ಕನ್ನಡದ ಹೆಸರು : | - |
ಸಾಮಾನ್ಯ ಹೆಸರು : | ಮೆಡಿಟರೇನಿಯನ್ ಸೈಪ್ರೆಸ್, ಇಟಾಲಿಯನ್ ಸೈಪ್ರೆಸ್ |
ಕುಟುಂಬದ ಹೆಸರು : | ಕ್ಯುಪ್ರೆಸೇಸೀ |
ವೈಜ್ಞಾನಿಕ ಹೆಸರು : | ಕುಪ್ರೆಸಸ್ ಸೆಂಪರ್ವಿರೆನ್ಸ್ ಎಲ್ |
ಪ್ರಭೇದದ ಪ್ರಕಾರ: | ವಿದೇಶೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ಕನಿಷ್ಠ ಕಾಳಜಿ |
ಹೂಬಿಡುವ ಅವಧಿ: | ಮಾರ್ಚ್ - ಏಪ್ರಿಲ್ |
ಹಣ್ಣಾಗುವ ಅವಧಿ: | |
ಮೂಲ: | ಮೆಡಿಟರೇನಿಯನ್ ಪ್ರದೇಶ |
.ಶಂಕುಗಳು ಮತ್ತು ಎಳೆಯ ಕೊಂಬೆಗಳು ಜಂತು ನಾಶಕ, ಆಂಟಿಪೈರೆಟಿಕ್, ಆಂಟಿರೋಮ್ಯಾಟಿಕ್, ಆಂಟಿಸೆಪ್ಟಿಕ್, ಆಸ್ಟ್ರಿಂಜೆಂಟ್,ರಕ್ತನಾಳ ಸಂಕೋಚಕ ಹಾಗೂ ಬಾಲ್ಸಮಿಕ್ ಗುಣಗಳನ್ನು ಹೊಂದಿವೆ. ಇದನ್ನು ನಾಯಿ ಕೆಮ್ಮು, ರಕ್ತ ಕಾರುವುದು, ಸ್ಪಾಸ್ಮೊಡಿಕ್ ಕೆಮ್ಮು, , ಶೀತ, ಜ್ವರ ಮತ್ತು ಗಂಟಲು ನೋವು, ಇವುಗಳ ಚಿಕಿತ್ಸೆಯಲ್ಲಿ ಇದನ್ನು ಆಂತರಿಕ ಔಷಧವನ್ನಾಗಿ ಬಳಸಲಾಗುತ್ತದೆ.
30 ಮೀ ಎತ್ತರದ ನಿತ್ಯಹರಿದ್ವರ್ಣ, ಕೋನಿಫೆರಸ್ ಮರ ; ಬೂದು ಮಿಶ್ರಿತ ಕಂದು ಬಣ್ಣದ ತೊಗಟೆ, ಆಳವಿಲ್ಲದ ಸೀಳುಗಳಿರುತ್ತವೆ; ಮೇಲೆ ಹೋಗುವ ಅಥವಾ ಸಮತಲವಾಗಿ ಹರಡಿರುವ ಕೊಂಬೆಗಳು; ಕಿರುಕೊಂಬೆಗಳು ಸಮತಲವಾಗಿರುವುದಿಲ್ಲ, ಕೊನೆಯವುಗಳಲ್ಲಿ 4-ಕೋನಗಳಿರುತ್ತವೆ, ca. ವ್ಯಾಸ 1 ಮಿ.ಮೀ ಇರುತ್ತದೆ. ಎಲೆಗಳು 4 ಶ್ರೇಣಿಗಳಲ್ಲಿ, ದಟ್ಟವಾಗಿ ಒತ್ತಿದಂತಿರುತ್ತವೆ, ಗ್ಲಾಕಸ್ ಅಲ್ಲದ, ಕಡು ಹಸಿರು ಬಣ್ಣದ ಎಲೆಗಳು, 0.5-1 ಮಿಮೀ, ಎದ್ದುಕಾಣುವ ಅಬಾಕ್ಸಿಯಲ್ ಗ್ರಂಥಿ ಇರುವುದಿಲ್ಲ, ಅಬಾಕ್ಸಿಯಲಿ ರಿಡ್ಜ್ ಆಗಿರುತ್ತವೆ, ಒಬ್ಟ್ಯೂಸ್ ಅಥವಾ ಸಬ್ ಕ್ಯೂಟ್ ಆದ ತುದಿ. ಪರಾಗದ ಕೋನ್ಗಳು 4-8 ಮಿಮೀ ಇರುತ್ತವೆ. ಬೀಜದ ಶಂಕುಗಳು ಮಾಗಿದಾಗ ಹಳದಿ ಮಿಶ್ರಿತ ಬೂದು ಬಣ್ಣಕ್ಕೆ ತಿರುಗುತ್ತವೆ, ಸಬ್ ಗ್ಲೋಬೋಸ್ ಅಥವಾ ಎಲಿಪ್ಸಾಯಿಡ್, ವ್ಯಾಸ 2-3 ಸೆಂ , ಕೋನ್ ಸ್ಕೇಲ್ ಗಳು 8-14, ಪ್ರತಿ ಫಲವತ್ತಾದ ಸ್ಕೇಲ್ ನಲ್ಲಿ 8-20 ಬೀಜಗಳಿರುತ್ತವೆ. ಅಗಲದಲ್ಲಿ ಕಿರಿದಾಗಿ, ರೆಕ್ಕೆಯುಳ್ಳ, ಒತ್ತಿದಂತಿರುವ ಬೀಜಗಳ ಬಣ್ಣ ಕಂದು.