ಡಯೋಸ್ಪೈರೋಸ್ ಮಲಬಾರಿಕಾ (ಡೆಸರ್.) ಕೋಸ್ಟೆಲ್.

ಕನ್ನಡದ ಹೆಸರು : ಹೊಲಿತುಪರೆ
ಸಾಮಾನ್ಯ ಹೆಸರು : ಗೌಬ್ ಮರ, ಮಲಬಾರ್ ಎಬೊನಿ
ಕುಟುಂಬದ ಹೆಸರು : ಎಬೆನೇಸಿ
ವೈಜ್ಞಾನಿಕ ಹೆಸರು : ಡಯೋಸ್ಪೈರೋಸ್ ಮಲಬಾರಿಕಾ (ಡೆಸರ್.) ಕೋಸ್ಟೆಲ್.
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಮೇ - ಜೂನ್
ಹಣ್ಣಾಗುವ ಅವಧಿ: ಮಾರ್ಚ್ - ಏಪ್ರಿಲ್ (ಮುಂದಿನ ವರ್ಷ)
ಮೂಲ: ಭಾರತದ ಉಪಖಂಡ, ಆಗ್ನೇಯ ಏಷ್ಯಾ

ಉಪಯೋಗಗಳು

ತೊಗಟೆ, ಎಲೆಗಳು, ಹೂವುಗಳು ಮತ್ತು ಹಣ್ಣುಗಳನ್ನು ಆಯುರ್ವೇದ ಔಷಧದಲ್ಲಿ ಹೆಚ್ಚು ಬಳಸಲಾಗುತ್ತದೆ. ಪಿತ್ತವಿಕಾರದ ಜ್ವರಗಳ ಚಿಕಿತ್ಸೆಗೆ ತಾಜಾ ತೊಗಟೆಯ ರಸ ಉಪಯುಕ್ತವಾಗಿದೆ. ಬೀಜಗಳನ್ನು ಅತಿಸಾರ ಮತ್ತು ದೀರ್ಘಕಾಲದ ಭೇದಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತದೆ.

ವಿವರಣೆ

.35 ಮೀ ಎತ್ತರದವರೆಗೆ ಇರುವ ನಿತ್ಯಹರಿದ್ವರ್ಣ,ಡೈಈಷಸ್ ಮರ. ತೊಗಟೆ ಕಪ್ಪುಬಣ್ಣದಲ್ಲಿದ್ದು , ನಯವಾಗಿರುತ್ತದೆ ಮತ್ತು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಒಳ ತೊಗಟೆ ನೀಲಿ ಬಣ್ಣಕ್ಕೆ ತಿರುಗುತ್ತದೆ. ಎಲೆಗಳು ಸರಳ, ಆಲ್ಟರ್ನೇಟ್ ಅಥವಾ ಸಬ್-ಆಪೋಸಿಟ್ , ಒಬ್ಲಾಂಗ್ -ಲ್ಯಾನ್ಸ್ಲೇಟ್, ರೋಮರಹಿತ, ಚೂಪು ಅಥವಾ ಮೊಂಡಾಗಿರುತ್ತವೆ. ಹೂವುಗಳು ಏಕಲಿಂಗಿಯಾಗಿರುತ್ತವೆ, ಗಂಡು ಹೂವುಗಳು ಎಲೆಯ ಅಕ್ಷಗಳಲ್ಲಿ(ಕವಲು ಮೂಲೆಗಳಲ್ಲಿ) 3-5 ಹೂವಿನ ಸೈಮ್‌ಗಳಲ್ಲಿ ರೂಪುಗೊಳ್ಳುತ್ತವೆ; ಹೆಣ್ಣು ಹೂವುಗಳು ಒಂಟಿಯಾಗಿರುತ್ತವೆ.ಹಣ್ಣು, ಗೋಳಾಕಾರದ, ಅಂಟಿನಂತಹ ತಿರುಳಿರುವ, ಹಣ್ಣಾದಾಗ ಹಳದಿ ಬಣ್ಣ ಪಡೆಯುವ ಒಂದು ಬೆರ್ರಿ ; 4-8 ಬೀಜಗಳಿದ್ದು, ಒತ್ತಿದಂತಿರುತ್ತದೆ.