ಡಾಲ್ಬರ್ಜಿಯಾ ಲ್ಯಾಟಿಫೋಲಿಯಾ ರಾಕ್ಸ್ಬ್

ಕನ್ನಡದ ಹೆಸರು : ಬೀಟೆ ಮರ
ಸಾಮಾನ್ಯ ಹೆಸರು : ಇಂಡಿಯನ್ ರೋಸ್ವುಡ್
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಡಾಲ್ಬರ್ಜಿಯಾ ಲ್ಯಾಟಿಫೋಲಿಯಾ ರಾಕ್ಸ್ಬ್
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಬೇಧ್ಯ
ಹೂಬಿಡುವ ಅವಧಿ: ಡಿಸೆಂಬರ್ - ಮಾರ್ಚ್
ಹಣ್ಣಾಗುವ ಅವಧಿ: ಜನವರಿ - ಏಪ್ರಿಲ್
ಮೂಲ: ಭಾರತದ ಉಪಖಂಡ

ಉಪಯೋಗಗಳು

ಇದರ ಮರವನ್ನು ಪ್ರೀಮಿಯಂ ಪೀಠೋಪಕರಣಗಳ ತಯಾರಿಕೆಯಲ್ಲಿ ಮತ್ತು ಕಾರ್ಪೆಂಟರಿಯಲ್ಲಿ ಉಪಯೋಗಿಸಲಾಗುತ್ತದೆ. ಗಿಟಾರ್ ಗಳು, ಮತ್ತು ಫ್ರೆಟ್‌ಬೋರ್ಡ್‌ಗಳು, ವಿನೂತನವಾದ ವೆನೀರ್ಗಳು, ಕೆತ್ತನೆಗಳು, ದೋಣಿಗಳು, ಹಿಮಹಾವುಗೆಗಳನ್ನು ತಯಾರಿಸಲು ಮತ್ತು ಮರು ಅರಣ್ಯೀಕರಣಕ್ಕಾಗಿ ಬಳಸಲಾಗುತ್ತದೆ. ಅತಿಸಾರ, ಹುಳುಗಳು, ಅಜೀರ್ಣ ಮತ್ತು ಕುಷ್ಠರೋಗಗಳಿಗೆ ಅಗತ್ಯವಾದ ಔಷಧಗಳನ್ನು ತೊಗಟೆಯಲ್ಲಿರುವ ಟ್ಯಾನಿನ್‌ಗಳಿಂದ ತಯಾರಿಸಲಾಗುತ್ತದೆ.

ವಿವರಣೆ

25 ಮೀ ಎತ್ತರದವರೆಗೆ ಇರುವ ಡೆಸಿಡುಅಸ್ ಮರ. ನುಣ್ಣನೆಯ ದಪ್ಪ ತೊಗಟೆ ಬೂದು ಬಣ್ಣದಲ್ಲಿರುತ್ತದೆ, ಕ್ರಮವಿಲ್ಲದೆ ಇರುವ ಹೊಳೆವ ಹಳದಿಯಿಂದ ಹಳದಿ-ಕಂದು.ಬಣ್ಣದ ಬಿರುಕುಗಳಿರುತ್ತವೆ. ಎಲೆಗಳು ಇಂಪಾರಿಪಿನ್ನೇಟ್, ಅಪರೂಪವಾಗಿ 1-ಫೋಲಿಯೇಟ್, ಆಲ್ಟರ್ನೇಟ್, ಪುಲ್ವಿನೇಟ್; ಚಿಗುರೆಲೆಗಳು 3-9, ಆಲ್ಟರ್ನೇಟ್ , ಒರ್ಬಿಕುಲಾರ್ , ರೋಮರಹಿತ, ಕೊರಿಯೇಸಿಯಸ್ ಆಗಿರುತ್ತವೆ, ಬುಡ ಚೂಪಾಗಿರುತ್ತದೆ ಅಥವಾ ಬಹಳ ವಿರಳವಾಗಿ ಟ್ರಂಕೇಟ್ ಆಗಿರುತ್ತದೆ, ತುದಿ ಮೊಂಡು ಅಥವಾ ಇಮಾರ್ಜಿನೇಟ್ ಆಗಿರುತ್ತದೆ , ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಅಕ್ಷಾಕಂಕುಳಿನ ಪ್ಯಾನಿಕಲ್ಸ್. ಬಿಳಿಯಾದ ದ್ವಿಲಿಂಗಿ ಹೂವುಗಳು, 5-6 ಮಿಮೀ ಉದ್ದವಿರುತ್ತವೆ. ಹಣ್ಣು 7.5 ಸೆಂ.ಮೀ.ವರೆಗಿನ ಒಬ್ಲಾಂಗ್ -ಲ್ಯಾನ್ಸಿಲೇಟ್, ಮೊಂಡು ತುದಿಯ, ಬಿರಿಯದ ಪಾಡ್ ; ರೆನಿಫಾರ್ಮ್ ನ ಕಂದು ಬಣ್ಣದ 1 -4 ಬೀಜಗಳಿರುತ್ತವೆ.