ಕನ್ನಡದ ಹೆಸರು : | ಕೆಂಪುಕೆಂಜಿಗ, ಕೆಂಪು ತೋರ |
ಸಾಮಾನ್ಯ ಹೆಸರು : | ಗುಲ್ಮೊಹರ್ |
ಕುಟುಂಬದ ಹೆಸರು : | ಫ್ಯಾಬೇಸಿ |
ವೈಜ್ಞಾನಿಕ ಹೆಸರು : | ಡೆಲೋನಿಕ್ಸ್ ರೆಜಿಯಾ (ಬೋಜರ್ ಎಕ್ಸ್ ಹುಕ್.) ರಾಫ್ |
ಪ್ರಭೇದದ ಪ್ರಕಾರ: | ವಿದೇಶೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ಕನಿಷ್ಠ ಕಾಳಜಿ |
ಹೂಬಿಡುವ ಅವಧಿ: | ಏಪ್ರಿಲ್ - ಜುಲೈ |
ಹಣ್ಣಾಗುವ ಅವಧಿ: | ಜೂನ್ - ಆಗಸ್ಟ್ |
ಮೂಲ: | ಮಡಗಾಸ್ಕರ್ |
ಬಟ್ಟೆ ಉದ್ಯಮ ಮತ್ತು ಆಹಾರ ಉದ್ಯಮಗಳಲ್ಲಿ ಬಳಸಬಹುದಾದ ಅಂಟು(ಗಮ್) ಇದರ ಬೀಜಗಳಲ್ಲಿದೆ. ಇದನ್ನು ಮುಖ್ಯವಾಗಿ ಅಲಂಕಾರಿಕ ಮರವಾಗಿ ಪರಿಗಣಿಸಲಾಗುತ್ತದೆ. ಇದನ್ನು ಹೆಚ್ಚಾಗಿ ರಸ್ತೆಯ ಬದಿ ಸಾಲುಮರವಾಗಿ ಮತ್ತು ಉದ್ಯಾನಗಳಲ್ಲಿ ನೆಡಲಾಗುತ್ತದೆ
30 ಮೀ ಎತ್ತರದವರೆಗೆ ಇರುವ, ದೊಡ್ಡ ಡೆಸಿಡುಅಸ್ ಮರ. ಬೂದು-ಕಂದು ಬಣ್ಣದ ತೊಗಟೆ, ಎದ್ದುಕಾಣುವ ಗುಬಟೆಗಳೊಂದಿಗೆ ಒರಟಾಗಿರುತ್ತದೆ. 60 ಸೆಂ.ಮೀ.ವರೆಗಿನ ಉದ್ದದ . ಬೈಪಿನ್ನೇಟ್ ಎಲೆಗಳು, 11-18 ಜೋಡಿ ಉಪಪರ್ಣಗಳು, 20-30 ಜೋಡಿಗಳಲ್ಲಿ ಚಿಗುರೆಲೆಗಳು. ಚಿಗುರೆಲೆಗಳು ಆಪೋಸಿಟ್, ಒಬ್ಲಾಂಗ್, ಸಾಮಾನ್ಯವಾಗಿ ಸಿರೆಗಳ ಉದ್ದಕ್ಕೂ ಮೃದು ತುಪ್ಪಳವಿರುತ್ತದೆ, ಓರೆಯಾದ ಬುಡ, ಚೂಪಾದ ತುದಿ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿಯು ತುದಿಯ ಅಥವಾ ಅಕ್ಷಾಕಂಕುಳಿನಲ್ಲಿರುವ ಕೋರಿಂಬೋಸ್ ರೆಸೀಮ್., 7-10 ಸೆಂ ವ್ಯಾಸದ, ಹೂವುಗಳು ಹೊಳೆಯುವ ಕೆಂಪು ಬಣ್ಣದಿಂದ ಕಿತ್ತಳೆ-ಕೆಂಪು ಬಣ್ಣದಲ್ಲಿರುತ್ತವೆ, ಕೆಂಪುಬಣ್ಣದ ಕೇಸರಗಳಿರುತ್ತವೆ. ಹಣ್ಣು ಒಟ್ಟಾರೆ ಗೆರೆಯಂತಿರುವ, 30-50 ಸೆಂ.ಮೀ ಉದ್ದನೆಯ.ಸ್ವಲ್ಪ ಡೊಂಕಾದ,ಒತ್ತಿದಂತಿರುವ ಒಂದು ಪಾಡ್, ಬಲಿತಾಗ ಕಂದು ಬಣ್ಣದಿಂದ ಕಪ್ಪು ಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತದೆ. 20-40,ಮಚ್ಚೆಗಳಿರುವ ಬೀಜಗಳಿರುತ್ತವೆ.