ಸೈಕಾಸ್ ಸಿರ್ಸಿನಾಲಿಸ್ ಎಲ್.

ಕನ್ನಡದ ಹೆಸರು : ಮಂಡೀಚಲು, ಗುಡ್ಡೀಚಲು
ಸಾಮಾನ್ಯ ಹೆಸರು : ಕ್ವೀನ್ ಸ್ಯಾಗೊ
ಕುಟುಂಬದ ಹೆಸರು : ಸೈಕಾಡೇಸಿ
ವೈಜ್ಞಾನಿಕ ಹೆಸರು : ಸೈಕಾಸ್ ಸಿರ್ಸಿನಾಲಿಸ್ ಎಲ್.
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಅಳಿವಿನಂಚಿನಲ್ಲಿದೆ
ಹೂಬಿಡುವ ಅವಧಿ: ಡಿಸೆಂಬರ್ - ಫೆಬ್ರವರಿ
ಹಣ್ಣಾಗುವ ಅವಧಿ: ಡಿಸೆಂಬರ್ - ಫೆಬ್ರವರಿ
ಮೂಲ: ಪಶ್ಚಿಮ ಘಟ್ಟಗಳು

ಉಪಯೋಗಗಳು

.ಸಾಮಾನ್ಯವಾಗಿ ಭಾರತದಲ್ಲಿನ ಮಾರುಕಟ್ಟೆಗಳಲ್ಲಿ ಗಂಡು ಕೋನಿನ ಸ್ಕೇಲ್ ಗಳನ್ನು ಅನೋಡೈನ್ ಆಗಿ ಬಳಸಲು ಮಾರಾಟ ಮಾಡಲಾಗುತ್ತದೆ. ತೊಗಟೆ ಮತ್ತು ಬೀಜಗಳನ್ನು ಪುಡಿ ಮಾಡಿ ಎಣ್ಣೆಯೊಂದಿಗೆ ಬೆರೆಸಿ ಪೇಸ್ಟ್ ಮಾಡಲಾಗುತ್ತದೆ ಮತ್ತು ಅದನ್ನು ಹುಣ್ಣುಗಳು, ಕಚ್ಚಿದ ಗಾಯಗಳು, ಗಾಯಗಳು, ಹುಣ್ಣುಗಳು ಮತ್ತು ಊತಗಳ ಮೇಲೆ ಪೌಲ್ಟೀಸ್ ಆಗಿ ಬಳಸಲಾಗುತ್ತದೆ.

ವಿವರಣೆ

. 6 ಮೀ ಎತ್ತರದವರೆಗೆ ಇರುವ, ನಿಧಾನವಾಗಿ ಬೆಳೆಯುವ. ಡೈಈಷಅಸ್ ಸೈಕಾಡ್. ಎಲೆಗಳು ಪಿನ್ನೇಟ್, ಆಲ್ಟರ್ನೇಟ್, ಸುರುಳಿಗಳಲ್ಲಿ ಇರುತ್ತವೆ, 3 ಮೀ ಉದ್ದ ಮತ್ತು 2 ಅಡಿ ಅಗಲವಿದ್ದು,ನುಣುಪಾದ ಕಡು ಹಸಿರು ಬಣ್ಣದ ಎಲೆಗಳು, ಹೊಳೆಯುತ್ತಿರುತ್ತವೆ; ಚಿಗುರೆಲೆಗಳ ಅಗಲ 0.5 ಇಂಚು ; ಸಣ್ಣ ಮುಳ್ಳುಗಳು ತೊಟ್ಟುಗಳ ಸಾಲಿನಲ್ಲಿರುತ್ತವೆ; ಎಲೆಯ ಬುಡಗಳು ಭದ್ರವಾಗಿರುತ್ತವೆ. ನೆಟ್ಟಗಿರುವ ಕಂದು ಬಣ್ಣದ ಪುರುಷ ಶಂಕುಗಳು, 2 ಅಡಿ ಉದ್ದ, 5 ಇಂಚು ದಪ್ಪವಿರುತ್ತವೆ, ಹೆಣ್ಣು ಶಂಕುಗಳು ಎಲೆಯಂತಿರುತ್ತವೆ, ಪ್ರತಿ ಸ್ಪೊರೊಫಿಲ್ ಅಂಚುಗಳಲ್ಲಿ 6-10 ದೊಡ್ಡ ಅಂಡಾಣುಗಳನ್ನು ಹೊಂದಿರುತ್ತದೆ. ಬಲಿತ ಬೀಜಗಳ ವ್ಯಾಸ 2.5 ಇಂಚು, ನಣುಪಾಗಿ, ಕಿತ್ತಳೆ ಬಣ್ಣದಲ್ಲಿರುತ್ತವೆ.