ಕನ್ನಡದ ಹೆಸರು : | - |
ಸಾಮಾನ್ಯ ಹೆಸರು : | tವೆಲ್ವೆಟ್ ಆಪಲ್, ಬೆಣ್ಣೆ ಹಣ್ಣು |
ಕುಟುಂಬದ ಹೆಸರು : | ಎಬೆನೇಸಿ |
ವೈಜ್ಞಾನಿಕ ಹೆಸರು : | ಡಯೋಸ್ಪೈರೋಸ್ ಡಿಸ್ಕೊಲರ್ A. DC. |
ಪ್ರಭೇದದ ಪ್ರಕಾರ: | ವಿದೇಶೀಯ |
ಪ್ರಕೃತಿ ಶಾಸ್ತ್ರ : | ನಿತ್ಯಹರಿದ್ವರ್ಣ |
ಸಂರಕ್ಷಣೆಯ ಸ್ಥಿತಿ : | ತಿಳಿದಿಲ್ಲ |
ಹೂಬಿಡುವ ಅವಧಿ: | |
ಹಣ್ಣಾಗುವ ಅವಧಿ: | |
ಮೂಲ: | ತೈವಾನ್ |
. ಎಳೆಯ ಎಲೆಗಳ ಕಷಾಯವನ್ನು ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆಗಳು ಮತ್ತು ಮಧುಮೇಹದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಮಾಗದ ಹಣ್ಣಿನ ರಸ ಆಸ್ಟಿಂಜೆಂಟಾಗಿದೆ. ಇದನ್ನು ಗಾಯಗಳನ್ನು ತೊಳೆಯಲು ಬಳಸಲಾಗುತ್ತದೆ.
.30ಮೀ ಎತ್ತರದವರೆಗಿನ ದೊಡ್ಡ, ನಿತ್ಯಹರಿದ್ವರ್ಣ, ಡೈಯೋಷಿಯಸ್ ಮರಗಳು. ಕೊಂಬೆಗಳು ಆರಂಭದಲ್ಲಿ ಪ್ಯೂಬೆಸೆಂಟ್ ಆಗಿರುತ್ತವೆ. ಎಲೆಗಳು ಸರಳ, ಆಲ್ಟರ್ನೇಟ್ , ಒಬ್ಲಾಂಗ್ -ಲ್ಯಾನ್ಸಿಲೇಟ್, ಕೊರಿಯೇಸಿಯಸ್, ಮೇಲೆ ಗಾಲ್ಬ್ರಸ್, ಕೆಳಗೆ ಪ್ಯೂಬೆಸೆಂಟ್ ಆಗಿರುತ್ತವೆ, ಬುಡ ಚೂಪು, ದುಂಡು ಅಥವಾ ಸಬ್ ಕಾರ್ಡೇಟ್ ಆಗಿರುತ್ತದೆ, ತುದಿ ಚೂಪು ಅಥವಾ ಅಪರೂಪವಾಗಿ ಮೊಂಡು, ಅಂಚು ರೆವಲೂಟ್ ಆಗಿರುತ್ತದೆ. ಗಂಡು ಹೂವುಗಳು ಅಕ್ಷಾಕಂಕುಳಿನ ಸೈಮೋಸ್ ಹೂಗೊಂಚಲುಗಳಲ್ಲಿರುತ್ತವೆ. ಕೂದಲುಳ್ಳ ಹೆಣ್ಣು ಹೂವುಗಳು ಒಂಟಿಯಾಗಿರುತ್ತವೆ. ಹೂವುಗಳು ಹಳದಿ-ಹಸಿರು ಬಣ್ಣದಲ್ಲಿರುತ್ತವೆ. ಹಣ್ಣು, ಗೋಳಾಕಾರದ, ಲಘುವಾಗಿ ಚಪ್ಪಟೆಯಾದ, ದಟ್ಟವಾದ ಕೆಂಪು ಕೂದಲುಗಳಿರುವ, ಬಿಳಿ ತಿರುಳಿನಿಂದ ಕೂಡಿದಂತಹ ಒಂದು ಬೆರ್ರಿ. ಹಣ್ಣು ಮಾಗಿದಾಗ ಕೆಂಪು ಬಣ್ಣ ಪಡೆಯುತ್ತದೆ.