ಡಿಮೋಕಾರ್ಪಸ್ ಲಾಂಗನ್ ಲೌರ್.

ಕನ್ನಡದ ಹೆಸರು : ಕೆಂದಾಲ, ಕಣೇಕೆಂದಾಲ
ಸಾಮಾನ್ಯ ಹೆಸರು : ಲಾಂಗನ್ ಮರ
ಕುಟುಂಬದ ಹೆಸರು : ಸಪಿಂಡೇಸಿ
ವೈಜ್ಞಾನಿಕ ಹೆಸರು : ಡಿಮೋಕಾರ್ಪಸ್ ಲಾಂಗನ್ ಲೌರ್.
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ಅಪಾಯದ ಅಂಚಿನಲ್ಲಿದೆ
ಹೂಬಿಡುವ ಅವಧಿ: ಡಿಸೆಂಬರ್
ಹಣ್ಣಾಗುವ ಅವಧಿ: ಜೂನ್- ಜುಲೈ
ಮೂಲ: ಉಷ್ಣವಲಯದ ಏಷ್ಯಾ, ಚೀನಾ

ಉಪಯೋಗಗಳು

.ಹಣ್ಣಿನ ತಿರುಳನ್ನು ಜಠರಾಗ್ನಿ ವರ್ಧಕ, ಜ್ವರ ಶಾಮಕ ಮತ್ತು ವರ್ಮಿಫ್ಯೂಜ್ ಆಗಿ ಬಳಸಲಾಗುತ್ತದೆ ಮತ್ತು ಇದನ್ನು ಒಂದು ಆಂಟಿಡೋಟ್ ಎಂದು ಪರಿಗಣಿಸಲಾಗುತ್ತದೆ. ಒಣಗಿಸಿದ ತಿರುಳಿನ ಕಷಾಯವನ್ನು ಟಾನಿಕ್ ಆಗಿ ನಿದ್ರಾಹೀನತೆ ಮತ್ತು ನರದೌರ್ಬಲ್ಯಯದ ಸಮಸ್ಯೆಗೆ ತೆಗೆದುಕೊಳ್ಳಲಾಗುತ್ತದೆ.

ವಿವರಣೆ

. 25 ಮೀ ಎತ್ತರದವರೆಗೆ ಇರುವ,ನಿತ್ಯಹರಿದ್ವರ್ಣ ಮರಗಳು.ಎಲೆಗಳು ಪಿನೇಟ್, ಆಲ್ಟರ್ನೇಟ್ ಆಗಿರುತ್ತವೆ, 3-6 ಜೋಡಿ ಚಿಗುರೆಲೆಗಳು,ಒಬ್ಲಾಂಗ್ -ಎಲಿಪ್ಟಿಕ್ ನಿಂದ ಒಬ್ಲಾಂಗ್ ಲ್ಯಾನ್ಸಿಲೇಟ್ ಆಗಿದ್ದು, ರೋಮರಹಿತವಾಗಿರುತ್ತವೆ,ಒಟ್ಟಾರೆಯಾಗಿ ಬುಡ ಕ್ಯೂನಿಯೇಟ್ ನಿಂದ ಟ್ರಂಕೇಟ್ ಆಗುತ್ತದೆ, ತುದಿ ಚೂಪು, ಕೆಲವೊಮ್ಮೆ ಮೊಂಡಾಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಟರ್ಮಿನಲ್ ಅಥವಾ ಅಕ್ಷಾಕಂಕುಳಿನ ಪ್ಯಾನಿಕಲ್ಸ್. ಪಾಲಿಗ್ಯಾಮಸ್ ಹೂವುಗಳು ಹಳದಿ-ಬಿಳಿ ಬಣ್ಣದಲ್ಲಿರುತ್ತವೆ. ಹಣ್ಣು 1.5 ಸೆಂ.ಮೀ. ಅಗಲವಿರುವ, ಗೋಳಾಕಾರದ,ಗುಬುಟುಗಳಿರುವ, ಕೆಂಪು – ಕಂದು ಬಣ್ಣದ ಸ್ಕಿಜೋಕಾರ್ಪ್ (ಭಿದುರುಹಣ್ಣು). ಬೀಜ 1, ಕಪ್ಪು ಬೀಜವಿದ್ದು , ಅದು ತಿರುಳಿರುವ ಬೀಜವೇಷ್ಟಿ ಯಿಂದ (ಅರಿಲ್‌) ಮುಚ್ಚಲ್ಪಟ್ಟಿರುತ್ತದೆ.