ಐಲಾಂತಸ್ ಟ್ರಿಫಿಸಾ (ಡೆನ್ಸ್ಟ್.) ಅಲ್ಸ್ಟನ್

ಕನ್ನಡದ ಹೆಸರು : ಬಗ್ಗದ ಧೂಪ, ಹಾಳುಮಡ್ಡಿ
ಸಾಮಾನ್ಯ ಹೆಸರು : ಮಲಬಾರ್ ಟ್ರೀ ಆಫ್ ಹೆವನ್
ಕುಟುಂಬದ ಹೆಸರು : ಸಿಮರೂಬೇಸಿ
ವೈಜ್ಞಾನಿಕ ಹೆಸರು : ಐಲಾಂತಸ್ ಟ್ರಿಫಿಸಾ (ಡೆನ್ಸ್ಟ್.) ಅಲ್ಸ್ಟನ್
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಜನವರಿ - ಮೇ
ಹಣ್ಣಾಗುವ ಅವಧಿ: ಜನವರಿ - ಮೇ
ಮೂಲ: ಭಾರತೀಯ ಉಪಖಂಡ, ಆಸ್ಟ್ರೇಲಿಯಾ

ಉಪಯೋಗಗಳು

ತೊಗಟೆ ಮತ್ತು ಎಲೆಗಳು ಟಾನಿಕ್ ಎಂದು ಪ್ರಸಿದ್ಧವಾಗಿವೆ, ವಿಶೇಷವಾಗಿ ಹೆರಿಗೆಯ ನಂತರದ ದೌರ್ಬಲ್ಯದಲ್ಲಿ, ಅವು ಜ್ವರನಿವಾರಕ ಗುಣಲಕ್ಷಣಗಳನ್ನು ಹೊಂದಿವೆ ಮತ್ತು ಡಿಸ್ಪೆಪ್ಟಿಕ್ ಸಮಸ್ಯೆಗಳಿಗೆ ಉಪಯುಕ್ತವಾಗಿವೆ.

ವಿವರಣೆ

.30 ಮೀ ವರೆಗಿನ ಎತ್ತರದ, ಮಧ್ಯಮ ಗಾತ್ರದಿಂದ ದೊಡ್ಡ ಗಾತ್ರದ ಮರ. ಎಲೆಗಳು ಇಂಪ್ಯಾರಿಪಿನೇಟ್, ಆಲ್ಟರ್ನೇಟ್. ಆಗಿದ್ದು ಶಾಖೆಗಳ ತುದಿಯ ಕಡೆಗೆ ಕಿಕ್ಕಿರಿದಿರುತ್ತವೆ, ಎಸ್ಟಿಪ್ಯುಲೇಟ್, ಒಬ್ಲಾಂಗ್ - ಒವೇಟ್, ಒಬ್ಲಾಂಗ್-ಲ್ಯಾನ್ಸಿಲೇಟ್ ಅಥವಾ ಎಲಿಪ್ಟಿಕ್ ನಿಂದ ಲ್ಯಾನ್ಸಿಲೇಟ್, ಓರೆಯಾದ ಬುಡ, ಅಕ್ಯೂಟ್ ಅಥವಾ ಅಕ್ಯುಮಿನೇಟ್ ಆದ ತುದಿ, ಅಂಚು ಸಂಪೂರ್ಣವಾಗಿರುತ್ತದೆ. ಹಿಂದಕ್ಕೆ ಸುರಳಿ ಸುತ್ತಿದ್ದು (ರೆವಲ್ಯೂಟ್) , ರೋಮರಹಿತ, ಚರ್ಮದಂತಿರುತ್ತದೆ.ಪಾಲಿಗ್ಯಾಮಸ್ ಆಗಿರುವ ಹಸಿರು-ಹಳದಿ ಹೂವುಗಳು, , ಕವಲುಮೂಲೆಯಲ್ಲಿನ ಹೂ ಗೊಂಚಲುಗಳಲ್ಲಿರುತ್ತವೆ. ಎದ್ದು ಕಾಣುವ ವೇನ್ಗಳಿರುವ ಈ ಸಮರ (ರೆಕ್ಕೆಯಿರುವ ಬೀಜದ)ಹಣ್ಣು ತಿರುಚಿರುವುದಿಲ್ಲ, ದುಂಡಗಿನ ತುದಿಗಳಿರುವ ಇದು ಕೆಂಪು-ಕಂದು ಬಣ್ಣದ್ದಾಗಿರುತ್ತದೆ.