನ್ನು ಮುಚ್ಚುತ್ತವೆ, ಅಬಾಕ್ಸಿಯಲಿ ರಿಡ್ಜ್ ಆಗಿರುತ್ತವೆ. 10-14 ಮೈಕ್ರೋಸ್ಪೊರೊಫಿಲ್‌ಗಳನ್ನು ಹೊಂದಿರುವ ಪರಾಗದ ಕೋನ್ ಗಳು ಎಲಿಪ್ಸಾಯಿಂಡ್ ಅಥವಾ ಅಂಡಾಕಾರದಲ್ಲಿರುತ್ತವೆ. ಗೋಳಾಕಾರದ, 8-15 ಮಿಮೀ ವ್ಯಾಸದ, ಬೀಜದ ಶಂಕುಗಳು ಮಾಗಿದಾಗ ಗಾಢ ಕಂದು ಬಣ್ಣ ಪಡೆಯುತ್ತವೆ, 6-12 ಕೋನ್ ಸ್ಕೇಲ್ ಗಳು, ಪ್ರತಿ ಫಲವತ್ತಾದ ಸ್ಕೇಲ್ ನಲ್ಲಿ 3-6 ಬೀಜಗಳಿರುತ್ತವೆ. ಹೊಳೆಯುವ, ಚಪ್ಪಟೆಯಾದ, ಅಂಡಾಕಾರದ-ರೋಂಬಿಕ್ ಅಥವಾ ಸಬ್ಆರ್ಬಿಕ್ಯುಲರ್ ಆಕಾರದ ಬೀಜಗಳು ತಿಳಿಕಂದು ಬಣ್ಣದಲ್ಲಿರುತ್ತವೆ.