ಡಾಲ್ಬರ್ಜಿಯಾ ಮೆಲನೋಕ್ಸಿಲಾನ್ ಗಿಲ್. & ಪೆರ್.

ಕನ್ನಡದ ಹೆಸರು : -
ಸಾಮಾನ್ಯ ಹೆಸರು : ಆಫ್ರಿಕನ್ ಬ್ಲಾಕ್ವುಡ್
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು :
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ಅಪಾಯದ ಅಂಚಿನಲ್ಲಿದೆ
ಹೂಬಿಡುವ ಅವಧಿ:
ಹಣ್ಣಾಗುವ ಅವಧಿ:
ಮೂಲ: ಆಫ್ರಿಕಾ

ಉಪಯೋಗಗಳು

.ಸಾಂಪ್ರದಾಯಿಕ ನಾಟಿ ಔಷಧಿಗಳಲ್ಲಿ ಬೇರುಗಳನ್ನು ಕಿಬ್ಬೊಟ್ಟೆಯ ನೋವು, ಅತಿಸಾರ ಮತ್ತು ಸಿಫಿಲಿಸ್ ಚಿಕಿತ್ಸೆಗಾಗಿ ಬಳಸಲಾಗುತ್ತದೆ; ತಲೆನೋವು ಮತ್ತು ಬ್ರಾಂಕೈಟಿಸ್ ಚಿಕಿತ್ಸೆಯಲ್ಲಿ ಮರದ ಹೊಗೆಯನ್ನು ಇನ್ ಹೇಲ್ ಮಾಡಿಸಲಾಗುತ್ತದೆ

ವಿವರಣೆ

ಇದು ಮುಳ್ಳುಗಳಿರುವ, ಡೆಸಿಡುಅಸ್ ಪೊದೆಸಸ್ಯ ಅಥವಾ ಮರವಾಗಿದ್ದು, 5-12 ಮೀ ಎತ್ತರವನ್ನು ತಲುಪುತ್ತದೆ, ಕೆಲವೊಮ್ಮೆ 30 ಮೀ ವರೆಗೆ ಬೆಳೆಯುವ ಈ ಮರದ ತೊಗಟೆ ಬೂದು ಬಣ್ಣದ್ದಾಗಿರುತ್ತದೆ, ಅದರ ಹಾರ್ಟ್‌ವುಡ್ ನೇರಳೆ-ಕಂದು ಬಣ್ಣದಿಂದ ಕಪ್ಪು ಬಣ್ಣದಲ್ಲಿರುತ್ತದೆ.ಪಿನ್ನೇಟ್ಲಿ ಕಾಂಪೌಂಡ್ ಎಲೆಗಳು 8 – 20 ಸೆಂ.ಮೀ. ಉದ್ದವಿರುತ್ತವೆ. 8-12 ಅಥವಾ ಹೆಚ್ಚಿನ ಚಿಗುರೆಲೆಗಳು; ಚಿಗುರೆಲೆಗಳು ವೃತ್ತಾಕಾರದಿಂದ ಒಟ್ಟಾರೆ ಎಲಿಪ್ಟಿಕ್ ಅಥವಾ ಒಬೊವೇಟ್ ಆಗಿದ್ದು, ರೋಮರಹಿತವಾಗಿರುತ್ತವೆ, ಕೆಳಭಾಗ ಸ್ವಲ್ಪ ಪ್ಯೂಬೆಸೆಂಟ್ ಆಗಿರುತ್ತವೆ, ಬುಡ ಸ್ವಲ್ಪ ಕಾರ್ಡೇಟ್ ಅಥವಾ ಕ್ಯೂನಿಟ್ ಆಗಿರುತ್ತವೆ, ಇಮಾರ್ಜಿನೇಟ್ ಅಥವಾ ರಿಟ್ಯೂಸ್ ಆದ ತುದಿ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಒಂದು ತುದಿ ಅಥವಾ ಅಕ್ಷಾಕಂಕುಳಿನ ಪ್ಯಾನಿಕ್ಲ್. ಪರಿಮಳಭರಿತ ಬಿಳಿ ಹೂವುಗಳು, 3.5-5 ಮಿಮೀ ಉದ್ದವಿರುತ್ತವೆ. ಹಣ್ಣು 3-7 ಸೆಂ.ಮೀ ಉದ್ದದ, ಎಲಿಪ್ಟಿಕ್ – ಒಬ್ಲಾಂಗ್ , ರೋಮರಹಿತವಾದ, 1-3 ಬೀಜಗಳನ್ನು ಒಳಗೊಂಡಂತಹ ಒಂದು ಪಾಡ್.